ಉಫ್​ಫ್​ಫ್ 158 ಮೀಟರ್….ಕ್ರಿಕೆಟ್ ಇತಿಹಾಸ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿದ ಬ್ಯಾಟ್ಸ್​ಮನ್ ಯಾರು ಗೊತ್ತಾ..?

Biggest Six Records: ಟೀಮ್ ಇಂಡಿಯಾ ಪರ ಯುವರಾಜ್ ಸಿಂಗ್ ಅತ್ಯಂತ ದೊಡ್ಡ ಸಿಕ್ಸ್ ಬಾರಿಸಿದ್ದರು. 2007 ರಲ್ಲಿ ಯುವಿ ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ಎಸೆತದಲ್ಲಿ 119 ಮೀಟರ್ ಸಿಕ್ಸ್ ಸಿಡಿಸಿದ್ದು ಭಾರತೀಯ ಬ್ಯಾಟ್ಸ್​ಮನ್​​ನ ದಾಖಲೆಯಾಗಿ ಉಳಿದಿದೆ.

ಉಫ್​ಫ್​ಫ್ 158 ಮೀಟರ್....ಕ್ರಿಕೆಟ್ ಇತಿಹಾಸ ಬಿಗ್ಗೆಸ್ಟ್ ಸಿಕ್ಸ್ ಸಿಡಿಸಿದ ಬ್ಯಾಟ್ಸ್​ಮನ್ ಯಾರು ಗೊತ್ತಾ..?
Yuvraj singh

ಲೀಡ್ಸ್​ನಲ್ಲಿ ನಡೆದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2ನೇ ಟಿ20 ಪಂದ್ಯ ಹಲವು ಕಾರಣಗಳಿಂದ ಗಮನ ಸೆಳೆಯಿತು. ಅದರಲ್ಲೂ ಮುಖ್ಯವಾಗಿ ಲಿಯಾಮ್ ಲಿವಿಂಗ್​ಸ್ಟನ್ ಬಾರಿಸಿದ ಸಿಕ್ಸ್ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

ಹ್ಯಾರಿಸ್ ರೌಫ್ ಎಸೆದ 16ನೇ ಓವರ್​ನ ಮೊದಲ ಎಸೆತವನ್ನು ಲಿವಿಂಗ್​ಸ್ಟನ್ ಲಾಂಗ್​ಆನ್​ನತ್ತ ಸಿಡಿಸಿದ್ದರು. ರಾಕೆಟ್​ನಂತೆ ಬಾನಿನತ್ತ ಚಿಮ್ಮಿದ ಚೆಂಡು ಆ ಬಳಿಕ ಗೋಚರಿಸಿದ್ದು ಸ್ಟೇಡಿಯಂನ ಮೇಲ್ಛಾವಣಿ ಮೇಲೆ. ಹೀಗಾಗಿಯೇ ಇದನ್ನು ಕ್ರಿಕೆಟ್ ಇತಿಹಾಸದ ಬಿಗ್ಗೆಸ್ಟ್ ಸಿಕ್ಸ್ ಎನ್ನಲಾಗಿತ್ತು. ಆದರೀಗ ಲಿವಿಂಗ್​ಸ್ಟನ್ ಬಾರಿಸಿದ್ದು ಕೇವಲ 122 ಮೀಟರ್ ಸಿಕ್ಸ್ ಎಂಬುದು ತಿಳಿದು ಬಂದಿದೆ. ಇದರೊಂದಿಗೆ ಇದು ಬಿಗ್ಗೆಸ್ಟ್ ಸಿಕ್ಸ್ ಅಲ್ಲ ಎಂಬುದು ಕೂಡ ಜಗಜ್ಜಾಹೀರಾಗಿದೆ. ಹಾಗಿದ್ರೆ ಕ್ರಿಕೆಟ್ ಇತಿಹಾಸದಲ್ಲಿ ಬಿಗ್ಗೆಸ್ಟ್ ಸಿಕ್ಸ್ ಬಾರಿಸಿದ್ದು ಯಾರು ಎಂದು ನೋಡುವುದಾದರೆ…

5- ಮಾರ್ಕ್ ವಾ: 1997 ರಲ್ಲಿ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಮಾರ್ಕ್​ ವಾ ನ್ಯೂಜಿಲೆಂಡ್ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಎಸೆತದಲ್ಲಿ 120 ಮೀಟರ್ ಸಿಕ್ಸರ್ ಬಾರಿಸಿದ್ದರು.

