AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ತನ್ನ ನೆಚ್ಚಿನ ಮನೆಯನ್ನು 5 ಕೋಟಿ ರೂ.ಗೆ ಮಾರಿದ ರೋಹಿತ್ ಶರ್ಮಾ! ಖರೀದಿಸಿದವರು ಯಾರು ಗೊತ್ತಾ?

Rohit Sharma: ರೋಹಿತ್ ಅವರ ದೊಡ್ಡ ಮನೆಯನ್ನು ಸುಷ್ಮಾ ಅಶೋಕ್ ಸರಫ್ ಎಂಬ ವ್ಯಕ್ತಿ 5 ಕೋಟಿ 25 ಲಕ್ಷಕ್ಕೆ ಖರೀದಿಸಿದರು. ರೋಹಿತ್ ಶರ್ಮಾ ನೋಂದಣಿ ದಾಖಲಾತಿಗಳಿಗಾಗಿ 26.25 ಲಕ್ಷ ರೂ.ವನ್ನು ಒಪ್ಪಂದದ ಸ್ಟ್ಯಾಂಪ್‌ ಡ್ಯೂಟಿಯಾಗಿ ಪಾವತಿಸಿದ್ದಾರೆ.

Rohit Sharma: ತನ್ನ ನೆಚ್ಚಿನ ಮನೆಯನ್ನು 5 ಕೋಟಿ ರೂ.ಗೆ ಮಾರಿದ ರೋಹಿತ್ ಶರ್ಮಾ! ಖರೀದಿಸಿದವರು ಯಾರು ಗೊತ್ತಾ?
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on: Jul 01, 2021 | 3:36 PM

Share

ಟೀಮ್ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ, ರೋಹಿತ್ ಶರ್ಮಾ ಕೂಡ ತಂಡದ ಭಾಗವಾಗಿ ಅಲ್ಲಿದ್ದಾರೆ. ರೋಹಿತ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಉಪನಾಯಕರಾಗಿದ್ದಾರೆ. ಆದರೆ ಪ್ರಸ್ತುತ, ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಪಾತ್ರವು ಟೆಸ್ಟ್ ತಂಡದ ಮೊದಲ ಆಯ್ಕೆಯಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟೆಸ್ಟ್ ಸರಣಿಯು ಆಗಸ್ಟ್ 4 ರ ಆರಂಭವಾಗಿದೆ. ಅಂತಹ ಸನ್ನಿವೇಶದಲ್ಲಿ, ಭಾರತೀಯ ಆಟಗಾರರು ಡಬ್ಲ್ಯೂಟಿಸಿ ಫೈನಲ್‌ ನಂತರ ಆಟದಿಂದ ಕೊಂಚ ವಿರಾಮ ತೆಗೆದುಕೊಂಡಿದ್ದಾರೆ. ರೋಹಿತ್ ಕೂಡ ತನ್ನ ಮಡದಿ ಹಾಗೂ ಮಗುವಿನೊಂದಿಗೆ ರಜೆಯ ಮಜಾದಲ್ಲಿದ್ದಾರೆ. ಈ ವಿರಾಮದ ಲಾಭವನ್ನು ಪಡೆದುಕೊಂಡು ರೋಹಿತ್ ಶರ್ಮಾ ಲೋನವ್ಲಾದಲ್ಲಿರುವ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಲೋನವ್ಲಾದಲ್ಲಿ ರೋಹಿತ್‌ಗೆ ಒಂದು ದೊಡ್ಡ ಮನೆ ಇತ್ತು, ಇದು ಸುಮಾರು 6259 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಮನೆಯನ್ನು ಮಾರಾಟ ಮಾಡಲು 29 ಮೇ 2021 ರಂದು ಡೀಲ್ ಅನ್ನು ಅಧಿಕೃತವಾಗಿ ಅಂತಿಮಗೊಳಿಸಲಾಯಿತು.

ರೋಹಿತ್ ಅವರ ದೊಡ್ಡ ಮನೆಯನ್ನು ಸುಷ್ಮಾ ಅಶೋಕ್ ಸರಫ್ ಎಂಬ ವ್ಯಕ್ತಿ 5 ಕೋಟಿ 25 ಲಕ್ಷಕ್ಕೆ ಖರೀದಿಸಿದರು. ರೋಹಿತ್ ಶರ್ಮಾ ನೋಂದಣಿ ದಾಖಲಾತಿಗಳಿಗಾಗಿ 26.25 ಲಕ್ಷ ರೂ.ವನ್ನು ಒಪ್ಪಂದದ ಸ್ಟ್ಯಾಂಪ್‌ ಡ್ಯೂಟಿಯಾಗಿ ಪಾವತಿಸಿದ್ದಾರೆ. ರೋಹಿತ್ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ ಎಂದು ಮನಿಕಾಂಟ್ರೋಲ್ ಡಾಟ್ ಕಾಮ್ ವರದಿ ಮಾಡಿದೆ. ಆದಾಗ್ಯೂ, ಈ ಮಾರಾಟದ ಹಿಂದಿನ ನಿಜವಾದ ಕಾರಣವೆಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ದೊಡ್ಡ ಮನೆಯನ್ನು ಖರೀದಿಸಿದ ವ್ಯಕ್ತಿಯ ಹೆಸರೊಂದನ್ನು ಬಿಟ್ಟು, ಅವರ ಬಗ್ಗೆ ಬೇರೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ.

ರಜಾದಿನಗಳನ್ನು ಕಳೆಯುತ್ತಿರುವ ರೋಹಿತ್ 34 ವರ್ಷದ ರೋಹಿತ್ ಶರ್ಮಾ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ತಮ್ಮ ಕುಟುಂಬದೊಂದಿಗೆ ರಜಾದಿನಗಳನ್ನು ಕುಟುಂಬದೊಂದಿಗೆ ಕಳೆಯುವುದರಲ್ಲಿ ನಿರತರಾಗಿದ್ದಾರೆ. ರಜಾದಿನಗಳ ನಂತರ, ಅವರು ನಾಟಿಂಗ್ಹ್ಯಾಮ್ನಲ್ಲಿರುವ ಟೀಮ್ ಇಂಡಿಯಾದ ಶಿಬಿರಕ್ಕೆ ಸೇರಲಿದ್ದಾರೆ. ಅಲ್ಲಿ ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ಗೆ ಸಿದ್ಧತೆಗಳು ನಡೆಯಲಿವೆ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಪಾತ್ರವು ಪ್ರಮುಖವಾಗಿದೆ.

ರೋಹಿತ್​ಗೆ ಉತ್ತಮ ಅವಕಾಶ ಮನೆಯ ಸ್ಥಿತಿಯಲ್ಲಿ ಇಂಗ್ಲೆಂಡ್ ತಂಡ ಪ್ರಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಶರ್ಮಾ ಸೇರಿದಂತೆ ಇಡೀ ತಂಡ ಭಾರತ ಶೀಘ್ರದಲ್ಲೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಇಂಗ್ಲೆಂಡ್ ತಂಡದಲ್ಲಿ ಆಂಡರ್ಸನ್, ಬ್ರಾಡ್, ಬೆನ್ ಸ್ಟೋಕ್ಸ್ ಅವರಂತಹ ಅನುಭವಿ ಬೌಲರ್​ಗಳಿದ್ದಾರೆ. ಹೀಗಾಗಿ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗಬಹುದು. ರೋಹಿತ್ ಶರ್ಮಾ ಅವರ ರನ್-ಸ್ಕೋರಿಂಗ್ ಸರಾಸರಿಯು ಭಾರತವನ್ನು ಹೊರತುಪಡಿಸಿ ವಿದೇಶಗಳಲ್ಲಿ ಅಷ್ಟೇನೂ ಗಮನಾರ್ಹವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಪ್ರವಾಸವು ರೋಹಿತ್​ಗೆ ತನ್ನನ್ನು ತಾನು ಸಾಬೀತುಪಡಿಸಲು ಉತ್ತಮ ಅವಕಾಶವಾಗಿರುತ್ತದೆ.

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು