IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದ ಆಟಗಾರ ಸಂಗತಿ ಹೀಗಿದೆ.
ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ!
ಸದ್ಯ ಆರ್ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ ವರದಿ ಇಲ್ಲಿದೆ.
2 ಪಂದ್ಯಕ್ಕೆ ಆಸಿಸ್, ಆಂಗ್ಲೋ ಕ್ರಿಕೆಟಿಗರು ಅಲಭ್ಯ!
ಚೆನ್ನೈ- ಸ್ಯಾಮ್ ಕರ್ರನ್, ಜೋಷ್ ಹೆಜಲ್ವುಡ್
ಡೆಲ್ಲಿ- ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋನಿಸ್
ಕೆಕೆಆರ್- ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್, ಟಾಮ್ ಬೆಂಟೊನ್
ಪಂಜಾಬ್- ಗ್ಲೇನ್ ಮ್ಯಾಕ್ಸ್ವೆಲ್
ಹೈದ್ರಾಬಾದ್- ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಜಾನಿ ಬೆರಿಸ್ಟೊ
ರಾಜಸ್ಥಾನ್- ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ಟಾಮ್ ಕರ್ರನ್, ಬೆನ್ ಸ್ಟೋಕ್ಸ್
ಸದ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು ICC ನಿಯಮದ ಬಯೊ ಬಬಲ್ ಅಡಿಯಲ್ಲಿದ್ದಾರೆ. ಹೀಗಾಗಿ ದುಬೈನಲ್ಲಿ ಯಾವುದೇ ಕ್ವಾರಂಟೈನ್ ಇರೋದಿಲ್ಲ ಅಂತಾ ಬಿಸಿಸಿಐ ತಿಳಿಸಿತ್ತು. ಆದ್ರೀಗ ಕೊರೊನಾ ದೃಷ್ಟಿಯಿಂದ ಯಾರೂ ರಿಸ್ಕ್ ತಗೆದುಕೊಳ್ಳೋದಕ್ಕೆ ರೆಡಿಯಿಲ್ಲ. ಹೀಗಾಗಿ ಎರಡು ತಂಡಗಳ ಆಟಗಾರರು, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗೋ ಸಾಧ್ಯತೆಯಿದೆ.
Published On - 12:26 pm, Fri, 11 September 20