Vijay Hazare Trophy: ಸೆಮಿಫೈನಲ್​ನಲ್ಲಿ ಬಲಿಷ್ಠ ಕರ್ನಾಟಕಕ್ಕೆ ಅಜೇಯ ಮುಂಬೈ ಎದುರಾಳಿ

ಆರಂಭ ಆಟಗಾರರಾದ ನಾಯಕ ರವಿಕುಮಾರ್ ಸಮರ್ಥ್ ಮತ್ತು ಉತ್ಕೃಷ್ಟ ಫಾರ್ಮ್​​ನಲ್ಲಿರುವ ದೇವದತ್ ಪಡಿಕ್ಕಲ್ ಎದುರಾಳಿ ಬೌಲರ್​ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಪಡಿಕ್ಕಲ್ ಸತತ 4 ಶತಕಗಳನ್ನು ಬಾರಿಸಿ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಕೇವಲ ಮೂರನೇ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

Vijay Hazare Trophy: ಸೆಮಿಫೈನಲ್​ನಲ್ಲಿ ಬಲಿಷ್ಠ ಕರ್ನಾಟಕಕ್ಕೆ ಅಜೇಯ ಮುಂಬೈ ಎದುರಾಳಿ
ದೇವದತ್ ಪಡಿಕ್ಕಲ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 10, 2021 | 10:52 PM

ದೆಹಲಿ: ವಿಜಯ ಹಜಾರೆ ಟ್ರೋಫಿ 2021 ಅಂತಿಮ ಹಂತವನ್ನು ತಲುಪಿದೆ. ನಾಳೆ ನಡೆಯಲಿರುವ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ, ಭರ್ಜರಿ ಫಾರ್ಮ್​ನಲ್ಲಿರುವ ಕರ್ನಾಟಕ ತಂಡವು ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಮುಂಬೈ ತಂಡವನ್ನು ಹಾಗೂ ಇನ್ನೊಂದು ಸೆಮಿಫೈನಲ್​ನಲ್ಲಿ ಗುಜರಾತ್ ತಂಡವು ಉತ್ತರ ಪ್ರದೇಶವನ್ನು ಎದುರಿಸಲಿವೆ. ಟೂರ್ನಮೆಂಟಿನ ಮೊದಲ ಪಂದ್ಯದಲ್ಲಿ ಅಲ್ಪ ಅಂತರದಿಂದ ಉತ್ತರ ಪ್ರದೇಶಕ್ಕೆ ಸೋತ ಕರ್ನಾಟಕ ನಂತರ ಗೆಲುವಿನ ನಾಗಾಲೋಟ ಶುರು ಮಾಡಿತು. ಆರಂಭ ಆಟಗಾರರಾದ ನಾಯಕ ರವಿಕುಮಾರ್ ಸಮರ್ಥ್ ಮತ್ತು ಉತ್ಕೃಷ್ಟ ಫಾರ್ಮ್​​ನಲ್ಲಿರುವ ದೇವದತ್ ಪಡಿಕ್ಕಲ್ ಎದುರಾಳಿ ಬೌಲರ್​ಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಪಡಿಕ್ಕಲ್ ಸತತ 4 ಶತಕಗಳನ್ನು ಬಾರಿಸಿ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಕೇವಲ ಮೂರನೇ ಆಟಗಾರನೆಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕೇರಳ ವಿರುದ್ಧ ಆಡಿದ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಸಮರ್ಥ (192) ಮತ್ತು ಪಡಿಕ್ಕಲ್ (101) ಬಾರಿಸಿ ತಮ್ಮ ಟೀಮಿಗೆ 80 ರನ್​ಗಳ ಸುಲಭ ಜಯ ಕೊಡಿಸಿದರು. 6 ಇನ್ನಿಂಗ್ಸಗಳಲ್ಲಿ ಇವರಿಬ್ಬರು ಇದುವರೆಗೆ 1,273 ರನ್ ಕಲೆ ಹಾಕಿದ್ದಾರೆ. ಈ ಸಾಲಿನ ಪಂದ್ಯಾವಳಿಯಲ್ಲಿ ಪಡಿಕ್ಕಲ್ ಅತಿ ಹೆಚ್ಚು ರನ್ (673) ಗಳಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ರನ್ ಗಳಿಕೆಯಲ್ಲಿ ಅವರನನ್ನು ಹಿಂಬಾಲಿಸುತ್ತಿರುವ ಸಮರ್ಥ 605 ರನ್ ಶೇಖರಿಸಿದ್ದಾರೆ.

ಅತ್ತ, ಮುಂಬೈ ತಾನಾಡಿರುವ ಎಲ್ಲ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಕ್ವಾರ್ಟರ್​ ಫೈನಲ್​ನಲ್ಲಿ ಅದು ಸೌರಾಷ್ಟ್ರವನ್ನು 9 ವಿಕೆಟ್​​ಗಳಿಂದ ಸೋಲಿಸಿತು. ಟೆಸ್ಟ್​ಗಳಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸುವ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ ಅಜೇಯ 185 ರನ್ ಬಾರಿಸಿದರು. 285 ರನ್​ಗಳ ಮೊತ್ತವನ್ನು ಮುಂಬೈ 42 ನೇ ಓವರ್​ನಲ್ಲಿಯೇ ದಾಟಿತು. ಮತ್ತೊಂದು ಗಮನಾರ್ಹ ಅಂಶವೆಂದರೆ ಅಡಿರುವ ಎಲ್ಲ ಪಂದ್ಯಗಳನ್ನು ಮುಂಬೈ ಭಾರಿ ಅಂತರದಿಂದ ಗೆದ್ದಿದೆ.

Prithvi Shaw

ಪೃಥ್ವಿ ಶಾ

ಕರ್ನಾಟಕ ಮತ್ತು ಮುಂಬೈ ನಡುವಿನ ಸೆಮಿಫೈನಲ್ ಗುರುವಾರದಂದು ದೆಹಲಿಯ ಪಾಲಂ ಎ ಮೈದಾನದಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಸ್ವರ್ಗವಾಗಿರುವುದರಿಂದ ನಾಳಿನ ಪಂದ್ಯದಲ್ಲಿ ರನ್​ ಹೊಳೆಯನ್ನು ನಿರೀಕ್ಷಿಸಬಹುದು.

ಮತ್ತೊಂದು ಸೆಮಿಫೈನಲ್​ನಲ್ಲಿ ಗುಜರಾತ್ ಮತ್ತು ಉತ್ತರ ಪ್ರದೇಶ ಸೆಣಸಲಿವೆ. ಕ್ವಾರ್ಟರ್​ ಫೈನಲ್​ನಲ್ಲಿ ಉತ್ತರ ಪ್ರದೇಶವು ದೆಹಲಿಯನ್ನು 46ರನ್​ಗಳಿಂದ ಸೋಲಿಸಿತು. ಗುಜರಾತ್ ಸಹ ಈ ಸಾಲಿನ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಈ ತಂಡದ ಟಾಪ್ ಆರ್ಡರ್ ಪ್ರತಿ ಪಂದ್ಯದಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದೆ. ಕ್ವಾರ್ಟರ್​ ಫೈನಲ್​ನಲ್ಲಿ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ 134 ರನ್​ಗಳ ಅಮೋಘ ಇನ್ನಿಂಗ್ಸ್ ಆಡಿದರು.

ಉತ್ತರ ಪ್ರದೇಶ ಸಹ ತನ್ನ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ಹೆಚ್ಚು ಆತುಕೊಂಡಿದೆ. ಅನುಭವಿ ಬೌಲರ್ ಪಿಯುಶ್​ ಚಾವ್ಲಾ ಅವರಲ್ಲಿ ಈಗಲೂ ಪಂದ್ಯ ಗೆದ್ದು ಕೊಡುವ ಸಾಮರ್ಥ್ಯವಿದೆ. ಗುಜರಾತ್ ಮತ್ತು ಯುಪಿ ನಡುವಿನ ಸೆಮಿಫೈನಲ್ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಾಳೆ (ಗುರುವಾರ) ನಡೆಯಲಿದೆ.

ಇದನ್ನೂ ಓದಿ: ವಿಜಯ ಹಜಾರೆ ಟ್ರೋಫಿ: ಸತತ 4ನೇ ಶತಕ ದಾಖಲಿಸಿದ ದೇವದತ್ ಪಡಿಕ್ಕಲ್, ಈ ಸಾಧನೆಗೈದ ವಿಶ್ವದ 3ನೇ ಆಟಗಾರ

Published On - 10:51 pm, Wed, 10 March 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್