ನಮ್ಮ ಕೌಶಲ್ಯವನ್ನು ತೋರಿಸಲು ಇದು ಸುವರ್ಣಾವಕಾಶ! ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನಾಯಕ ಧವನ್ ಹೇಳಿದ್ದಿಷ್ಟು
ಭಾರತ ತಂಡವು ಜೂನ್ 28 ರಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಅನೇಕ ಹೊಸ ಮತ್ತು ಯುವ ಆಟಗಾರರು ಹಿರಿಯ ತಂಡಕ್ಕೆ ಆಡಿಷನ್ ನಡೆಸಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ಭಾರತೀಯ ತಂಡ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೆಲವು ದಿನಗಳ ರಜೆಯಲ್ಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತ ನಂತರ, ಭಾರತದ ತಂಡದ ಮುಂದಿನ ವೇಳಾಪಟ್ಟಿ ಆಗಸ್ಟ್‌ನಿಂದ. ಏತನ್ಮಧ್ಯೆ, ಶ್ರೀಲಂಕಾದಲ್ಲಿ ನಡೆಯಲಿರುವ ಏಕದಿನ ಮತ್ತು ಟಿ 20 ಸರಣಿಯಲ್ಲಿ ತನ್ನ ಬಲವನ್ನು ತೋರಿಸಲು ಭಾರತದ ಯುವ ಪಡೆ ಸಿದ್ದವಾಗಿದೆ. ಶಿಖರ್ ಧವನ್ ಅವರ ನಾಯಕತ್ವದಲ್ಲಿ, ಭಾರತ ತಂಡವು ಜೂನ್ 28 ರಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಅನೇಕ ಹೊಸ ಮತ್ತು ಯುವ ಆಟಗಾರರು ಹಿರಿಯ ತಂಡಕ್ಕೆ ಆಡಿಷನ್ ನಡೆಸಲಿದ್ದಾರೆ. ಈ ಸರಣಿಯು ಎಲ್ಲಾ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರಿಸಲು ಒಂದು ಅವಕಾಶ ಎಂದು ತಂಡದ ನಾಯಕ ಧವನ್ ಅಭಿಪ್ರಾಯಪಟ್ಟಿದ್ದಾರೆ.
ಜುಲೈ 13 ರಿಂದ ಪ್ರಾರಂಭವಾಗಲಿರುವ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಮತ್ತು 3 ಟಿ 20 ಪಂದ್ಯಗಳನ್ನು ಆಡಲಿದೆ. ಜೂನ್ 14 ರಿಂದ ಮುಂಬೈನಲ್ಲಿ ಕ್ವಾರಂಟೈನ್ ಅವಧಿಯಲ್ಲಿ ಈ ಪ್ರವಾಸಕ್ಕೆ 20 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ. ಈಗ ತಂಡದ ಕ್ವಾರಂಟೈನ್ ಅವಧಿ ಮುಗಿದಿದೆ. ಹೀಗಾಗಿ ಟೀಂ ಇಂಡಿಯಾ ಶ್ರೀಲಂಕಾಕ್ಕೆ ಹೋಗಲು ಸಿದ್ಧವಾಗಿದೆ. ಜೂನ್ 4 ರ ಭಾನುವಾರ, ನಾಯಕ ಶಿಖರ್ ಧವನ್ ಮತ್ತು ತರಬೇತುದಾರ ರಾಹುಲ್ ದ್ರಾವಿಡ್ ಸುಮಾರು 4 ವಾರಗಳ ಈ ಪ್ರವಾಸಕ್ಕೆ ತೆರಳುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದರು.
ಉತ್ತಮ ತಂಡ, ಆಡಲು ಉತ್ಸುಕ ತಂಡದ ಬಗ್ಗೆ ಮಾತನಾಡಿದ ಧವನ್, ಇದು ವಿಭಿನ್ನ ಮತ್ತು ಹೊಸ ಸವಾಲು ಮತ್ತು ತಂಡದ ಪ್ರತಿಯೊಬ್ಬ ಸದಸ್ಯರು ಈ ಪ್ರವಾಸದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಲು ಉತ್ಸುಕರಾಗಿದ್ದಾರೆ ಎಂದರು. ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಆರಂಭಿಕ ಆಟಗಾರ, ಇದು ತುಂಬಾ ಒಳ್ಳೆಯ ತಂಡ. ನಮ್ಮ ತಂಡವು ಸಕಾರಾತ್ಮಕತೆ, ಆತ್ಮವಿಶ್ವಾಸವನ್ನು ಹೊಂದಿದೆ ಮತ್ತು ಪ್ರತಿಯೊಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಹೊಂದಿದ್ದಾರೆ. ಆಟಗಾರರು ತುಂಬಾ ಉತ್ಸುಕರಾಗಿದ್ದಾರೆ. ಇದು ಹೊಸ ಸವಾಲು ಆದರೆ ಅದೇ ಸಮಯದಲ್ಲಿ ನಮ್ಮ ಕೌಶಲ್ಯಗಳನ್ನು ತೋರಿಸಲು ಇದು ನಮಗೆಲ್ಲರಿಗೂ ಒಂದು ಉತ್ತಮ ಅವಕಾಶವಾಗಿದೆ. ಎಲ್ಲರೂ ಇದಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮನ್ನು ತಾವು ಸಾಬೀತುಪಡಿಸಿದ ಆಟಗಾರರು ಎರಡು ವಾರಗಳ ಕಾಲ ಕ್ಯಾರೆಂಟೈನ್‌ನಲ್ಲಿ ಕಳೆದ ನಂತರ ತಂಡದ ಆಟಗಾರರು ಮೈದಾನಕ್ಕೆ ಬರಲು ಉತ್ಸುಕರಾಗಿದ್ದಾರೆ ಮತ್ತು ಶ್ರೀಲಂಕಾ ತಲುಪಿದ ನಂತರ ತಂಡಕ್ಕೆ 10-12 ದಿನಗಳ ತಯಾರಿ ಇದೆ ಎಂದು ಧವನ್ ಹೇಳಿದ್ದಾರೆ. ಹೊಸ ಆಟಗಾರರು ಸಹ ತಮ್ಮ ಸಾಮರ್ಥ್ಯವನ್ನು ವಿವಿಧ ಹಂತಗಳಲ್ಲಿ ತೋರಿಸಿದ್ದಾರೆ ಎಂದು ಅವರು ಹೇಳಿದರು. ಆಟಗಾರರು ಸಿದ್ಧರಾಗಿದ್ದಾರೆ ಮತ್ತು ಅವರು ಈ ಪಂದ್ಯಗಳಲ್ಲಿ ಆಡಲು ಎದುರು ನೋಡುತ್ತಿದ್ದಾರೆ. ಈ ಆಟಗಾರರು ಈಗಾಗಲೇ ಐಪಿಎಲ್ ಮತ್ತು ಇತರ ಪಂದ್ಯಾವಳಿಗಳಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ತಂಡವು ಯುವಕರ ಮತ್ತು ಅನುಭವದ ಉತ್ತಮ ಮಿಶ್ರಣವಾಗಿದೆ ಎಂದು ಭಾರತೀಯ ನಾಯಕ ಹೇಳಿದರು.
ಇದನ್ನೂ ಓದಿ: Glenn Maxwell: ಇಂಗ್ಲೆಂಡ್‌ನ ಪ್ರತಿಷ್ಠಿತ ಕ್ರಿಕೆಟ್ ಲೀಗ್ನಿಂದ ಹಿಂದೆ ಸರಿದ ಗ್ಲೆನ್ ಮ್ಯಾಕ್ಸ್‌ವೆಲ್! ಕಾರಣವೇನು ಗೊತ್ತಾ?