India vs England: 5 ಪಂದ್ಯಗಳ T20 ಸರಣಿ ನಡೆಯುವ ಸ್ಥಳ, ದಿನಾಂಕ, ಸಮಯ, ಉಭಯ ತಂಡಗಳ ವಿವರ ಹೀಗಿದೆ!

India vs England: ಮೊದಲ ಸ್ಥಾನವನ್ನು ಹಾಗೇ ಉಳಿಸಿಕೊಳ್ಳಲು ಇಂಗ್ಲೆಂಡ್​ ಯತ್ನಿಸುತ್ತಿದ್ದರೆ, ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಮೊದಲ ಸ್ಥಾನಕ್ಕೇರುವ ತವಕದಲ್ಲಿ ಟೀಂ ಇಂಡಿಯಾ ಇದೆ. ಎರಡು ತಂಡಗಳಲ್ಲೂ T20 ಸ್ಪೇಷಲಿಸ್ಟ್​ ದಾಂಡಿಗರೆ ಇರುವುದರಿಂದ ಅಭಿಮಾನಿಗಳಿಗೆ ರಸದೌತಣ ಸಿಗುವುದಂತೂ ಪಕ್ಕಾ ಆಗಿದೆ.

India vs England: 5 ಪಂದ್ಯಗಳ T20 ಸರಣಿ ನಡೆಯುವ ಸ್ಥಳ, ದಿನಾಂಕ, ಸಮಯ, ಉಭಯ ತಂಡಗಳ ವಿವರ ಹೀಗಿದೆ!
ಇಯೊನ್ ಮೋರ್ಗಾನ್, ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on:Mar 11, 2021 | 1:09 PM

ಅಹಮದಾಬಾದ್‌: ಟೆಸ್ಟ್​ ಕ್ರಿಕೆಟ್​ನಲ್ಲಿ ಜಯ ಗಳಿಸಿದ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ T20 ಸರಣಿಯನ್ನು ಮಾರ್ಚ್​ 12ರಿಂದ ಆರಂಭಿಸಲಿದೆ. ಉಭಯ ತಂಡಗಳು ಬಲಿಷ್ಠ ತಂಡಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಸರಣಿಯನ್ನು ಕೈವಶ ಮಾಡಿಕೊಳ್ಳುವ ತವಕದಲ್ಲಿವೆ. ಸದ್ಯ ಐಸಿಸಿ T20 ರ‍್ಯಾಂಕಿಂಗ್​ನಲ್ಲಿ ಮೊದಲ 2 ಸ್ಥಾನಗಳಲ್ಲಿರುವ ಈ ಎರಡು ತಂಡಗಳು ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿವೆ. ಮೊದಲ ಸ್ಥಾನವನ್ನು ಹಾಗೇ ಉಳಿಸಿಕೊಳ್ಳಲು ಇಂಗ್ಲೆಂಡ್​ ಯತ್ನಿಸುತ್ತಿದ್ದರೆ, ಇಂಗ್ಲೆಂಡ್​ ವಿರುದ್ಧ ಸರಣಿ ಗೆದ್ದು ಮೊದಲ ಸ್ಥಾನಕ್ಕೇರುವ ತವಕದಲ್ಲಿ ಟೀಂ ಇಂಡಿಯಾ ಇದೆ. ಎರಡು ತಂಡಗಳಲ್ಲೂ T20 ಸ್ಪೆಷಲಿಸ್ಟ್​ ದಾಂಡಿಗರೇ ಇರುವುದರಿಂದ ಅಭಿಮಾನಿಗಳಿಗೆ ರಸದೌತಣ ಸಿಗುವುದಂತೂ ಪಕ್ಕಾ ಆಗಿದೆ.

ಭಾರತ – ಇಂಗ್ಲೆಂಡ್ ಟಿ20 ಸರಣಿ ಯಾವಾಗ ಪ್ರಾರಂಭ? ಭಾರತ- ಇಂಗ್ಲೆಂಡ್ ಟಿ20 ಸರಣಿ ಏಪ್ರಿಲ್ 12, 2021 ರಿಂದ ಪ್ರಾರಂಭವಾಗಲಿದೆ.

