
ಹಾಕಿ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನೆದರ್ಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಪುರುಷರ ಎಫ್‌ಐಎಚ್ (FIH) ಹಾಕಿ ವಿಶ್ವಕಪ್ 2026 ಟೂರ್ನಿಯಲ್ಲಿ ಇಂದು (ಆ.19) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಪೂಲ್ ‘ಡಿ’ ನಲ್ಲಿರುವ ಎರಡೂ ತಂಡಗಳಿಗೆ ಈ ಪಂದ್ಯವು ಅತ್ಯಂತ ನಿರ್ಣಾಯಕ. ಹೀಗಾಗಿಯೇ ಈ ಮ್ಯಾಚ್ನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಈ ಪಂದ್ಯದ ಸಮಯ, ನೇರ ಪ್ರಸಾರ ಹಾಗೂ ಲೈವ್ ಸ್ಟ್ರೀಮಿಂಗ್ ವಿವರಗಳು ಈ ಕೆಳಗಿನಂತಿದೆ…
ಭಾರತ ಮತ್ತು ಪಾಕಿಸ್ತಾನ್ ನಡುವಿನ ಹಾಕಿ ವಿಶ್ವಕಪ್ ಪಂದ್ಯ ಯಾವಾಗ ನಡೆಯಲಿದೆ?
ಇಂಡೋ-ಪಾಕ್ ನಡುವಣ ಈ ಪಂದ್ಯವು ಇಂದು (ಬುಧವಾರ, 19 ಆಗಸ್ಟ್ 2026) ನಡೆಯಲಿದೆ.
ಎಷ್ಟು ಗಂಟೆಗೆ ಪಂದ್ಯ ಆರಂಭ?
ಭಾರತೀಯ ಕಾಲಮಾನದ ಪ್ರಕಾರ (IST) ಸಂಜೆ 6:30 ಕ್ಕೆ ಪಂದ್ಯ ಆರಂಭವಾಗಲಿದೆ.
ಭಾರತ ಮತ್ತು ಪಾಕಿಸ್ತಾನ್ ನಡುವಣ ಈ ಪಂದ್ಯ ನಡೆಯುವುದು ಎಲ್ಲಿ?
ನೆದರ್ಲ್ಯಾಂಡ್ಸ್‌ನ ಆಮ್ಸ್ಟಲ್ವೀನ್‌ನಲ್ಲಿರುವ ಐತಿಹಾಸಿಕ ವಾಗ್ನರ್ ಹಾಕಿ ಸ್ಟೇಡಿಯಂ ನಲ್ಲಿ ಈ ಪಂದ್ಯ ಜರುಗಲಿದೆ.
ಯಾವ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು?
ನೀವು ಡಿಜಿಟಲ್‌ನಲ್ಲಿ ಪಂದ್ಯವನ್ನು ವೀಕ್ಷಿಸಲು ಬಯಸಿದರೆ, JioHotstar ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯದ ನೇರ ಪ್ರಸಾರ ಲಭ್ಯವಿರುತ್ತದೆ.
ಟಿವಿಯಲ್ಲಿ ಯಾವ ಚಾನೆಲ್‌ಗಳಲ್ಲಿ ನೇರ ಪ್ರಸಾರ ಇರಲಿದೆ?
ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಪಂದ್ಯದ ಅಧಿಕೃತ ಪ್ರಸಾರಕರಾಗಿದ್ದಾರೆ. ನೀವು Star Sports Select 2, Star Sports Select 2 HD ಮತ್ತು Star Sports Khel ಚಾನೆಲ್‌ಗಳಲ್ಲಿ ಪಂದ್ಯವನ್ನು ಲೈವ್ ನೋಡಬಹುದು.
ಉಚಿತವಾಗಿ ಪಂದ್ಯವನ್ನು ವೀಕ್ಷಿಸಲು ಅವಕಾಶ ಇದೆಯೇ?
ದೂರದರ್ಶನದ DD Sports (ಡಿಡಿ ಫ್ರೀ ಡಿಶ್ ಬಳಕೆದಾರರಿಗೆ) ಚಾನೆಲ್‌ನಲ್ಲಿ ಈ ಪಂದ್ಯವನ್ನು ಉಚಿತವಾಗಿ ನೇರ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ: ಭಾರತ ತಂಡದ ರಣತಂತ್ರ ಏನೆಂಬುದೇ ಅರ್ಥವಾಗುತ್ತಿಲ್ಲ!
ಸದ್ಯ ಪೂಲ್ ‘ಡಿ’ ಪಟ್ಟಿಯಲ್ಲಿ ಭಾರತ ತಂಡ 3 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 1 ಅಂಕ ಪಡೆದಿದೆ. ಮುಂದಿನ ಹಂತಕ್ಕೆ ಸುಲಭವಾಗಿ ಲಗ್ಗೆ ಇಡಲು ಭಾರತ ತಂಡಕ್ಕೆ ಜಯ ಅಥವಾ ಡ್ರಾ ಅಗತ್ಯವಿದೆ. ಆದರೆ ಟೂರ್ನಿಯಲ್ಲಿ ಮುಂದಿನ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಲು ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.
Published On - 10:54 am, Wed, 19 August 26