ಸತತ ಆರನೇ ಸೋಲನ್ನು ತಪ್ಪಿಸಲು ಭಾರತ ಶಕ್ತಿಮೀರಿ ಪ್ರಯತ್ನಿಸಬೇಕಿದೆ

ನಾಳೆ ಆಸ್ಟ್ರೇಲಿಯ ವಿರುದ್ಧ ನಡೆಯುವ ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯವನ್ನು ಭಾರತ ಸೋತರೆ, ಸತತವಾಗಿ ಆರು ಪಂದ್ಯಗಳನ್ನು ಸೋತಿರುವ ಅಪಖ್ಯಾತಿಗೆ ಗುರಿಯಾಗುತ್ತದೆ. ಅಂಥ ಸನ್ನಿವೇಶ ಸೃಷ್ಟಿಯಾಗದಿರಲು ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಟೀಮು ತಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರದರ್ಶನವನ್ನು ನೀಡಬೇಕಿದೆ.

ಸತತ ಆರನೇ ಸೋಲನ್ನು ತಪ್ಪಿಸಲು ಭಾರತ ಶಕ್ತಿಮೀರಿ ಪ್ರಯತ್ನಿಸಬೇಕಿದೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 01, 2020 | 8:17 PM

ಬುಧವಾರದಂದು ಕ್ಯಾನ್​ಬೆರಾದಲ್ಲಿ ನಡೆಯಲಿರುವ ಮೂರನೆ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯವನ್ನು ಟೀಮ್ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಗೆಲ್ಲದೆ ಹೋದರೆ, ಕೆಲವು ಅಪಖ್ಯಾತಿಗಳಿಗೆ ಗುರಿಯಾಗಲಿದ್ದಾರೆ. ಈ ಆವೃತ್ತಿಯ ಕ್ರಿಕೆಟ್​ನಲ್ಲಿ ವಿಶ್ವದ ಅಗ್ರಮಾನ್ಯ ತಂಡವಾಗಿರುವ ಭಾರತ ನಾಳಿನ ಪಂದ್ಯವನ್ನು ಗೆಲ್ಲದಿದ್ದರೆ ಕೊಹ್ಲಿಯವರ ನಾಯಕತ್ವದಲ್ಲಿ ಈ ವರ್ಷ ಎರಡನೆ ಬಾರಿಗೆ ಟೀಮ್ ಇಂಡಿಯಾ ವ್ಹೈಟ್​ವಾಶ್ ಆದಂತಾಗುತ್ತದೆ. ಈ ವರ್ಷಾರಂಭದಲ್ಲಿ ನ್ಯೂಜಿಲೆಂಡ್ ತನ್ನ ಹಿತ್ತಲಲ್ಲಿ ನಡೆದ ಸರಣಿಯನ್ನು 3-0 ಅಂತರದಿಂದ ಭಾರತವನ್ನು ಸೋಲಿಸಿತ್ತು. ಆಗಲೂ ಕೊಹ್ಲಿಯೇ ಟೀಮಿನ ನಾಯಕರಾಗಿದ್ದರು.

ಆ ಮೂರು ಪಂದ್ಯಗಳು ಹಾಗೂ ಸಿಡ್ನಿಯಲ್ಲಿ ಆಡಲಾದ ಪ್ರಸಕ್ತ ಸರಣಿಯ ಎರಡು ಪಂದ್ಯಗಳು, ಅಂದರೆ ಕೊಹ್ಲಿ ಸತತವಾಗಿ 5 ಪಂದ್ಯಗಳನ್ನು ಸೋತಂತಾಗಿದೆ. ಒಂದು ಪಕ್ಷ ನಾಳಿನ ಪಂದ್ಯವನ್ನೂ ಭಾರತ ಸೋತರೆ ತಮ್ಮ ನಾಯಕತ್ವದಲ್ಲಿ ಸತತ ಎರಡು ವ್ಹೈಟ್​ವಾಶ್​ಗಳನ್ನು ಅನುಭವಿಸುವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅಲ್ಲದೆ ಕೊಹ್ಲಿ ಸತತವಾಗಿ 6 ಪಂದ್ಯಗಳನ್ನು ಸೋತು ಸುನಿಲ್ ಗವಾಸ್ಕರ್ ಅವರ ಅಹಿತಕರವಲ್ಲದ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ.

