Dutee Chand: ನಿಷೇಧಿತ ಡ್ರಗ್ ಸೇವನೆ ಆರೋಪ; ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ತಾತ್ಕಾಲಿಕ ಅಮಾನತು

Dutee Chand: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ನಿಷೇಧಿತ ಡ್ರಗ್ ಸೇವಿಸಿರುವುದು ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಧೃಡಪಟ್ಟಿದ್ದು ಅವರನ್ನು ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

Dutee Chand: ನಿಷೇಧಿತ ಡ್ರಗ್ ಸೇವನೆ ಆರೋಪ; ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ತಾತ್ಕಾಲಿಕ ಅಮಾನತು
ದ್ಯುತಿ ಚಂದ್
Edited By:

Updated on: Jan 18, 2023 | 3:35 PM

ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ (Dutee Chand) ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆ (World Anti-Doping Agency) ನಡೆಸಿದ ಡೋಪ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದು ಅವರನ್ನು ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ದ್ಯುತಿ ಅವರ ಮೂತ್ರದ ಮಾದರಿಯ ವರದಿಯು ಪಾಸಿಟಿವ್ ಬಂದಿದ್ದು, ನಿಷೇಧಿತ ಪದಾರ್ಥಗಳನ್ನು ಸೇವಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈಗ ದ್ಯುತಿ ಚಂದ್‌ರನ್ನು ಅಮಾನತುಗೊಳಿಸಿರುವುದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಅವರು ಆಡುವುದರ ಮೇಲೆಯೂ ಅನುಮಾನ ವ್ಯಕ್ತವಾಗಿದೆ.

ದ್ಯುತಿ ಅವರ ಅಮಾನತು ಶಿಕ್ಷೆ ಎಲ್ಲಿಯವರೆಗೆ ಮುಂದುವರೆಯಲಿದೆ. ಹಾಗೂ ಯಾವಾಗ ಕೊನೆಗೊಳಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಏಕೆಂದರೆ, ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದರೆ ಸಂಪೂರ್ಣ ತನಿಖಾ ವರದಿ ಹೊರಬೀಳಬೇಕಾಗಿದೆ. ಡೋಪ್ ಪರೀಕ್ಷೆಯಲ್ಲಿ ವಿಫಲವಾಗಿರುವ ಬಗ್ಗೆ ದ್ಯುತಿ ಚಂದ್ ಅವರಿಗೆ ಪತ್ರ ಬರೆದಿರುವ ಎಎಎಫ್, ಪತ್ರದಲ್ಲಿ ವಿಶೇಷವಾಗಿ ದ್ಯುತಿ ಚಂದ್‌ಗೆ ನಿಷೇಧಿತ ವಸ್ತುಗಳ ಸೇವನೆಯ ಬಗ್ಗೆ ಎಚ್ಚರಿಕೆಯನ್ನೂ ನೀಡಿದೆ.

Rafael Nadal: ಎರಡನೇ ಸುತ್ತಿನಲ್ಲೇ ಸೋತು ಆಸ್ಟ್ರೇಲಿಯನ್ ಓಪನ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ ರಾಫೆಲ್ ನಡಾಲ್!

ಎಎಎಫ್ ಪತ್ರದಲ್ಲಿ ಏನಿದೆ?

ದ್ಯುತಿ ಚಂದ್‌ಗೆ ಎಎಎಫ್ ಬರೆದ ಪತ್ರದಲ್ಲಿರುವುದೆನೆಂದರೆ, ನಿಮ್ಮ ಮೂತ್ರದ ಮಾದರಿ ಪರೀಕ್ಷೆಯನ್ನು ಮಾಡಲಾಗಿದ್ದು, ವಾಡಾ ಸೂಚನೆಗಳ ಪ್ರಕಾರ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಹೇಳಿದೆ. ದ್ಯುತಿ ಚಂದ್ ಅವರ ಮೂತ್ರದ ಮಾದರಿಯನ್ನು 5 ಡಿಸೆಂಬರ್ 2022 ರಂದು ಭುವನೇಶ್ವರದಲ್ಲಿ ತೆಗೆದುಕೊಳ್ಳಲಾಗಿತ್ತು. ಆದಾಗ್ಯೂ, ಪಿಟಿಐ ಮಾಡಿರುವ ವರದಿ ಪ್ರಕಾರ, ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ಯುತಿ, ಫಲಿತಾಂಶ ಪಾಸಿಟಿವ್ ಬಂದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

2022 ರ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ನಡುವೆ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದ್ಯುತಿ ಚಂದ್ ಅವರು 200 ಮೀ ಈವೆಂಟ್‌ನಲ್ಲಿ ಭಾಗವಹಿಸಿದರು. ಆದರೆ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಬಳಿಕ 100 ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದ್ಯುತಿ ಚಂದ್, ಈ ಈವೆಂಟ್​ನ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Wed, 18 January 23

TV9 Web

TV9 Kannada

Read More
Loading...
Unable to load recommendations.
Follow Us