AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಚೆನ್ನೈ ಹಾಗೂ ಡೆಲ್ಲಿ ನಡುವಿನ ಪಂದ್ಯದ ರೋಚಕ ಕ್ಷಣಗಳಿವು

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 44 ರನ್​ಗಳಿಂದ ಹೀನಾಯ ಸೋಲು ಅನುಭವಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವೀ ಶಾ ಉತ್ತಮ ಆಟ ಆಡಿ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಉತ್ತಮ ಆಟ ಆಡಿದ ಪೃಥ್ವೀ ಶಾ ಚೆನ್ನೈ ಬೌಲರ್​ಗಳನ್ನು ಚೆನ್ನಾಗಿಯೇ ದಂಡಿಸಿದರು. 64 ರನ್ ಗಳಿಸಿದ ಪೃಥ್ವೀ ಶಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ಈ ಐಪಿಎಲ್​ ಆವೃತ್ತಿಯಲ್ಲಿ ಉತ್ತಮ ಆಟವಾಡುತ್ತಿರುವ ಡು […]

IPL 2020: ಚೆನ್ನೈ ಹಾಗೂ ಡೆಲ್ಲಿ ನಡುವಿನ ಪಂದ್ಯದ ರೋಚಕ ಕ್ಷಣಗಳಿವು
ಸಾಧು ಶ್ರೀನಾಥ್​
|

Updated on:Sep 26, 2020 | 4:36 PM

Share

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ದುಬೈ ಅಂತರರಾಷ್ಟೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 44 ರನ್​ಗಳಿಂದ ಹೀನಾಯ ಸೋಲು ಅನುಭವಿಸಿದೆ.

ಆರಂಭಿಕರಾಗಿ ಕಣಕ್ಕಿಳಿದ ಪೃಥ್ವೀ ಶಾ ಉತ್ತಮ ಆಟ ಆಡಿ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಉತ್ತಮ ಆಟ ಆಡಿದ ಪೃಥ್ವೀ ಶಾ ಚೆನ್ನೈ ಬೌಲರ್​ಗಳನ್ನು ಚೆನ್ನಾಗಿಯೇ ದಂಡಿಸಿದರು. 64 ರನ್ ಗಳಿಸಿದ ಪೃಥ್ವೀ ಶಾ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಈ ಐಪಿಎಲ್​ ಆವೃತ್ತಿಯಲ್ಲಿ ಉತ್ತಮ ಆಟವಾಡುತ್ತಿರುವ ಡು ಪ್ಲೆಸಿಸ್​ ತಮ್ಮ ಅಧ್ಬುತ ಫಾರ್ಮ್​ ಅನ್ನು ಈ ಪಂದ್ಯದಲೂ ಸಹ ಮುಂದುವರೆಸಿದರು. ಆದರೆ ಚೆನ್ನೈ ತಂಡದ ಉಳಿದ ಆಟಗಾರರಿಂದ ಸರಿಯಾದ ಬೆಂಬಲ ಸಿಗದ ಕಾರಣ ಪಂದ್ಯ ಗೆಲ್ಲಿಸುವಲ್ಲಿ ವಿಫಲವಾದರು.

ನೆನ್ನೆಯ ಪಂದ್ಯದಲ್ಲಿ ಡೆಲ್ಲಿ ತಂಡದ ಬ್ಯಾಟಿಂಗ್ ಉತ್ತಮವಾಗಿತ್ತು. ಆರಂಭಿಕರು ಹಾಕಿಕೊಟ್ಟ ಉತ್ತಮ ಅಡಿಪಾಯನ್ನು ಸದುಪಯೋಗ ಮಾಡಿಕೊಂಡ ಶ್ರೇಯಸ್ ಹಾಗೂ ಪಂತ್​ ತಂಡದ ರನ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಡೆಲ್ಲಿ ತಂಡ ಸ್ಪರ್ಧಾತ್ಮಕ ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಪೃಥ್ವೀ ಶಾ ಅವರ ಬ್ಯಾಟಿಂಗ್ ಆಧ್ಬುತವಾಗಿತ್ತು. ಹೀಗೆ ಬ್ಯಾಟಿಂಗ್ ಮಾಡುವ ವೇಳೆ ಪೃಥ್ವೀ ಶಾ ಕಣ್ಣಿಗೆ ದೂಳು ಬಿದ್ದ ಸಮಯದಲ್ಲಿ ಎದುರಾಳಿ ತಂಡದ ನಾಯಕ ಧೋನಿ ಪೃಥ್ವೀ ಶಾಗೆ ಸಹಾಯ ಮಾಡಿದ್ದು ಹೀಗೆ.

ಚೆನ್ನೈ ತಂಡದಲ್ಲಿ ಆಡುತ್ತಿರುವ ಇಂಗ್ಲೆಂಡ್​ನ ಯುವ ಆಟಗಾರ ಸ್ಯಾಮ್ ಕರನ್ ಅವರ ಬೌಲಿಂಗ್ ಉತ್ತಮವಾಗಿತ್ತು. ವಿಶೇಷವಾಗಿ ಡೆತ್ ಓವರ್​ಗಳಲ್ಲಿ ಅಧ್ಬುತ ಬೌಲಿಂಗ್ ಮಾಡಿದ ಕರನ್ ಡೆಲ್ಲಿಯ ಪ್ರಮುಖ ದಾಂಡಿಗರು ರನ್ ಗಳಿಸಲು ತೆಣಕಾಡುವಂತೆ ಮಾಡಿದರು.

ಡೆಲ್ಲಿ ಪರ ಮಾರಕ ದಾಳಿ ನಡೆಸಿದ ರಬಾಡ 4 ಓವರ್ ಬೌಲಿಂಗ್ ಮಾಡಿ ಕೇವಲ 26 ರನ್ ನೀಡಿ ಚೆನ್ನೈ ತಂಡದ ಪ್ರಮುಖ 3 ದಾಂಡಿಗರ ವಿಕೆಟ್​ ಕಬಳಿಸುವಲ್ಲಿ ಯಶಸ್ವಿಯಾದರು.

ಚೆನ್ನೈ ತಂಡದ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿವ ಶೇನ್ ವಾಟ್ಸನ್​ ಚೆನ್ನೈ ತಂಡದ ಪ್ರಮುಖ ಬ್ಯಾಟಿಂಗ್​ ಅಸ್ರ್ತವಾಗಿದ್ದಾರೆ. ಕೆಲವು ವರ್ಷಗಳಿಂದ ಚೆನ್ನೈ ತಂಡದ ಪರವಾಗಿ ಆಡುತ್ತಿರುವ ವಾಟ್ಸನ್​ ತಂಡದ ಪರ 1000 ರನ್ ಪೂರೈಸಿದರು.

Published On - 4:27 pm, Sat, 26 September 20