ಭಾರತ ಹಾಗೂ ಶ್ರೀಲಂಕಾ (India vs Sri lanka) ನಡುವಣ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಉಭಯ ತಂಡಗಳಲ್ಲಿ ಬಹುತೇಕ ಹೊಸ ಆಟಗಾರರೇ ತುಂಬಿರುವುದರಿಂದ ಸಾಕಷ್ಟು ಕುತೂಹಲ ಕೆರಳಿಸಿದೆ. ಟೀಮ್ ಇಂಡಿಯಾವನ್ನು ಶಿಖರ್ ಧವನ್ (Shikhar Dhawan) ಮುನ್ನಡೆಸುತ್ತಿದ್ದು, ದ್ರಾವಿಡ್ (Rahul Dravid) ಮಾರ್ಗದರ್ಶನದಲ್ಲಿರುವ ಭಾರತೀಯ ಯುವ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿದೆ.
ಈ ಸರಣಿಯಲ್ಲಿ ಭಾರತ ಪರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸಾಕಷ್ಟು ಆಟಗಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರಲ್ಲಿ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ನಿತೀಶ್ ರಾಣ, ವರುಣ್ ಚಕ್ರವರ್ತಿ, ಕೃಷ್ಣಪ್ಪ ಗೌತಮ್ ಮತ್ತು ಚೇತನ್ ಸಕರಿಯ ಪ್ರಮುಖರು. ಇವರಲ್ಲಿ ಯಾರಿಗೆ ಸ್ಥಾನ ಎಂಬುದು ಕಾದುನೋಡಬೇಕಿದೆ.
ಮೂಲಗಳ ಪ್ರಕಾರ ಮೊದಲ ಏಕದಿನ ಪಂದ್ಯಕ್ಕೆ ಹೆಚ್ಚಿನ ಹೊಸ ಆಟಗಾರರನ್ನು ಕಣಕ್ಕಿಳಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ. ಭಾರತದ ಪ್ರಮುಖ ಉದ್ದೇಶ ಸರಣಿ ಗೆಲುವು ಆಗಿದೆ. ಹೀಗಾಗಿ ಹೆಚ್ಚು ಕ್ರಿಕೆಟ್ ಆಡಿದ ಅನುಭವ ಇರುವ ಪ್ಲೇಯರ್ ಮೊದಲ ಆಯ್ಕೆಯಲ್ಲಿ ಸಿಗಲಿದ್ದಾರೆ.
ಟೀಮ್ ಇಂಡಿಯಾ ಪರ ಆರಂಭಿಕರಾಗಿ ನಾಯಕ ಶಿಖರ್ ಧವನ್ ಕಣಕ್ಕಿಳಿದರೆ ಇವರ ಜೊತೆಗೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಅಭ್ಯಾಸ ಪಂದ್ಯದಲ್ಲಿ ಶಾ ಆಟ ಎಲ್ಲರ ಹುಬ್ಬೇರಿವಂತೆ ಮಾಡಿತ್ತು. ಹೀಗಾಗಿ ಶಾ ಧವನ್ ಜೊತೆ ಓಪನರ್ ಆಗಿ ಆಡುವುದು ನಿಶ್ಚಯ. ಕನ್ನಡಿಗ ದೇವದತ್ ಪಡಿಕ್ಕಲ್ಗೆ ಅವಕಾಶ ಸಿಗುವುದು ಅನುಮಾನ.
ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಬಹುದು. ಈ ಮೂಲಕ ಇವರು ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿರುವ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಅನುಭದ ಆಧಾರದ ಮೇಲೆ ಇವರಿಗೆ ಸ್ಥಾನ ನೀಡಬಹುದು.
5ನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆಗೆ ಅವಕಾಶ ನೀಡಬಹುದು. ಹಾಗಾದಲ್ಲಿ ವರ್ಷಗಳ ಬಳಿಕ ಪಾಂಡೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ. ಅಲ್ಲದೆ ಇದು ಅವರಿಗೆ ಕೊನೇಯ ಅವಕಾಶ ಎಂದರೆ ತಪ್ಪಾಗಲಾರದು. ಇನ್ನೂ ಆಲ್ರೌಂಡರ್ ಪಟ್ಟ ಪಾಂಡ್ಯ ಬ್ರದರ್ಸ್ಗೆ ಸಿಗುವುದರಲ್ಲಿ ಅನುಮಾನವಿಲ್ಲ.
ಉಪ ನಾಯಕ ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದರೆ ದೀಪಕ್ ಚಹಾರ್ ಇವರಿಗೆ ಸಾಥ್ ನೀಡಬಹುದು. ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಟೀಮ್ ಇಂಡಿಯಾದಲ್ಲಿ ಸೋಲರಿಯದ ದಿಟ್ಟತನವನ್ನು ಹುಟ್ಟಿಸಿದ್ದು ಸೌರವ್ ಗಂಗೂಲಿ: ಬ್ರಾಡ್ ಹಾಗ್
ಟೀಂ ಇಂಡಿಯಾದಲ್ಲಿ ಮರಿ ಸೆಹ್ವಾಗ್ ಹುಟ್ಟಿಕೊಂಡಿದ್ದಾನೆ; ಲಂಕಾ ತಂಡಕ್ಕೆ ಎಚ್ಚರಿಕೆ ನೀಡಿದ ಮುರಳೀಧರನ್
(India vs Sri Lanka 1st ODI India Predicted XI Sanju Samson Suryakumar yadav likely to debut)