RCB ಮೇಲಿನ ಕನ್ನಡಿಗರ ಅಭಿಮಾನ, ಪಂಜಾಬ್ ಕಿಂಗ್ಸ್ ಮೇಲೂ ಇದೆ! ಯಾಕೆ ಗೊತ್ತಾ?

RCB ಮೇಲಿನ ಕನ್ನಡಿಗರ ಅಭಿಮಾನ, ಪಂಜಾಬ್ ಕಿಂಗ್ಸ್  ಮೇಲೂ ಇದೆ! ಯಾಕೆ ಗೊತ್ತಾ?

ಈ ಬಾರಿಯ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಆರ್​ಸಿಬಿ ಮೇಲಿನ ಕನ್ನಡಿಗರ ಅಭಿಮಾನ, ಕಿಂಗ್ಸ್ ಇಲೆವೆನ್ ಪಂಜಾಬ್ ಮೇಲೂ ಇದೆ. ಪ್ರೀತಿ ಜಿಂಟಾ ಒಡೆತನದ ತಂಡವನ್ನ, ಈ ಬಾರಿ ಕಿಂಗ್ಸ್ ಇಲೆವೆನ್ ಕರ್ನಾಟಕ ಅಂದ್ರು ತಪ್ಪಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಆರು ಮಂದಿ ಕನ್ನಡಿಗರಿದ್ದಾರೆ. ಹಾಗಾದ್ರೆ, ಪಂಜಾಬ್ ತಂಡದಲ್ಲಿರೋ ಕನ್ನಡಿಗರು ಯಾಱರು ಅನ್ನೋದನ್ನ ನೋಡಿ. ನಂಬರ್ 1: ಅನಿಲ್ ಕುಂಬ್ಳೆ, ಕೋಚ್.. ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ಸ್ಪಿನ್ ದಿಗ್ಗಜ ಅನಿಲ್ […]

sadhu srinath

|

Sep 17, 2020 | 2:20 PM

ಈ ಬಾರಿಯ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮದಲ್ಲಿ ಆರ್​ಸಿಬಿ ಮೇಲಿನ ಕನ್ನಡಿಗರ ಅಭಿಮಾನ, ಕಿಂಗ್ಸ್ ಇಲೆವೆನ್ ಪಂಜಾಬ್ ಮೇಲೂ ಇದೆ. ಪ್ರೀತಿ ಜಿಂಟಾ ಒಡೆತನದ ತಂಡವನ್ನ, ಈ ಬಾರಿ ಕಿಂಗ್ಸ್ ಇಲೆವೆನ್ ಕರ್ನಾಟಕ ಅಂದ್ರು ತಪ್ಪಿಲ್ಲ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಆರು ಮಂದಿ ಕನ್ನಡಿಗರಿದ್ದಾರೆ. ಹಾಗಾದ್ರೆ, ಪಂಜಾಬ್ ತಂಡದಲ್ಲಿರೋ ಕನ್ನಡಿಗರು ಯಾಱರು ಅನ್ನೋದನ್ನ ನೋಡಿ.

ನಂಬರ್ 1: ಅನಿಲ್ ಕುಂಬ್ಳೆ, ಕೋಚ್.. ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಪಂಜಾಬ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಬ್ಳೆ ಕೋಚ್ ಆಗ್ತಿದ್ದಂತೆ, ಪಂಜಾಬ್ ತಂಡದಲ್ಲಿ ಕರ್ನಾಟಕದ ಪ್ರತಿಭಾವಂತ ಆಟಗಾರರಿಗೆ ಮಣೆಹಾಕಿದ್ದಾರೆ.

ನಂಬರ್ 2: ಕೆ.ರಾಹುಲ್, ನಾಯಕ.. ಟೀಮ್ ಇಂಡಿಯಾ ಕ್ರಿಕೆಟಿಗ ಕನ್ನಡಿಗ ಕೆ.ಎಲ್.ರಾಹುಲ್, ಈ ಬಾರಿ ಪಂಜಾಬ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ರನ್ ಮಳೆಯನ್ನ ಹರಿಸಿದ್ದ ರಾಹುಲ್, ಈ ಬಾರಿ ಪಂಜಾಬ್​ಗೆ ಚಾಂಪಿಯನ್ ಪಟ್ಟ ತಂದುಕೊಡೋದಕ್ಕೆ ಕಾತರರಾಗಿದ್ದಾರೆ.