ಸತತವಾಗಿ 5 ಪಂದ್ಯಗಳನ್ನು ಭಾರತ ಸೋತಿರುವುದು ನಿಜಕ್ಕೂ ಬೇಗ ಮರೆತುಹೋಗಬೇಕೆನ್ನುವ ದಾಖಲೆ. ಈ ಅಪಖ್ಯಾತಿಗೆ ಒಳಗಾಗಿರುವ ಭಾರತದ ಇತರ ಕ್ಯಾಪ್ಟನ್​ಗಳೆಂದರೆ, ದಿಲಿಪ್ ವೆಂಗ್​ಸರ್ಕಾರ್, ರವಿ ಶಾಸ್ತ್ರಿ, ಮತ್ತು ಮಹೇಂದ್ರಸಿಂಗ್ ಧೋನಿ. ಒಂದು ದಿನದ ಪಂದ್ಯಗಳಲ್ಲಿ ಭಾರತದ ಇದುವರೆಗಿನ ಅತಿಕೆಟ್ಟ ಪ್ರದರ್ಶನ 1981ರಲ್ಲಿ ಬಂದಿತ್ತು. ಈ ಆವೃತ್ತಿಯ ಕ್ರಿಕೆಟ್​ನಲ್ಲಿ ಆಗ ಸಾಧಾರಣ ತಂಡವೆನಿಸಿಕೊಂಡಿದ್ದ ಭಾರತ ಸತತವಾಗಿ 8 ಪಂದ್ಯಗಳನ್ನು ಸೋತಿತ್ತು.

ಆದರೆ, ಕಳೆದೊಂದು ದಶಕದಲ್ಲಿ ಟೀಮ್ ಇಂಡಿಯಾದ ದಾಖಲೆ, ಕೀರ್ತಿ ಬಹಳ ಭಿನ್ನವಾಗಿದೆ. 2011 ರಲ್ಲಿ ವಿಶ್ವಕಪ್​ ಗೆದ್ದಿರುವುದು, ಎರಡು ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದು ಮತ್ತು ವಿಶ್ವದೆಲ್ಲೆಡೆ ಒಂದು ದಿನದ ಪಂದ್ಯಗಳ ಸರಣಿಗಳನ್ನು ಗೆದ್ದಿರುವುದು ಭಾರತ ಈ ಆವೃತ್ತಿಯಲ್ಲಿ ಅಗ್ರಮಾನ್ಯ ತಂಡಗಳಲ್ಲೊಂದು ಎನ್ನುವುದು ಸಾಬೀತಾಗಿದೆ.

ಆದರೆ, ಈ ವರ್ಷ ಭಾರತದ ಪ್ರದರ್ಶನಗಳು, ಆಸ್ಟ್ರೇಲಿಯ ವಿರುದ್ಧ ವರ್ಷದ ಆರಂಭದಲ್ಲಿ 2-1ರಿಂದ ಸರಣಿ ಗೆದ್ದಿದ್ದು ಬಿಟ್ಟರೆ ಕಳಪೆಯಾಗಿವೆ. ಸತತ 5 ಸೋಲುಗಳು ಭಾರತದ ಪ್ರತಿಷ್ಠೆಗೆ ಘಾಸಿಯನ್ನುಂಟು ಮಾಡಿವೆ. ಕೊಹ್ಲಿಗೆ ಮತ್ತು ಅವರ ಟೀಮಿನ ಸದಸ್ಯರಿಗೆ ಇದರ ಅರಿವಿದೆ. ಕೊವಿಡ್-19 ಸಾಂಕ್ರಾಮಿಕ ರೋಗ ಸೃಷ್ಟಿಸಿದ ಭಯಾನಕ ಸನ್ನಿವೇಶದಿಂದಾಗಿ ಒಂದು ವರ್ಷದ ಮಟ್ಟಿಗೆ ಭಾರತೀಯರು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಿದ್ದರೆನ್ನುವುದು ನಿಜವಾದರೂ ಅದನ್ನೇ ಕಳಪೆ ಪ್ರರ್ದರ್ಶನಗಳಿಗೆ ಕಾರಣ ಅಂತ ಹೇಳಲಾಗದು. ಯಾಕೆಂದರೆ, ಸೆಪ್ಟೆಂಬರ್​ನಿಂದ ನವೆಂಬರ್​ವರೆಗೆ ಭಾರತದ ಆಟಗಾರರೆಲ್ಲ ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಕ್ರೀಡಾ ಚಟುವಟಿಕೆಗಳು ಕೇವಲ ಭಾರತದಲ್ಲಿ ಮಾತ್ರ ನಿಷೇಧಗೊಂಡಿರಲಿಲ್ಲ, ವಿಶ್ವದೆಲ್ಲೆಡೆ ಅದೇ ಸ್ಥಿತಿಯಿತ್ತು.

ವಿರಾಟ್ ಕೊಹ್ಲಿ

ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