Virat Kohli: ನಿಮ್ಮನ್ನು ಹೆಚ್ಚು ಕಾಡಿದ ಬೌಲರ್ ಯಾರು? ಕೊಹ್ಲಿ ನೀಡಿದ್ರು ಅಚ್ಚರಿಯ ಉತ್ತರ.. ಏನದು?

Virat Kohli: ವಾಸಿಮ್ ಅಕ್ರಮ್ ಹೆಸರನ್ನು ಪ್ರಸ್ತಾಪಿಸಿದರು. ವಾಸಿಮ್ ಅಕ್ರಮ್ ಇತ್ತೀಚಿನ ದಿನಗಳಲ್ಲಿ ನನ್ನನ್ನು ಕಾಡುತ್ತಿದ್ದರು, ಎಂದು ವಿರಾಟ್ ಅಭಿಮಾನಿಗಳಿಗೆ ಉತ್ತರಿಸಿದರು.

Virat Kohli: ನಿಮ್ಮನ್ನು ಹೆಚ್ಚು ಕಾಡಿದ ಬೌಲರ್ ಯಾರು? ಕೊಹ್ಲಿ ನೀಡಿದ್ರು ಅಚ್ಚರಿಯ ಉತ್ತರ.. ಏನದು?
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: May 30, 2021 | 4:11 PM

ವಿಶ್ವ ಕ್ರಿಕೆಟ್‌ನಲ್ಲಿ ಪ್ರಸ್ತುತ ಪ್ರಮುಖ ಕ್ರಿಕೆಟಿಗ ಭಾರತೀಯ ನಾಯಕ ವಿರಾಟ್ ಕೊಹ್ಲಿ .ಅವರ 12 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಅವರು ಅನೇಕ ಅನುಭವಿ ಬೌಲರ್‌ಗಳನ್ನು ಎದುರಿಸಿದ್ದಾರೆ. ಲಸಿತ್ ಮಾಲಿಂಗ, ಬ್ರೆಟ್ ಲೀ, ಡೇಲ್ ಸ್ಟೇನ್, ಮಿಚೆಲ್ ಜಾನ್ಸನ್, ಜೇಮ್ಸ್ ಆಂಡರ್ಸನ್, ಪ್ಯಾಟ್ ಕಮ್ಮಿನ್ಸ್‌ರವರೆಗೆ, ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್‌ಗಳು ವಿರಾಟ್ ಬ್ಯಾಟ್‌ ಘರ್ಜನೆಗೆ ಮಂಕಾಗಿ ಹೋಗಿದ್ದಾರೆ. ಈ ಎಲ್ಲರ ವಿರುದ್ಧ ವಿರಾಟ್ ಕೊಹ್ಲಿ ಅವರು ಎಷ್ಟು ಸಾಧ್ಯವೋ ಅಷ್ಟು ರನ್ ಗಳಿಸಿದರು. ಈ ಅನುಭವಿ ಬೌಲರ್‌ಗಳು ಸಹ ವಿರಾಟ್‌ರನ್ನು ಕೆಲವೊಮ್ಮೆ ತೊಂದರೆಗೆ ಸಿಲುಕಿಸಿದ್ದಾರೆ. ಆದರೆ ಈ ಎಲ್ಲರ ವಿಕ್ನೇಸ್ ಹುಡುಕುತ್ತಿರುವ ವಿರಾಟ್, ಮೈದಾನದ ನಾಲ್ಕು ಮೂಲೆಗಳಲ್ಲಿ ಅವರ ವಿರುದ್ಧ ರನ್ ಗಳಿಸಿದರು. ನೀವು ಯಾವ ಬೌಲರ್‌ಗಳಿಗೆ ಹೆದರುತ್ತೀರಿ? ಅಥವಾ ಯಾವ ಬೌಲರ್‌ಗಳನ್ನು ಎದುರಿಸಲು ನಿಮಗೆ ಕಷ್ಟವಾಗುತ್ತದೆ? ಎಂದು ವಿರಾಟ್ ಅವರನ್ನು ಕೇಳಿದರೆ ವಿರಾಟ್ ಹೇಳಿದ ಹೆಸರ್ಯಾವುದು ಗೊತ್ತಾ? ವಿರಾಟ್ ಒಬ್ಬ ಮಹಾನ್ ಬೌಲರ್ ಹೆಸರನ್ನು ಉಲ್ಲೇಖಿಸಿದ್ದಾರೆ .. ಆ ಬೌಲರ್ ಪಾಕಿಸ್ತಾನದ ಮಾಜಿ ಹಿರಿಯ ಬೌಲರ್ ವಾಸಿಮ್ ಅಕ್ರಮ್.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ ಫೈನಲ್ 2021) ಜೂನ್ 18 ರಿಂದ 22 ರವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಈ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಇದೇ ಪ್ರವಾಸದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತ ತಂಡ ಜೂನ್ 2 ರಂದು ಇಂಗ್ಲೆಂಡ್‌ಗೆ ತೆರಳಲಿದೆ.

ವಾಸಿಮ್ ಅಕ್ರಮ್ ವಿರುದ್ಧ ಆಡುವುದು ಸವಾಲಿನ ಕೆಲಸ ಇದಕ್ಕೂ ಮುನ್ನ, ಇಡೀ ತಂಡವನ್ನು ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ನಾಯಕ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಇನ್ಸ್ಟಾಗ್ರಾಮ್ನಲ್ಲಿ, ಯಾವ ಬೌಲರ್ ಎದುರು ಆಡಲು ನಿಮಗೆ ಕಷ್ಟ ಅಥವಾ ಸವಾಲು ಇದೆ? ಎಂಬ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಕೊಹ್ಲಿ, ವಾಸಿಮ್ ಅಕ್ರಮ್ ಹೆಸರನ್ನು ಪ್ರಸ್ತಾಪಿಸಿದರು. ವಾಸಿಮ್ ಅಕ್ರಮ್ ಇತ್ತೀಚಿನ ದಿನಗಳಲ್ಲಿ ನನ್ನನ್ನು ಕಾಡುತ್ತಿದ್ದರು, ಎಂದು ವಿರಾಟ್ ಅಭಿಮಾನಿಗಳಿಗೆ ಉತ್ತರಿಸಿದರು.

ಅಭಿಮಾನಿಗಳಿಂದ ನಿರ್ಭೀತ ಪ್ರಶ್ನೆಗಳು, ವಿರಾಟ್ ಅವರಿಂದ ಹೃತ್ಪೂರ್ವಕ ಉತ್ತರಗಳು ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ತಂಡದ ಆಟಗಾರರು ಇಂಗ್ಲೆಂಡ್‌ಗೆ ತೆರಳುವ ಮುನ್ನ ಮುಂಬೈ ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಏತನ್ಮಧ್ಯೆ, ವಿರಾಟ್ ತಮ್ಮ ಅಭಿಮಾನಿಗಳೊಂದಿಗೆ ಆನ್‌ಲೈನ್‌ನಲ್ಲಿ ಚಾಟ್ ಮಾಡುತ್ತಾ ಸಮಯ ಕಳೆದಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಹೇಳಿದ ಕೊಹ್ಲಿ, ಆ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದ್ದಾರೆ. ಸ್ವಾಭಾವಿಕವಾಗಿ ಅಭಿಮಾನಿಗಳು ಬಯಸಿದ್ದು ಇದನ್ನೇ. ! ಅಭಿಮಾನಿಗಳು ಹಲವಾರು ವಿಷಯಗಳ ಬಗ್ಗೆ ದಿಟ್ಟ ಪ್ರಶ್ನೆಗಳನ್ನು ಕೇಳಿದರು. ವಿರಾಟ್ ಅವರ ಪ್ರಶ್ನೆಗಳಿಗೆ ಹೃತ್ಪೂರ್ವಕವಾಗಿ ಉತ್ತರಿಸಿದರು.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್