ನಂಬರ್ 3: ಮಯಾಂಕ್ ಅಗರ್ವಾಲ್, ಬ್ಯಾಟ್ಸ್​ಮನ್ ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಮಯಾಂಕ್ ಅಗರ್ವಾಲ್, ಸೀಸನ್ 12ರಲ್ಲೇ ಪಂಜಾಬ್ ತಂಡವನ್ನ ಸೇರಿಕೊಂಡಿದ್ರು. 13ನೇ ಆವೃತ್ತಿಯಲ್ಲೂ ಮಯಾಂಕ್ ಪಂಜಾಬ್ ಪರ ಆರ್ಭಟಿಸಲು  ರೆಡಿಯಾಗಿದ್ದಾರೆ.

ನಂಬರ್ 4: ಕರುಣ್ ನಾಯರ್, ಬ್ಯಾಟ್ಸ್​ಮನ್ vo : ಕರ್ನಾಟಕ ತಂಡದ ಕ್ಯಾಪ್ಟನ್ ಕರುಣ್ ನಾಯರ್ ಕೂಡ, 12ನೇ ಆವೃತ್ತಿಯಲ್ಲೇ ಪಂಜಾಬ್ ಕ್ಯಾಂಪ್ ಸೇರ್ಪಡೆಗೊಂಡಿದ್ರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ಕರುಣ್, ಈ ಬಾರಿ ಕೋಚ್ ಕುಂಬ್ಳೆ ಮಾರ್ಗದರ್ಶನದಲ್ಲಿ ಬೊಂಬಾಟ್ ಪ್ರದರ್ಶನ ನೀಡೋದಕ್ಕೆ ಸಜ್ಜಾಗಿದ್ದಾರೆ.

ನಂಬರ್ 5: ಕೆ.ಗೌತಮ್, ಆಲ್​ರೌಂಡರ್.. ರಾಜಸ್ಥಾನ ರಾಯಲ್ಸ್​ನಲ್ಲಿದ್ದ ಕನ್ನಡಿಗ ಕೆ.ಗೌತಮ್​ನನ್ನು ಕೋಚ್ ಅನಿಲ್ ಕುಂಬ್ಳೆ, ಪಂಜಾಬ್ ತಂಡಕ್ಕೆ ಕರೆ ತಂದಿದ್ದಾರೆ. ಕಳೆದೆರೆಡು ಸೀಸನ್​ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಗೌತಮ್, ಪಂಜಾಬ್ ಪರ ಗೇಮ್ ಚೇಂಜರ್ ಆಗೋ ಸೂಚನೆ ನೀಡಿದ್ದಾರೆ.

ನಂಬರ್ 6: ಜೆ.ಸುಚಿತ್, ಸ್ಪಿನ್ನರ್.. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಸ್ಪಿನ್ನರ್ ಜೆ.ಸುಚಿತ್​ನನ್ನೂ ಕುಂಬ್ಳೆ, ಪಂಜಾಬ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ಆಗಿರೋ ಸಿಚಿತ್, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ನಲ್ಲಿ ಅಬ್ಬರಿಸೋ ತಾಕತ್ತನ್ನ ಹೊಂದಿದ್ದಾರೆ.

ಒಟ್ನಲ್ಲಿ ಈ ಬಾರಿಯ ಐಪಿಎಲ್​ನಲ್ಲಿ ಪಂಜಾಬ್ ತಂಡದಲ್ಲಿ ಕನ್ನಡಗರೇ ಕಿಂಗ್ ಆಗಿದ್ದಾರೆ. ಹಾಗೇ ಕರ್ನಾಟಕದ ಅಭಿಮಾನಿಗಳು ಸಹ ಪಂಜಾಬ್ ಕನ್ನಡಿಗರ ಮೇಲೂ ಒಂದು ಕಣ್ಣಿಟ್ಟಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada