India vs England: ಮೊದಲ T20 ಪಂದ್ಯದಲ್ಲಿ ರೋಹಿತ್​- ರಾಹುಲ್​ ಆರಂಭಿಕರಾಗಿ ಕಣಕ್ಕೆ.. ಕೊಹ್ಲಿಯ ಈ ನಿರ್ಧಾರಕ್ಕೆ ಕಾರಣವೇನು?

| Updated By: ಸಾಧು ಶ್ರೀನಾಥ್​

Updated on: Mar 12, 2021 | 4:27 PM

India vs England: ಇವರಿಬ್ಬರು 18 ಇನ್ನಿಂಗ್ಸ್‌ಗಳಲ್ಲಿ ಒಟ್ಟಿಗೆ ಇನ್ನಿಂಗ್ಸ್​ ಆರಂಭಿಸಿದ್ದು, 59.94 ರ ಸರಾಸರಿಯಲ್ಲಿ 1019 ರನ್ ಗಳಿಸಿದ್ದಾರೆ. ಹಾಗೆಯೇ ಈ ಇಬ್ಬರ ನಡುವೆ 3 ಶತಕ ಮತ್ತು 7 ಅರ್ಧ-ಶತಕಗಳ ಜೊತೆಯಾಟ ಸಹ ಇದೆ.

India vs England: ಮೊದಲ T20 ಪಂದ್ಯದಲ್ಲಿ ರೋಹಿತ್​- ರಾಹುಲ್​ ಆರಂಭಿಕರಾಗಿ ಕಣಕ್ಕೆ.. ಕೊಹ್ಲಿಯ ಈ ನಿರ್ಧಾರಕ್ಕೆ ಕಾರಣವೇನು?
ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್
Follow us on

ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಟೀಂ ಇಂಡಿಯಾದ ಆಡುವ ಇಲೆವೆನ್ ಏನೇ ಇರಲಿ. ಆದರೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವುದು ಈಗ ಬಹುತೇಕ ಖಚಿತವಾಗಿದೆ. ಕ್ಯಾಪ್ಟನ್ ಕೊಹ್ಲಿ ಸ್ವತಃ ಈ ವಿಚಾರವನ್ನು ಪಂದ್ಯದ ಮೊದಲು ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದ್ದಾರೆ. ರೋಹಿತ್ ಮತ್ತು ರಾಹುಲ್ ಅವರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಆರಂಭಿಕರನ್ನಾಗಿ ಆಡಿಸುವ ಕೊಹ್ಲಿಯ ಈ ನಿರ್ಧಾರಕ್ಕೆ ಕಾರಣಗಳೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ವಿರಾಟ್ ಕೊಹ್ಲಿ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ, ರೋಹಿತ್ ಮತ್ತು ರಾಹುಲ್ ಜೋಡಿ ಹಿಂದಿನ ಪಂದ್ಯಾವಳಿಗಳಲ್ಲಿ ತೋರಿರುವ ಅದ್ಭುತ ಜೊತೆಯಾಟವೇ ಪ್ರಮುಖ ಕಾರಣವಾಗಿದೆ. ರೋಹಿತ್ ಮತ್ತು ರಾಹುಲ್ ಅವರ ಆರಂಭಿಕ ಜೊತೆಯಾಟದ ವರದಿ ಕಾರ್ಡ್ ಅನ್ನು ಕೂಲಂಕಷವಾಗಿ ಪರಿಶೀಲಿಸಿರುವ ಕೊಹ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ರೋಹಿತ್-ರಾಹುಲ್ ಆರಂಭಿಕ ಜೊತೆಯಾಟ
ರೋಹಿತ್ ಮತ್ತು ರಾಹುಲ್ ಅವರ ಆರಂಭಿಕ ಜೊತೆಯಾಟದ ವರದಿ ಕಾರ್ಡ್‌ನಲ್ಲಿ ವಿರಾಟ್ ಕೊಹ್ಲಿಗೆ ಸಕಾರಾತ್ಮಕವಾದ ಫಲಿತಾಂಶ ಕಂಡು ಬಂದಿದೆ. ಈ ಜೋಡಿಯ ಜೊತೆಯಾಟವನ್ನು ನೋಡಿದ ಕೊಹ್ಲಿಗೆ ಇಂಗ್ಲೆಂಡ್ ವಿರುದ್ಧ ಭಾರತದ ಗೆಲ್ಲುವುದು ಖಚಿತ ಎಂಬ ಭಾವನೆ ಮೂಡಿದೆ. ಈ ಆರಂಭಿಕ ಜೋಡಿ ಟಿ 20 ಕ್ರಿಕೆಟ್‌ನಲ್ಲಿ ಜೊತೆಯಾಗಿ ಆಡಿರುವ ಒಟ್ಟು 18 ಇನ್ನಿಂಗ್ಸ್‌ಗಳ ವರದಿ ಕಾರ್ಡ್​ನಲ್ಲಿ ಕ್ರಿಕೆಟ್​ ಪ್ರೇಮಿಗಳಿಗೆ ಖುಷಿಕೊಡುವ ವಿಚಾರಗಳು ಸೇರಿವೆ. ಟಿ20 ಕ್ರಿಕೆಟ್‌ನಲ್ಲಿ ಈ ಜೋಡಿಯ ಪಾಲುದಾರಿಕೆ, ಸರಾಸರಿ ಮತ್ತು ಸ್ಟ್ರೈಕ್ ರೇಟ್, ಎಲ್ಲವೂ ಅದರಲ್ಲಿ ಉತ್ತಮ ಸ್ಟಾರ್ ಮಾರ್ಕ್ ಆಗಿವೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ ರೋಹಿತ್ ಮತ್ತು ರಾಹುಲ್ ಅವರನ್ನು ಓಪನರ್​ ಆಗಿ ಆಡಿಸಲು ತೀರ್ಮಾನಿಸಿದ್ದಾರೆ.


18 ಇನ್ನಿಂಗ್ಸ್‌ಗಳ ವರದಿ ಕಾರ್ಡ್‌ನಲ್ಲಿ ಏನಿದೆ?
ಇವರಿಬ್ಬರು 18 ಇನ್ನಿಂಗ್ಸ್‌ಗಳಲ್ಲಿ ಒಟ್ಟಿಗೆ ಇನ್ನಿಂಗ್ಸ್​ ಆರಂಭಿಸಿದ್ದು, 59.94 ರ ಸರಾಸರಿಯಲ್ಲಿ 1019 ರನ್ ಗಳಿಸಿದ್ದಾರೆ. ಹಾಗೆಯೇ ಈ ಇಬ್ಬರ ನಡುವೆ 3 ಶತಕ ಮತ್ತು 7 ಅರ್ಧ-ಶತಕಗಳ ಜೊತೆಯಾಟ ಸಹ ಇದೆ.

ಇಂಗ್ಲೆಂಡ್ ವಿರುದ್ಧ ಈ ಜೋಡಿಯ ಸಾಧನೆ
ಇಂಗ್ಲೆಂಡ್ ವಿರುದ್ಧ ಟಿ 20 ಯಲ್ಲಿ ರೋಹಿತ್ ಮತ್ತು ರಾಹುಲ್ ಅವರು ಗಳಿಸಿರುವ ರನ್​ ಸರಾಸರಿ ಉತ್ತಮವಾಗಿದೆ. ಟಿ20 ಕ್ರಿಕೆಟ್​ನಲ್ಲಿ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ ವಿರುದ್ಧ ಉತ್ತಮ ಬ್ಯಾಟಿಂಗ್​ ಸರಾಸರಿ ಹೊಂದಿದ್ದಾರೆ. ಅವರಲ್ಲಿ ರೋಹಿತ್-ರಾಹುಲ್ ಸಹ ಸೇರಿದ್ದಾರೆ. ಈ ಇಬ್ಬರು ಆಟಗಾರರು ಇಂಗ್ಲೆಂಡ್ ವಿರುದ್ಧ 40 ಕ್ಕಿಂತ ಹೆಚ್ಚು ರನ್​​ ಸರಾಸರಿ ಹೊಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟಿ20 ಯಲ್ಲಿ 49.33 ಸರಾಸರಿಯಲ್ಲಿ ರನ್ ಗಳಿಸಿರುವ ಧೋನಿ, ಅತ್ಯಧಿಕ ರನ್​ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ ಧೋನಿ ಈಗ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಕೆ.ಎಲ್.ರಾಹುಲ್ 45.40 ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 45.20 ಸರಾಸರಿಯೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಇದು ಮಾತ್ರವಲ್ಲದೆ, ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ವಿರುದ್ಧದ ಟಿ 20 ಯಲ್ಲಿ ತಲಾ ಒಂದೊಂದು ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: India vs England: 5 ಪಂದ್ಯಗಳ T20 ಸರಣಿ ನಡೆಯುವ ಸ್ಥಳ, ದಿನಾಂಕ, ಸಮಯ, ಉಭಯ ತಂಡಗಳ ವಿವರ ಹೀಗಿದೆ!