4- ಕೋರೆ ಅ್ಯಂಡರ್ಸನ್: 2014 ರಲ್ಲಿ ನ್ಯೂಜಿಲೆಂಡ್ ಆಲ್​ರೌಂಡರ್ ಕೋರೆ ಅ್ಯಂಡರ್ಸನ್ ಭಾರತದ ವೇಗಿ ಮೊಹಮ್ಮದ್ ಶಮಿ ಎಸೆತದಲ್ಲಿ 122 ಮೀಟರ್ ಸಿಕ್ಸ್ ಸಿಡಿಸಿದ್ದರು.

3- ಮಾರ್ಟಿನ್ ಗಪ್ಟಿಲ್: 2012 ರಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್​ಮನ್ ಮಾರ್ಟಿನ್ ಗಪ್ಟಲ್ ಸೌತ್ ಆಫ್ರಿಕಾ ವೇಗಿ ಲೋನ್ವಾಬೊ ತ್ಸೊತ್ಸೊಬೆ ಎಸೆತದಲ್ಲಿ 127 ಮೀಟರ್ ಸಿಕ್ಸ್ ಬಾರಿಸಿದ್ದರು.

2- ಬ್ರೇಟ್ ಲೀ: ಇನ್ನು ಬಿಗ್ಗೆಸ್ಟ್ ಸಿಕ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೇಟ್ ಲೀ ಕೂಡ ಇದ್ದಾರೆ. 2005 ರಲ್ಲಿ ಬ್ರೇಟ್ ಲೀ ವೆಸ್ಟ್ ಇಂಡೀಸ್ ಬೌಲರ್ ಡಾರೆನ್ ಪೊವೆಲ್ ಎಸೆತದಲ್ಲಿ 143 ಮೀಟರ್ ಸಿಕ್ಸ್ ಸಿಡಿಸಿದ್ದರು.

1- ಇನ್ನು ಬಿಗ್ಗೆಸ್ಟ್ ಸಿಕ್ಸ್ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ಹೊಡಿಬಡಿ ಬ್ಯಾಟ್ಸ್​ಮನ್ ಶಾಹಿದ್ ಅಫ್ರಿದಿ ಹೆಸರಿನಲ್ಲಿದೆ. ಅಫ್ರಿದಿ 2013 ರಲ್ಲಿ ಸೌತ್ ಆಫ್ರಿಕಾ ವಿರುದ್ದ 158 ಮೀಟರ್ ಸಿಕ್ಸ್ ಸಿಡಿಸಿದ್ದರು. ರಿಯಾನ್ ಮೆಕ್​ಲರೆನ್ ಎಸೆತದಲ್ಲಿ ಸಿಡಿಸಿದ ಸಿಕ್ಸ್ ಕ್ರಿಕೆಟ್ ಇತಿಹಾಸ ಅತೀ ದೊಡ್ಡ ಸಿಕ್ಸ್ ಎಂಬ ದಾಖಲೆಯನ್ನು ಹೊಂದಿದೆ.

ಹಾಗೆಯೇ ಟೀಮ್ ಇಂಡಿಯಾ ಪರ ಯುವರಾಜ್ ಸಿಂಗ್ ಅತ್ಯಂತ ದೊಡ್ಡ ಸಿಕ್ಸ್ ಬಾರಿಸಿದ್ದರು. 2007 ರಲ್ಲಿ ಯುವಿ ಆಸ್ಟ್ರೇಲಿಯಾ ವೇಗಿ ಬ್ರೆಟ್ ಲೀ ಎಸೆತದಲ್ಲಿ 119 ಮೀಟರ್ ಸಿಕ್ಸ್ ಸಿಡಿಸಿದ್ದು ಭಾರತೀಯ ಬ್ಯಾಟ್ಸ್​ಮನ್​​ನ ದಾಖಲೆಯಾಗಿ ಉಳಿದಿದೆ.