India vs Sri Lanka 2nd ODI: ಭಾರತ-ಶ್ರೀಲಂಕಾ ಎರಡನೇ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ

| Updated By: ಪೃಥ್ವಿಶಂಕರ

Updated on: Jul 19, 2021 | 6:58 PM

India vs Sri Lanka 2nd ODI Live Streaming: ಜುಲೈ 20 ರಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಸೆಣಸಲಿದೆ.

India vs Sri Lanka 2nd ODI: ಭಾರತ-ಶ್ರೀಲಂಕಾ ಎರಡನೇ ಏಕದಿನ ಪಂದ್ಯ ಎಲ್ಲಿ?, ಯಾವುದರಲ್ಲಿ ನೇರಪ್ರಸಾರ?, ಎಷ್ಟು ಗಂಟೆಗೆ?, ಇಲ್ಲಿದೆ ಮಾಹಿತಿ
ಟೀಂ ಇಂಡಿಯಾ
Follow us on

ಜುಲೈ 20 ರಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಗೆದ್ದ ನಂತರ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ. ಭಾನುವಾರ ಆಟಿದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 262 ರನ್ ದಾಖಲಿಸಿತು. ಇದು ನಿಧಾನಗತಿಯ ಪಿಚ್ ಆಗಿದ್ದರೂ ಮತ್ತು ಸ್ಪಿನ್ನರ್‌ಗಳಿಗೆ ಸಹಾಯ ಮಾಡಿದರೂ ಬ್ಯಾಟಿಂಗ್ ಮಾಡಲು ಉತ್ತಮವಾಗಿದೆ. ಚಮಿಕಾ ಕರುಣರತ್ನೆ ಲಂಕಾದ ಪರ8 ನೇ ಸ್ಥಾನದಲ್ಲಿ ಕಣಕ್ಕಿಳಿದು 35 ಬಾಲ್​ ಎದುರಿಸಿ 43 ರನ್ ಗಳಿಸಿದರು. ಕ್ಯಾಪ್ಟನ್ ದಾಸುನ್ ಶಾನಕಾ 50 ಎಸೆತಗಳಲ್ಲಿ 39 ರನ್ ಗಳಿಸಿದರು.

ಭಾರತದ ಪರ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಬಹಳ ಸಮಯದ ನಂತರ ಒಟ್ಟಿಗೆ ಆಡಿದರು. ಇಬ್ಬರೂ ಸ್ಪಿನ್ನರ್‌ಗಳು ತಲಾ ಎರಡು ವಿಕೆಟ್ ಪಡೆದರು. ಪೇಸರ್ ದೀಪಕ್ ಚಹರ್ ಅವರ ಹೆಸರಿಗೆ ಎರಡು ವಿಕೆಟ್​ಗಳು ಸೇರಿದವು. ಲಂಕಾ ಟಾರ್ಗೆಟ್​ಗೆ ಉತ್ತರಿಸಿದ ಭಾರತದ ಪರ ಪೃಥ್ವಿ ಶಾ (24 ಕ್ಕೆ 43) ಭಾರತಕ್ಕೆ ಮಿಂಚಿನ ಆರಂಭವನ್ನು ನೀಡಿದರು. ನಂ 3 ರಲ್ಲಿ ಬ್ಯಾಟಿಂಗ್​ಗೆ ಇಳಿದ ಇಶಾನ್ ಕಿಶನ್ 42 ಎಸೆತಗಳಲ್ಲಿ 59 ರನ್ ಗಳಿಸಿ ಚೇಸ್ ಅನ್ನು ಸುಲಭದ ಕೆಲಸವನ್ನಾಗಿ ಮಾಡಿದರು. ಮನೀಶ್ ಪಾಂಡೆ 40 ಎಸೆತಗಳನ್ನು ಎದುರಿಸಿ 26 ರನ್ ಗಳಿಸಿದರು. ನಾಯಕ ಶಿಖರ್ ಧವನ್ (95 ಎಸೆತ 86 ರನ್) ಮತ್ತು ಸೂರ್ಯಕುಮಾರ್ ಯಾದವ್ (20 ಎಸೆತ 31 ರನ್) ಅಜೇಯರಾಗಿ ಉಳಿದರು. ಈಗ ಸರಣಿಯನ್ನು ಜೀವಂತವಾಗಿಡಲು ಶ್ರೀಲಂಕಾ ಎರಡನೇ ಏಕದಿನ ಪಂದ್ಯವನ್ನು ಗೆಲ್ಲಬೇಕಾಗುತ್ತದೆ.

ಶ್ರೀಲಂಕಾ- ಭಾರತ ಎರಡನೇ ಏಕದಿನ ಪಂದ್ಯ ಯಾವಾಗ ನಡೆಯಲಿದೆ?
ಎರಡನೇ ಶ್ರೀಲಂಕಾ ಮತ್ತು ಭಾರತ ಏಕದಿನ ಪಂದ್ಯವನ್ನು 2021 ಜುಲೈ 20 ರಂದು ಮಂಗಳವಾರ ಆಡಲಾಗುವುದು.

ಎರಡನೇ ಏಕದಿನ ಪಂದ್ಯ ಎಲ್ಲಿ ನಡೆಯಲಿದೆ?
ಶ್ರೀಲಂಕಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಶ್ರೀಲಂಕಾ ವರ್ಸಸ್ ಇಂಡಿಯಾ ಎರಡನೇ ಏಕದಿನ ಪಂದ್ಯ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಮಧ್ಯಾಹ್ನ 2.30 ಕ್ಕೆ ನಡೆಯಲಿದೆ.

ಆಟವನ್ನು ಹೇಗೆ ವೀಕ್ಷಿಸಬಹುದು?
ಸೋನಿ ಸಿಕ್ಸ್ / ಸೋನಿ ಸಿಕ್ಸ್ ಎಚ್ಡಿ, ಸೋನಿ ಟೆನ್ 3 / ಸೋನಿ ಟೆನ್ 3 ಎಚ್ಡಿ ಯಲ್ಲಿ ಶ್ರೀಲಂಕಾ ವರ್ಸಸ್ ಇಂಡಿಯಾ ಎರಡನೇ ಏಕದಿನ ಪಂದ್ಯವನ್ನು ನೀವು ವೀಕ್ಷಿಸಬಹುದು, ಸೋನಿ ಎಲ್ಐವಿ ಯಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.

ತಂಡಗಳು:
ಶ್ರೀಲಂಕಾ:
ದಾಸುನ್ ಶಾನಕಾ (ಕ್ಯಾಪ್ಟನ್), ಧನಂಜಯ ಡಿ ಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭನುಕಾ ರಾಜಪಕ್ಸೆ, ಪಾತುಮ್ ನಿಸ್ಸಂಕ, ಚರಿತ್ ಅಸಲಂಕಾ, ವನಿಂದು ಹಸರಂಗ, ಆಶೆನ್ ಬಂಡರಾ, ಮಿನೋಡ್ ಭನುಕಾ, ಲಹಿರು ಉದಾರ, ಚಮೇಮರಾಮಾನಾ ಲಕ್ಷನ್ ಸಂದಕನ್, ಅಕಿಲಾ ಧನಂಜಯ, ಶಿರನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನ, ಪ್ರವೀಣ್ ಜಯವಿಕ್ರೆಮಾ, ಅಸಿಥಾ ಫರ್ನಾಂಡೊ, ಕಸುನ್ ರಾಜಿತಾ, ಲಹೀರು ಕುಮಾರ, ಇಸುರು ಉದಾನ.

ಭಾರತ: ಶಿಖರ್ ಧವನ್ (ಕ್ಯಾಪ್ಟನ್), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ರುತುರಾಜ್ ಗೈಕ್ವಾಡ್, ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್-ಕೀಪರ್),ಕೆ ಗೌತಮ್, ಕ್ರುನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್ (ಉಪನಾಯಕ), ದೀಪಕ್ ಚಹರ್, ಕುಲದೀಪ್ ಯಾದವ್, ನವದೀಪ್ ಸೈನಿ, ಚೇತನ್ ಸಕರಿಯಾ