IPL 2020: RCB vs KXIP ನಡುವಿನ ರೋಚಕ ಹಣಾಹಣಿಯ ತುಣುಕುಗಳು

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡ 97ರನ್​ಗಳ ಸೋಲುಕಂಡಿದೆ. 207ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಆರ್​ಸಿಬಿ 17 ಓವರ್​ಗಳಲ್ಲಿ 109 ರನ್​ಗೆ ಆಲೌಟ್ ಆಯ್ತು. ಇದ್ರೊಂದಿಗೆ ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಐಪಿಎಲ್​ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಮೊದಲಿಗರಾಗಿದ್ದಾರೆ. ರಾಹುಲ್ ಔಟಾಗದೇ 132ರನ್ ಗಳಿಸಿದ್ರೆ, ವಾರ್ನರ್ 126, ಕೊಹ್ಲಿ 113ರನ್ ಗಳಿಸಿದ್ದಾರೆ. ಮಿಸ್ಟರ್ 360 ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್ ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ 400 ಸಿಕ್ಸರ್​ಗಳ […]

IPL 2020: RCB vs KXIP ನಡುವಿನ ರೋಚಕ ಹಣಾಹಣಿಯ ತುಣುಕುಗಳು
sadhu srinath

|

Sep 25, 2020 | 3:50 PM

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡ 97ರನ್​ಗಳ ಸೋಲುಕಂಡಿದೆ. 207ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ಆರ್​ಸಿಬಿ 17 ಓವರ್​ಗಳಲ್ಲಿ 109 ರನ್​ಗೆ ಆಲೌಟ್ ಆಯ್ತು. ಇದ್ರೊಂದಿಗೆ ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ.

ಐಪಿಎಲ್​ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ನಾಯಕರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಮೊದಲಿಗರಾಗಿದ್ದಾರೆ. ರಾಹುಲ್ ಔಟಾಗದೇ 132ರನ್ ಗಳಿಸಿದ್ರೆ, ವಾರ್ನರ್ 126, ಕೊಹ್ಲಿ 113ರನ್ ಗಳಿಸಿದ್ದಾರೆ.

ಮಿಸ್ಟರ್ 360 ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್ ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ 400 ಸಿಕ್ಸರ್​ಗಳ ಕ್ಲಬ್​ಗೆ ಸೇರ್ಪಡೆಗೊಂಡಿದ್ದಾರೆ. ಪಂಜಾಬ್ ವಿರುದ್ಧ ಸಿಕ್ಸ್ ಸಿಡಿಸುವ ಮೂಲಕ ಎಬಿಡಿ, 311 ಪಂದ್ಯಗಳಲ್ಲಿ 400 ಸಿಕ್ಸ್ ಬಾರಿಸಿದ್ದಾರೆ.

ಆರ್​ಸಿಬಿ ತಂಡದ ಯುವ ಆಟಗಾರ ಜೋಶ್ ಫಿಲಿಫ್, ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 1ರನ್ ಗಳಿಸಿದ್ದ ಫಿಲಿಫ್, ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೇಲ್ ಸ್ಟೇನ್ ಬರೋಬ್ಬರಿ 57ರನ್ ನೀಡಿದ್ದಾರೆ. 4 ಓವರ್ ಬೌಲಿಂಗ್ ಮಾಡಿದ ಸ್ಟೇನ್, 57ರನ್ ಬಿಟ್ಟುಕೊಟ್ರು. ಇದು ಈ ಸೀಸನ್​ನಲ್ಲಿ ಬೌಲರ್​ಒಬ್ಬ ಬಿಟ್ಟು ಕೊಟ್ಟ ಅತೀ ಹೆಚ್ಚಿನ ರನ್​ ಆಗಿದೆ.

ಆರ್​ಸಿಬಿ ವಿರುದ್ಧ ಶತಕ ಬಾರಿಸಿದ ಕೆ.ಎಲ್.ರಾಹುಲ್, ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಎರಡು ಪಂದ್ಯಗಳಲ್ಲಿ ಒಂದು ಶತಕ ಸೇರಿ ಒಟ್ಟು 153 ರನ್ ಗಳಿಸಿರೋ ರಾಹುಲ್, ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಸ್ಪೀಡ್ ಸ್ಟಾರ್ ಮೊಹಮ್ಮದ್ ಶಮಿ, ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದಾರೆ. ಡೆಲ್ಲಿ ವಿರುದ್ಧ 3ವಿಕೆಟ್ ಪಡೆದಿದ್ದ ಮೊಹಮ್ಮದ್ ಶಮಿ, ಒಟ್ಟು 4ವಿಕೆಟ್ ಕಬಳಿಸಿದ್ದಾರೆ.

ಫೀಲ್ಡಿಂಗ್​ನಲ್ಲಿ ಪಂಟರ್​ ಎನಿಸಿಕೊಂಡಿರುವ ಕೊಹ್ಲಿ,ನೆನ್ನೆಯ ಪಂದ್ಯದಲ್ಲಿ ಕೆ.ಎಲ್​ ರಾಹುಲ್​ ಅವರ ಎರಡು ಅಧ್ಬುತ ಕ್ಯಾಚ್​ಗಳನ್ನ ಕೈ ಚೆಲ್ಲಿ ಪಂಜಾಬ್​ ಭಾರಿ ಮೊತ್ತ ಪೇರಿಸಲು ಕಾರಣ ಕರ್ತರಾದರು.

(Photo courtesy: Indian Premier League Twitter)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada