India vs England:ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900ನೇ ವಿಕೆಟ್​ ಪಡೆದ ಆಂಡರ್ಸನ್​.. ಯಾವೆಲ್ಲಾ ದಾಖಲೆಗಳು ಸೃಷ್ಟಿಯಾದವು ಗೊತ್ತಾ?

India vs England: ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ಜೇಮ್ಸ್ ಆಂಡರ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್ ಕಬಳಿಸಿದ ಮೊದಲ ಇಂಗ್ಲಿಷ್ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

India vs England:ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900ನೇ ವಿಕೆಟ್​ ಪಡೆದ ಆಂಡರ್ಸನ್​.. ಯಾವೆಲ್ಲಾ ದಾಖಲೆಗಳು ಸೃಷ್ಟಿಯಾದವು ಗೊತ್ತಾ?
ಜೇಮ್ಸ್ ಆಂಡರ್ಸನ್
Follow us
ಪೃಥ್ವಿಶಂಕರ
|

Updated on:Mar 05, 2021 | 2:53 PM

ಅಹಮದಾಬಾದ್‌: ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅಜಿಂಕ್ಯ ರಹಾನೆ ಅವರನ್ನು ಔಟ್ ಮಾಡುವ ಮೂಲಕ ಜೇಮ್ಸ್ ಆಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್ ಕಬಳಿಸಿದ ಮೊದಲ ಇಂಗ್ಲಿಷ್ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 900 ವಿಕೆಟ್‌ಗಳ ಗಡಿ ದಾಟಿದ ಮೂರನೇ ವೇಗದ ಬೌಲರ್​ ಆಂಡರ್ಸನ್ ಆಗಿದ್ದಾರೆ.

2 ನೇ ದಿನದ ಊಟದ ವಿರಾಮಕ್ಕೂ ಸ್ವಲ್ಪ ಮುಂಚೆಯೇ ಆಂಡರ್ಸನ್ ರಹಾನೆ ಅವರನ್ನು ಔಟ್ ಮಾಡಿದರು. ಇದಕ್ಕೂ ಮುಂಚೆ ದಿನದ ಆರಂಭದಂದು ಆಂಡರ್ಸನ್, ಟೀಂ ಇಂಡಿಯಾದ ಓಪನರ್ ಶುಭ್​ಮನ್ ಗಿಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಗಿಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಆಂಡರ್ಸನ್, ಎದುರಾಳಿ ತಂಡದ ಆಟಗಾರರನ್ನು ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟ್​ ಮಾಡಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್​ ಗ್ಲೆನ್ ಮೆಕ್‌ಗ್ರಾತ್‌ ಅವರ ದಾಖಲೆಯನ್ನು ಸರಿಗಟ್ಟಿದ್ದರು.

​ಟೆಸ್ಟ್‌ನಲ್ಲಿ 613 ವಿಕೆಟ್‌, ಏಕದಿನ ಪಂದ್ಯಗಳಲ್ಲಿ 269 ಮತ್ತು ಟಿ20 ಯಲ್ಲಿ 18 ವಿಕೆಟ್‌ಗಳನ್ನು ಗಳಿಸಿರುವ 38 ವರ್ಷದ ಆಂಡರ್ಸನ್ ಈಗ ಮುಟ್ಟಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಗ್ಲೆನ್ ಮೆಕ್‌ಗ್ರಾತ್ ಮತ್ತು ವಾಸಿಮ್ ಅಕ್ರಮ್ ಅವರ ನಂತರ ಆರನೇ ಬೌಲರ್ ಆಗಿದ್ದಾರೆ.

ಲಕ್ಷ್ಮಣ್ ಮೆಚ್ಚುಗೆ ಭಾರತೀಯ ಪಿಚ್ ಕಂಡೀಶನ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರ ಅತ್ಯುತ್ತಮ ಪ್ರದರ್ಶನವನ್ನು ನಾನು ನೋಡುತ್ತಿದ್ದೇನೆ. ಕಳೆಯ ಚೆಂಡಿನಲ್ಲಿ ಅವರ ಮ್ಯಾಜಿಕ್ ಸ್ಪೆಲ್‌ಅನ್ನು ಚೆನ್ನೈನಲ್ಲಿ ನಾವು ನೋಡಿದ್ದೆವು. ಈಗ ಅಹ್ಮದಾಬಾದ್‌ನಲ್ಲಿ ಅವರ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಆವರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವುದು ನಿಜಕ್ಕೂ ಅದ್ಭುತವಾಗಿದೆ. ಮೊದಲ ಸ್ಪೆಲ್‌ನಲ್ಲಿ ರೋಹಿತ್ ಶರ್ಮಾಗೆ ಎಸೆತ ಇನ್‌ಸ್ವಿಂಗ್ ಎಸೆತಗಳು ಹಾಗೂ ಅಜಿಂಕ್ಯ ರಹಾನೆಗೆ ಎಸೆದ ಎಸೆತಗಳು ಅದ್ಭುತವಾಗಿದ್ದವು” ಎಂದು ಲಕ್ಷ್ಮಣ್ ವಿವರಿಸಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಟ್ವಿಟ್ಟರ್‌ನಲ್ಲಿ ಆಂಡರ್ಸನ್ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ. ಅಂಡರ್ಸನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಆಕಾಶ್ ಚೋಪ್ರ ತಮ್ಮ ಟ್ವೀಟ್‌ನಲ್ಲಿ ಸೂಚ್ಯವಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: India vs England: ಶೂನ್ಯಕ್ಕೆ ಔಟಾದ ಕೊಹ್ಲಿ! ಈ ಕೆಟ್ಟ ದಾಖಲೆಯಲ್ಲೂ ಧೋನಿಯನ್ನ ಸರಿಗಟ್ಟಿದ ಶೂನ್ಯ ಸಂಪಾದಕ ವಿರಾಟ್

Published On - 2:33 pm, Fri, 5 March 21

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು