AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey Asia Cup 2025: ಒಂದರ ಹಿಂದೆ ಒಂದರಂತೆ 15 ಗೋಲು ಬಾರಿಸಿ ಗೆದ್ದ ಭಾರತ ಹಾಕಿ ತಂಡ

Hockey Asia Cup 2025: ಭಾರತದ ಹಾಕಿ ತಂಡವು ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಸತತ ಮೂರನೇ ಗೆಲುವು ಸಾಧಿಸಿದೆ. ಕಝಾಕಿಸ್ತಾನವನ್ನು 15-0 ಅಂತರದಿಂದ ಸೋಲಿಸಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಚೀನಾ ಮತ್ತು ಜಪಾನ್ ವಿರುದ್ಧದ ಗೆಲುವಿನ ನಂತರ ಇದು ಭಾರತದ ಹ್ಯಾಟ್ರಿಕ್ ಜಯವಾಗಿದೆ. ಈ ಗೆಲುವಿನೊಂದಿಗೆ ಭಾರತ 9 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸೂಪರ್ 4 ರಲ್ಲಿ ಮಲೇಷ್ಯಾ ಮತ್ತು ಕೊರಿಯಾ ಕೂಡ ಸ್ಥಾನ ಪಡೆದಿವೆ.

Hockey Asia Cup 2025: ಒಂದರ ಹಿಂದೆ ಒಂದರಂತೆ 15 ಗೋಲು ಬಾರಿಸಿ ಗೆದ್ದ ಭಾರತ ಹಾಕಿ ತಂಡ
Hockey Team
ಪೃಥ್ವಿಶಂಕರ
|

Updated on:Sep 01, 2025 | 10:39 PM

Share

ಬಿಹಾರದ ರಾಜ್‌ಗಿರ್‌ನಲ್ಲಿ ನಡೆಯುತ್ತಿರುವ ಹಾಕಿ ಏಷ್ಯಾಕಪ್‌ನಲ್ಲಿ (Hockey Asia Cup) ಭಾರತ ಹಾಕಿ ತಂಡದ ಗೆಲುವಿನ ಓಟ ಮುಂದುವರೆದಿದೆ. ಸತತ ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಹರ್ಮನ್​ಪ್ರೀತ್ ಸಿಂಗ್ (Harmanpreet Singh) ಪಡೆ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು ಮಣಿಸಿದ್ದ ಭಾರತ ತಂಡ ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿತ್ತು. ಇದೀಗ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಕಝಾಕಿಸ್ತಾನ್ ತಂಡವನ್ನು ಏಕಪಕ್ಷೀಯ ಸೋಲಿಸಿತು. ಕುತೂಹಲಕಾರಿ ವಿಷಯವೆಂದರೆ ಈ ಪಂದ್ಯದಲ್ಲಿ ಕಝಾಕಿಸ್ತಾನ್ ತಂಡಕ್ಕೆ ಒಂದೇ ಒಂದು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತ ತಂಡ ಮಾತ್ರ ಒಂದರ ಹಿಂದೆ ಒಂದರಂತೆ 15 ಗೋಲುಗಳನ್ನು ಬಾರಿಸಿ ಸೂಪರ್ 4 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಭಾರತಕ್ಕೆ ಹ್ಯಾಟ್ರಿಕ್ ಜಯ

ಈ ಬಾರಿ ಭಾರತ ತಂಡ ಹಾಕಿ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಭಾರತ, ಚೀನಾವನ್ನು 4-3 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಇದರ ನಂತರ, ಭಾರತ ಎರಡನೇ ಪಂದ್ಯದಲ್ಲಿ ಜಪಾನ್‌ ತಂಡವನ್ನು 3-2 ಅಂತರದಿಂದ ಗೆದ್ದುಕೊಂಡಿತು. ಇದೀಗ ಕಝಾಕಿಸ್ತಾನ್ ತಂಡದ ವಿರುದ್ಧ 15-0 ಅಂತರದಿಂದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಇತ್ತ ಕಝಾಕಿಸ್ತಾನ್ ತಂಡಕ್ಕೆ ಗೋಲು ಗಳಿಸಲು ಕೆಲವು ಅವಕಾಶಗಳನ್ನು ಸಿಕ್ಕರೂ, ಅದರಲ್ಲಿ ಯಶಸ್ವಿಯಾಗಲಿಲ್ಲ.

ಆಟ ಹೀಗಿತ್ತು

ಪಂದ್ಯದ 5 ನೇ ನಿಮಿಷದಲ್ಲಿ ಅಭಿಷೇಕ್ ಮೊದಲ ಗೋಲು ಬಾರಿಸುವ ಮೂಲಕ ಭಾರತ ತಂಡದ ಖಾತೆ ತೆರೆದರು. ನಂತರ 8 ನೇ ನಿಮಿಷದಲ್ಲಿಯೂ ಮತ್ತೊಂದು ಗೋಲು ಬಾರಿಸುವಲ್ಲಿ ಅಭಿಷೇಕ್ ಯಶಸ್ವಿಯಾದರು. ಆ ಬಳಿಕ ಪಂದ್ಯದ 20 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದ ಅಭಿಷೇಕ್ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಹೀಗಾಗಿ ಪಂದ್ಯದ ಮೊದಲಾರ್ಧ ಮುಗಿಯುವ ಹೊತ್ತಿಗೆ ಭಾರತ ತಂಡ 7-0 ಅಂತರದಿಂದ ಮುನ್ನಡೆ ಸಾಧಿಸಿತ್ತು.

ಸುಖ್‌ಜೀತ್ ಹ್ಯಾಟ್ರಿಕ್ ಗೋಲು

ದ್ವಿತೀಯಾರ್ಧದಲ್ಲಿಯೂ ಪಾರುಪತ್ಯ ಮುಂದುವರೆಸಿದ ಭಾರತ ತಂಡ ಆಟ ಆರಂಭವಾದ 30 ಸೆಕೆಂಡುಗಳಲ್ಲಿಯೇ 8 ನೇ ಗೋಲು ಗಳಿಸಿತು. ಅಲ್ಲದೆ ದ್ವಿತೀಯಾರ್ಧದ 101 ಸೆಕೆಂಡುಗಳಲ್ಲಿ 3 ಗೋಲುಗಳನ್ನು ಬಾರಿಸಿ ಅಂತರವನ್ನು 10-0 ಗೆ ಏರಿಸಿತು. ದ್ವಿತೀಯಾರ್ಧದಲ್ಲಿ ಭಾರತದ ಸುಖ್ಜೀತ್ ಸಿಂಗ್ ತಮ್ಮ ಹ್ಯಾಟ್ರಿಕ್ ಗೋಲುಗಳನ್ನು ಪೂರ್ಣಗೊಳಿಸಿದರು. ಅಂತಿಮವಾಗಿ, 59 ನೇ ನಿಮಿಷದಲ್ಲಿ, ಅಭಿಷೇಕ್ ತಮ್ಮ ನಾಲ್ಕನೇ ಮತ್ತು ತಂಡದ 15 ನೇ ಗೋಲು ಬಾರಿಸಿ ತಂಡಕ್ಕೆ 15-0 ಅಂತರದ ಏಕಪಕ್ಷೀಯ ಜಯವನ್ನು ತಂದುಕೊಟ್ಟರು. ಭಾರತ ಪರ, ಅಭಿಷೇಕ್ 4, ಸುಖ್ಜೀತ್ 3, ನಾಯಕ ಹರ್ಮನ್‌ಪ್ರೀತ್ 2 ಮತ್ತು ಜುಗ್ರಾಜ್ ಸಿಂಗ್ ಕೂಡ 2 ಗೋಲುಗಳನ್ನು ಬಾರಿಸಿದರು.

ಸೂಪರ್-4 ಸುತ್ತಿಗೆ 4 ತಂಡಗಳು ಎಂಟ್ರಿ

ಸೂಪರ್-4 ಸುತ್ತಿಗೆ ಈಗಾಗಲೇ 4 ತಂಡಗಳು ಎಂಟ್ರಿಕೊಟ್ಟಿವೆ. ಪೂಲ್ ಎ ನಿಂದ ಭಾರತ ಹಾಗೂ ಚೀನಾ ಎಂಟ್ರಿಕೊಟ್ಟಿವೆ. ಭಾರತ ತಂಡ ಒಟ್ಟು ಮೂರು ಗೆಲುವುಗಳೊಂದಿಗೆ 9 ಅಂಕಗಳನ್ನು ಹೊಂದಿದ್ದರೆ, ಚೀನಾ ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ. ಇನ್ನು ಪೂಲ್ ಬಿ ಬಗ್ಗೆ ಹೇಳುವುದಾದರೆ, ಮಲೇಷ್ಯಾ ಮತ್ತು ಕೊರಿಯಾ ಸೂಪರ್ 4 ಗೆ ಪ್ರವೇಶಿಸಿವೆ. ಮಲೇಷ್ಯಾ ತನ್ನ ಎಲ್ಲಾ ಪಂದ್ಯಗಳನ್ನು ಗೆದ್ದು 9 ಅಂಕಗಳನ್ನು ಹೊಂದಿದ್ದರೆ, ಕೊರಿಯಾ 6 ಅಂಕಗಳನ್ನು ಹೊಂದಿದೆ. ಸೂಪರ್ 4 ರಲ್ಲಿನ ಪಂದ್ಯಗಳ ಬಗ್ಗೆ ಮಾತನಾಡಿದರೆ, ಎಲ್ಲಾ ನಾಲ್ಕು ತಂಡಗಳು ಪರಸ್ಪರ ಒಂದು ಪಂದ್ಯವನ್ನು ಆಡುತ್ತವೆ. ಅಂದರೆ, ಚೀನಾವನ್ನು ಹೊರತುಪಡಿಸಿ, ಭಾರತವು ಮಲೇಷ್ಯಾ ಮತ್ತು ಕೊರಿಯಾವನ್ನು ಸಹ ಎದುರಿಸಬೇಕಾಗುತ್ತದೆ. ಅದರ ನಂತರ, ಅಗ್ರ ತಂಡಗಳು ಫೈನಲ್‌ಗೆ ಹೋಗುತ್ತವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:34 pm, Mon, 1 September 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