India vs England Test Series: ಅಶ್ವಿನ್ಗೆ ಸುಲಭ ತುತ್ತಾಗುತ್ತಿರುವ ಸ್ಟೋಕ್ಸ್ಗೆ ಮಾಜಿ ಕ್ಯಾಪ್ಟನ್ ನಾಸರ್ ಹುಸೇನ್ ಹಿತವಚನ
ಅಶ್ವಿನ್ ಅಮೋಘವಾದ ಲಯದಲ್ಲಿರುವುದನ್ನು ಸ್ಟೋಕ್ಸ್ ಮೊದಲು ಅರ್ಥಮಾಡಿಕೊಳ್ಳಬೇಕಿದೆ. ಗೊತ್ತುಗುರಿಯಿಲ್ಲದೆ ಅಶ್ವಿನ್ ವಿರುದ್ಧ ಆಕ್ರಮಣಕಾರಿ ಆಟವಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡುವುದು ಅಷ್ಟು ಸುಲಭವಾಗಿದ್ದರೆ, ವಿಶ್ವದ ಎಲ್ಲ ಎಡಗೈ ಬ್ಯಾಟ್ಸ್ಮನ್ಗಳು ಅದೇ ತಂತ್ರವನ್ನು ಅನುಸರಿಸುತ್ತಿದ್ದರು ಎಂದು ಹುಸ್ಸೇನ್ ಹೇಳಿದ್ದಾರೆ.
ಭಾರತ ಮೂಲದ ನಾಸ್ಸೆರ್ ಹುಸ್ಸೇನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ತಾವಾಡುತ್ತಿದ್ದ ದಿನಗಳಲ್ಲಿ ಉತ್ತಮ ಬ್ಯಾಟ್ಸ್ಮನ್ ಅಂತಲೂ ಹೆಸರು ಮಾಡಿದವರು. ಪ್ರಥಮ ದರ್ಜೆ ಕ್ರಿಕೆಟ್ನಿಂದ ರಿಟೈರಾದ ನಂತರ ಅವರು ಕಾಮೆಂಟೇಟರ್ ಅಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲೆಂಡ್ ತಂಡದ ಅಲ್-ರೌಂಡರ್ ಮತ್ತು ಟೀಮಿನ ಪ್ರಮುಖ ಆಟಗಾರರಾಗಿರುವ ಬೆನ್ ಸ್ಟೋಕ್ಸ್ ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅತಿಥೇಯರ ಚಾಂಪಿಯನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರಿಗೆ ಪದೇಪದೆ ವಿಕೆಟ್ ಒಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಹೇಗೆ ಎದುರಿಸಿ ಆಡಬೇಕೆನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಅಶ್ವಿನ್ ಪ್ರಸಕ್ತ ಸರಣಿಯಲ್ಲಿ ಅದ್ಭುತ ಫಾರ್ಮ್ನಲ್ಲಿದ್ದು ಚೆನೈಯಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ತಮ್ಮ ಕರೀಯರ್ನ 5ನೇ ಶತಕ ದಾಖಲಿಸುವುದರ ಜೊತೆಗೆ 29ನೇ ಬಾರಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದರು.
ಇಂಗ್ಲೆಂಡ್ನ ಜನಪ್ರಿಯ ದಿನಪತ್ರಿಕೆ ‘ಡೈಲಿ ಮೇಲ್’ಗೆ ಅಂಕಣ ಬರೆಯುವ ಹುಸ್ಸೇನ್, ಅಶ್ವಿನ್ ವಿರುದ್ಧ ಆಕ್ರಮಣಕಾರಿ ಆಟವಾಡುವ ತಂತ್ರ ಅನುಸರಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
‘ಅವರು (ಅಶ್ವಿನ್) ಅಮೋಘವಾದ ಲಯದಲ್ಲಿರುವುದನ್ನು ಸ್ಟೋಕ್ಸ್ ಮೊದಲು ಅರ್ಥಮಾಡಿಕೊಳ್ಳಬೇಕಿದೆ. ಗೊತ್ತು ಗುರಿಯಿಲ್ಲದೆ, ಅಂಧಾದುಂಧಿಯಾಗಿ ಅಶ್ವಿನ್ ವಿರುದ್ಧ ಆಕ್ರಮಣಕಾರಿ ಆಟವಾಡುವುದರಲ್ಲಿ ಅರ್ಥವಿಲ್ಲ. ಹಾಗೆ ಮಾಡುವುದು ಅಷ್ಟು ಸುಲಭವಾಗಿದ್ದರೆ, ವಿಶ್ವದ ಎಲ್ಲ ಎಡಗೈ ಬ್ಯಾಟ್ಸ್ಮನ್ಗಳು ಅದೇ ತಂತ್ರವನ್ನು ಅನುಸರಿಸುತ್ತಿದ್ದರು’ ಎಂದು ಹುಸ್ಸೇನ್ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.
‘ಹಾಗಂತ, ಸ್ಟೋಕ್ಸ್ ಹೊಡೆತಗಳನ್ನು ಆಡದೆ ಕೇವಲ ರಕ್ಷಣಾತ್ಮಕ ಆಟವಾಡುತ್ತಾ ಒಂದು ತುದಿಯಲ್ಲಿ ಭದ್ರವಾಗಿ ನಿಂತುಕೊಳ್ಳುವುದು ಕೂಡ ಸರಿಯಲ್ಲ. ಸ್ಟೋಕ್ಸ್ ಪ್ರತಿ ಎಸೆತಕ್ಕೂ ತಮ್ಮ ಬ್ಯಾಟನ್ನು ಉಪಯೋಗಿಸಬೇಕು. ಒಂದು ಪಕ್ಷ ಚೆಂಡು ಪಿಚ್ಚಿನ ರಫ್ ಭಾಗದಲ್ಲಿ ಬಿದ್ದು ಭಾರೀ ತಿರುವು ಪಡೆದುಕೊಂಡರೂ ಸ್ಟೋಕ್ಸ್ ಬ್ಯಾಟ್ನಿಂದಲೇ ಆಡಲು ಪ್ರಯತ್ನಿಸಬೇಕು. ಅಶ್ವಿನ್ ಅವರಲ್ಲಿ ವೈವಿಧ್ಯಮಯ ಎಸೆತಗಳಿರುವುದರಿಂದ ಎಲ್ಲ ಎಡಗೈ ಆಟಗಾರರು ಇದೇ ತಂತ್ರವನ್ನು ಅಳವಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಲಿದೆ’ ಎಂದು ಹುಸ್ಸೇನ್ ಹೇಳಿದ್ದಾರೆ.
‘ಸ್ಟೋಕ್ಸ್ ಸಮಸ್ಯೆಯೇನೆಂದರೆ ಅವರ ನೆಚ್ಚಿನ ಹೊಡೆತ ಸ್ಲಾಗ್ ಸ್ವೀಪ್ ಆಗಿದೆ. ಕಳೆದ ಆ್ಯಶಸ್ ಸರಣಿಯ ಹೆಡಿಂಗ್ಲೇ ಟೆಸ್ಟ್ ಪಂದ್ಯದಲ್ಲಿ ಅವರು ನೇಥನ್ ಲಿಯಾನ್ ವಿರುದ್ಧ ಆ ಹೊಡೆತವನ್ನು ಪರಿಣಾಮಕಾರಿಯಾಗಿ ಆಡಿ ಸಾಕಷ್ಟು ರನ್ಗಳಿಸಿದ್ದನ್ನು ನಾವು ನೋಡಿದ್ದೇವೆ. ಆದರೆ, ಭಾರತದಲ್ಲಿ ಅಶ್ವಿನ್ ವಿರುದ್ಧ ಆ ಹೊಡೆತ ಬಾರಿಸಿಸುವುದು ನಿಸ್ಸಂದೇಹವಾಗಿ ಅತ್ಯಂತ ಅಪಾಯಕಾರಿ.
‘ಸ್ಟೋಕ್ಸ್ ಸ್ಮಾರ್ಟ್ ಕ್ರಿಕೆಟರ್ ಅನ್ನುವುದು ನಿರ್ವಿವಾದಿತ. ಎರಡನೇ ಟೆಸ್ಟ್ನಲ್ಲಿ ಅವರು ಸ್ವೀಪ್ ಶಾಟ್ ಜಾಸ್ತಿ ಆಡಲಿಲ್ಲ. ಆದರೆ ಮೊದಲ ಟೆಸ್ಟ್ನಲ್ಲಿ ಅ ಹೊಡೆತವನ್ನು ಯಶಸ್ವಿಯಾಗಿ ಅಳವಡಿಸಿಕೊಂಡು 82 ರನ್ ಬಾರಿಸಿದರು. ಅಹಮದಾಬಾದಿನಲ್ಲಿ ಪಿಚ್ ನೈಜವಾಗಿ ವರ್ತಿಸಿದರೆ, ಅವರು ಸ್ವೀಪ್ ಶಾಟ್ಗಳನ್ನು ಆಡಬಹುದು’ ಎಂದು ಹುಸ್ಸೇನ್ ಹೇಳಿದ್ದಾರೆ.
‘ಸ್ವೀಪ್ ಹೊಡೆತವನ್ನು ಸ್ಟೋಕ್ಸ್ ಆಡದಿರಲು ನಿರ್ಧರಿಸಿದ್ದೇಯಾದರೆ ಅವರು ನೇರವಾಗಿ ಇಲ್ಲವೇ ಆಫ್-ಸೈಡ್ನಲ್ಲಿ ಆಡಬಹುದು. ಆದರೆ ಇದು ಅವರು ಅಶ್ವಿನ್ ವಿರುದ್ಧ ಇದುವರೆಗೆ ಅಳವಡಿಸಿರುವ ತಂತ್ರಕ್ಕೆ ತದ್ವಿರುದ್ಧವಾಗಿರಲಿದೆ. ಯಾಕೆಂದರೆ ಅವರು ಅಶ್ವಿನ್ ವಿರುದ್ಧ ಟೆಸ್ಟ್ಗಳಲ್ಲಿ ಇದುವರೆಗೆ ಗಳಿಸಿರುವ ರನ್ಗಳ ಪೈಕಿ ಶೇಕಡಾ 72ರಷ್ಟು ಲೆಗ್ಸೈಡ್ನಲ್ಲಿ ಬಂದಿವೆ’ ಎಂದು ಹುಸ್ಸೇನ್ ಹೇಳಿದ್ದಾರೆ.
ಕ್ರೀಸಿನಿಂದ ಹೊರಬಂದು ಹೊಡೆತಗಳನ್ನು ಬಾರಿಸಿವುದು ಸಹ ಸ್ಟೋಕ್ಸ್ಗೆ ಅಪಾಯಕಾರಿ ಆಗಲಿದೆ ಎಂದು ಹುಸ್ಸೇನ್ ಹೇಳಿದ್ದಾರೆ. ‘ಕ್ರೀಸಿನಿಂದ ಆಚೆ ಬಂದು ಹೊಡೆತಗಳನ್ನು ಬಾರಿಸವುದು ಸಹ ಸ್ಟೋಕ್ಸ್ಗೆ ಅಪಾಯಕಾರಿಯಾಗಲಿದೆ. ಒಂದು ಪಕ್ಷ ಬಾಲು ಅವರಿಂದ ದೂರ ಸ್ಪಿನ್ ಆಗುತ್ತಿದ್ದರೆ ಮತ್ತು ಅವರು ಚೆಂಡಿನ ಫ್ಲೈಟ್ ಗುರುತಿಸುವಲ್ಲಿ ಕೊಂಚವೇ ಪ್ರಮಾದವೆಸಗಿದರೂ ಸ್ಟಂಪ್ಟ್ ಆಗಿಬಿಡುತ್ತಾರೆ. ಅದೂ ಅಲ್ಲದೆ, ಈ ಸರಣಿಯಲ್ಲಿ ಅವರು ಕ್ರೀಸಿನಿಂದ ಆಚೆ ಬಂದು ಹೊಡೆತಗಳನ್ನಾಡುವ ಪ್ರಯತ್ನವನ್ನು ಮಾಡುತ್ತಿಲ್ಲ’ ಎಂದು ಹುಸ್ಸೇನ್ ಹೇಳಿದ್ದಾರೆ.
ಇದನ್ನೂ ಓದಿ: India vs England Test Series: ವಿರಾಟ್ ಕೊಹ್ಲಿ ಶತಕಗಳ ಬರ ಅಹಮದಾಬಾದ್ನಲ್ಲಿ ನೀಗುವುದೇ
Published On - 6:36 pm, Wed, 24 February 21