ಅಹಮದಾಬಾದ್: ಪಿಂಕ್ ಬಾಲ್ ಟೆಸ್ಟ್ನಲ್ಲಿ, ಮೊದಲ ದಿನದ ಕೊನೆಯ ಸೆಷನ್ ಪ್ರಾರಂಭವಾಗಿದೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭಾರತದ ಪರ ಬ್ಯಾಟಿಂಗ್ಗೆ ಇಳಿದಿದ್ದಾರೆ. ಈಗಾಗಲೇ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 112 ರನ್‌ಗಳಿಗೆ ಆಲ್ಔಟ್ ಮಾಡಲಾಗಿದೆ. ಕ್ರೌಲಿ ಇಂಗ್ಲೆಂಡ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್ ಗಳಿಸಿದರು. ಟೀಂ ಇಂಡಿಯಾ ಪರ ಸ್ಥಳೀಯ ಆಟಗಾರ ಅಕ್ಷರ್ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಅಶ್ವಿನ್ 3 ಹಾಗೂ ಇಶಾಂತ್ 1 ವಿಕೆಟ್ ಪಡೆದು ಮಿಂಚಿದರು. ಹಗಲು ರಾತ್ರಿ ನಡೆಯುವ ಈ ಟೆಸ್ಟ್ ಎರಡೂ ತಂಡಗಳಿಗೆ ಮುಖ್ಯವಾಗಿದೆ. ಅಲ್ಲದೆ ವಿಶ್ವ ಟೆಸ್ಟ್ ಸರಣಿಯ ಫೈನಲ್‌ನಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದಲೂ ಈ ಪಂದ್ಯ ಬಹಳ ವಿಶೇಷವಾಗಿದೆ. ಇದು ಭಾರತಕ್ಕೆ ಮೂರನೇ ಪಿಂಕ್ ಬಾಲ್ ಟೆಸ್ಟ್ ಮತ್ತು ಇಂಗ್ಲೆಂಡ್‌ಗೆ ನಾಲ್ಕನೇ ಪಂದ್ಯವಾಗಿದೆ.
ಇಂದೇ ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆಯುತ್ತಾ ಭಾರತ?
ಮೊದಲನೇ ದಿನದ ಕೊನೆಯ ಸೆಷನ್ ಆಡುತ್ತಿರುವ ಭಾರತ, ಇಂಗ್ಲೆಂಡ್ ನೀಡಿರುವ ಅಲ್ಪ ಮೊತ್ತವನ್ನು ಇಂದೇ ಬೆನ್ನತ್ತಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಕೊನೆಯ ಸೆಷನ್ನಲ್ಲಿ ಇನ್ನೂ 2 ಗಂಟೆಗಳ ಆಟ ಬಾಕಿ ಇದ್ದು, ಇನ್ನೂ 20 ಓವರ್ಗಳ ಆಟವನ್ನು ಭಾರತ ಆಡಲಿದೆ. ಹಾಗೇನಾದರೂ ಆದಲ್ಲಿ ಉಳಿದಿರುವ 4 ದಿನಗಳ ಆಟದಲ್ಲಿ ಟೀಂ ಇಂಡಿಯಾ ಸಂಪೂರ್ಣವಾಗಿ ಇಂಗ್ಲೆಂಡ್ ಮೇಲೆ ಹಿಡಿತ ಸಾಧಿಸಲಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 400 ರನ್ಗಳ ಟಾರ್ಗೆಟ್ ನೀಡಿದಲ್ಲಿ, ಇಂಗ್ಲೆಂಡ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದಾಗಿದೆ.
ಮಿಂಚಿದ ಲೋಕಲ್ ಬಾಯ್ ಅಕ್ಷರ್..
ಆಡುತ್ತಿರುವ 2ನೇ ಪಂದ್ಯದಲ್ಲೇ ಮಿಂಚು ಹರಿಸಿರುವ ಸ್ಥಳೀಯ ಆಟಗಾರ ಅಕ್ಷರ್ ಪಟೇಲ್, ಇಂಗ್ಲೆಂಡ್ ತಂಡವನ್ನು ಅಲ್ಪ ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಆರಂಭದಿಂದಲೂ ಇಂಗ್ಲೆಂಡ್ ಆಟಗಾರರ ಮೇಲೆ ಹಿಡಿತ ಸಾಧಿಸಿದ ಅಕ್ಷರ್ ಪಟೇಲ್ ಪ್ರಮುಖ 6 ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ತಾನು ಬೌಲಿಂಗ್ ಆರಂಭಿಸಿದ ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದು ಇನ್ನೂ ವಿಶೇಷವಾಗಿತ್ತು. ಇಂಗ್ಲೆಂಡ್ ತಂಡದ ಪ್ರಮುಖ 6 ಆಟಗಾರರನ್ನು ಬಹುಬೇಗನೇ ಪೆವಿಲಿಯನ್ಗೆ ಕಳುಹಿಸುವಲ್ಲಿ ಯಶಸ್ವಿಯಾದ ಅಕ್ಷರ್ 2ನೇ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದರು.
Published On - 8:21 pm, Wed, 24 February 21