ನೇರ ಪ್ರಸಾರದ ವೀಕ್ಷಣೆ ಎಲ್ಲಿ? ಇಂಡಿಯಾ ವರ್ಸಸ್ ಇಂಗ್ಲೆಂಡ್ ಟಿ20 ಸರಣಿಯನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಪಂದ್ಯ ಆರಂಭವಾಗುವ ಸಮಯ? ಭಾರತ – ಇಂಗ್ಲೆಂಡ್ ಟಿ20 ಸರಣಿ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದೆ.

ಟಿ20 ಸರಣಿ ನಡೆಯುವ ಸ್ಥಳಗಳು ಯಾವುವು? ಇಂಡಿಯಾ vs ಇಂಗ್ಲೆಂಡ್ ಟಿ20 ಸರಣಿ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಹೇಗೆ ನೋಡುವುದು? ಇಂಡಿಯಾ ವರ್ಸಸ್ ಇಂಗ್ಲೆಂಡ್ ಟಿ20 ಸರಣಿಯ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್   ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.

ಭಾರತ-ಇಂಗ್ಲೆಂಡ್ ಟಿ20 ಸರಣಿ ತಂಡಗಳು ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್, ರಿಷಭ್ ಪಂತ್, ಇಶಾನ್ ಕಿಶನ್, ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್.

ಇಂಗ್ಲೆಂಡ್ ತಂಡ: ಇಯೊನ್ ಮೋರ್ಗಾನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ , ಮಾರ್ಕ್ ವುಡ್.

ಭಾರತ-ಇಂಗ್ಲೆಂಡ್ ಟಿ20 ಟಿಕೆಟ್ ದರ? ಇಂಡಿಯಾ ವರ್ಸಸ್ ಇಂಗ್ಲೆಂಡ್ 1 ನೇ ಟಿ20 ಟಿಕೆಟ್‌ಗಳು ಬುಕ್‌ಮೈಶೋ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ 500 ರಿಂದ 10,000 ರೂ.ಗಳ ದರದಲ್ಲಿ ಲಭ್ಯವಿದೆ.

5 ಪಂದ್ಯಗಳ T20 ಸರಣಿಯ ವೇಳಾಪಟ್ಟಿ ಹೀಗಿದೆ..

ಪಂದ್ಯ  ದಿನಾಂಕ  ಸಮಯ  ಟಾಸ್ ಸಮಯ ​ ಕ್ರೀಡಾಂಗಣ  ಸ್ಥಳ
ಮೊದಲನೇ ಟಿ20 ಪಂದ್ಯ 12-ಮಾರ್ಚ್ 7:00 PM  6:30 PM ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ  ಅಹಮದಾಬಾದ್
ಎರಡನೇ ಟಿ20 ಪಂದ್ಯ  14-ಮಾರ್ಚ್ 7:00 PM  6:30 PM ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ ಅಹಮದಾಬಾದ್
ಮೂರನೇ ಟಿ 20 ಪಂದ್ಯ  16-ಮಾರ್ಚ್ 7:00 PM  6:30 PM ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ ಅಹಮದಾಬಾದ್
ನಾಲ್ಕನೇ ಟಿ 20 ಪಂದ್ಯ 18-ಮಾರ್ಚ್ 7:00 PM  6:30 PM ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ ಅಹಮದಾಬಾದ್
ಐದನೇ ಟಿ20 ಪಂದ್ಯ 20-ಮಾರ್ಚ್ 7:00 PM  6:30 PM ನರೇಂದ್ರ ಮೋದಿ ಕ್ರಿಕೆಟ್​ ಕ್ರೀಡಾಂಗಣ ಅಹಮದಾಬಾದ್

Published On - 1:04 pm, Thu, 11 March 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