ರೋಚಕ IPL 2020: ಆಕಾಶದಿಂದ ಇಳಿಯಿತು ರಾಜಸ್ಥಾನ ರಾಯಲ್ಸ್ ಜೆರ್ಸಿ! ವಿಡಿಯೋ ನೋಡಿ

ಅರಬ್ ನಾಡಿನಲ್ಲಿ ನಡೆಯಲಿರೋ ಕಲರ್​ಫುಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ನೂತನ ಜೆರ್ಸಿಯನ್ನ ಬಿಡುಗಡೆ ಗೊಳಿಸಿತು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಈ ಬಾರಿ ರಾಯಲ್ಸ್ ಹೊಸ ಜೆರ್ಸಿ ಅನಾವರಣ ಮಾಡಿದ್ದು, ತುಂಬಾನೇ ಡಿಫರೆಂಟ್ ಆಗಿತ್ತು.. ಪ್ಯಾರಚೂಟ್​ನಿಂದ ಬಂತು ರಾಜಸ್ಥಾನದ ಜೆರ್ಸಿ! ರಾಜಸ್ಥಾನ ರಾಯಲ್ಸ್ ತಂಡದ ಹೊಸ ಜೆರ್ಸಿಯನ್ನ ವಿನೂತನವಾಗಿ ಸಮುದ್ರ ದಡದಲ್ಲೇ ಬಿಡುಗಡೆ ಮಾಡಲಾಯ್ತು. ಹೊಸ ಜೆರ್ಸಿ ಹೇಗಿರುತ್ತೆ ಅನ್ನೋ ಕುತೂಹಲದೊಂದಿಗೆ ರಾಜಸ್ಥಾನ್ ಆಟಗಾರರು, ಬೀಚ್​ಗೆ ಬಂದಿದ್ದರು. ಜೊತೆಗೆ ಹತ್ತು ಹಲವು […]

ರೋಚಕ IPL 2020: ಆಕಾಶದಿಂದ ಇಳಿಯಿತು ರಾಜಸ್ಥಾನ ರಾಯಲ್ಸ್ ಜೆರ್ಸಿ! ವಿಡಿಯೋ ನೋಡಿ
ಸಾಧು ಶ್ರೀನಾಥ್​

Updated on: Sep 17, 2020 | 1:58 PM

ಅರಬ್ ನಾಡಿನಲ್ಲಿ ನಡೆಯಲಿರೋ ಕಲರ್​ಫುಲ್ ಟೂರ್ನಿಗೆ ಕೌಂಟ್ ಡೌನ್ ಶುರುವಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ನೂತನ ಜೆರ್ಸಿಯನ್ನ ಬಿಡುಗಡೆ ಗೊಳಿಸಿತು. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಈ ಬಾರಿ ರಾಯಲ್ಸ್ ಹೊಸ ಜೆರ್ಸಿ ಅನಾವರಣ ಮಾಡಿದ್ದು, ತುಂಬಾನೇ ಡಿಫರೆಂಟ್ ಆಗಿತ್ತು..

ಪ್ಯಾರಚೂಟ್​ನಿಂದ ಬಂತು ರಾಜಸ್ಥಾನದ ಜೆರ್ಸಿ!
ರಾಜಸ್ಥಾನ ರಾಯಲ್ಸ್ ತಂಡದ ಹೊಸ ಜೆರ್ಸಿಯನ್ನ ವಿನೂತನವಾಗಿ ಸಮುದ್ರ ದಡದಲ್ಲೇ ಬಿಡುಗಡೆ ಮಾಡಲಾಯ್ತು. ಹೊಸ ಜೆರ್ಸಿ ಹೇಗಿರುತ್ತೆ ಅನ್ನೋ ಕುತೂಹಲದೊಂದಿಗೆ ರಾಜಸ್ಥಾನ್ ಆಟಗಾರರು, ಬೀಚ್​ಗೆ ಬಂದಿದ್ದರು. ಜೊತೆಗೆ ಹತ್ತು ಹಲವು ಕುತೂಹಲಗಳೊಂದಿಗೆ ರಾಜಸ್ಥಾನ್ ಆಟಗಾರರು, ಜೆರ್ಸಿಯನ್ನ ಹೇಗೆ ರಿಲೀಸ್ ಮಾಡ್ತಾರೆ ಅಂತಾ ತಲೆಯಲ್ಲಿ ಹುಳ ಬಿಟ್ಕೊಂಡು ಕಾಯುತ್ತಿದ್ದರು.

ಹೀಗೆ ರಾಜಸ್ಥಾನ್ ಆಟಗಾರರು ತೀವ್ರ ಕುತೂಹಲದೊಂದಿಗೆ ಬೀಚ್​ನಲ್ಲಿ ಕಾಯುತ್ತಿದ್ದಾಗಲೇ, ಹೆಲಿಕಾಪ್ಟರ್​ವೊಂದು ಹಾರಿ ಬಂದಿತ್ತು. ನೋಡ ನೋಡ್ತಿದ್ದಂತೆ ಸ್ಪೇನ್​ನ ಸ್ಕೈ ಡ್ರೈವಿಂಗ್ ಅಥ್ಲೀಟ್ ಡನಿ ರೋಮನ್, ಬ್ಯಾಗ್​ನಲ್ಲಿ ಜೆರ್ಸಿಯನ್ನಿಟ್ಟುಕೊಂಡು ಪ್ಯಾರಚೂಟ್​ನಲ್ಲಿ ಹಾರಿದ್ದರು. ಸಾವಿರಾರು ಕಿ. ಮೀ.  ಮುಗಿಲೆತ್ತರಕ್ಕೆ ಹಕ್ಕಿಯಂತೆ ಹಾರಿದ್ದ ಡನಿ ರೋಮನ್, ಆಟಗಾರರಿಗೆ ಗೊತ್ತಾಗದ್ದಂತೆ ಜೆರ್ಸಿಯನ್ನ ಆಟಗಾರರ ಬಳಿಗೆ ತಂದರು.

ರಾಬಿನ್ ಉತ್ತಪ್ಪ ಬೀಚ್ ಬಳಿಯೇ ಜೆರ್ಸಿ ಹಾಕಿಕೊಂಡ್ರು!  
ರೋಮನ್ ತಂದಿದ್ದ ಮೂರು ಜೆರ್ಸಿಗಳನ್ನ ಡೇವಿಡ್ ಮಿಲ್ಲರ್, ರಾಬಿನ್ ಉತ್ತಪ್ಪ ಹಾಗೂ ರಿಯಾನ್ ಪರಾಗ್, ಬೀಚ್ ಬಳಿಯೇ ಹಾಕಿಕೊಂಡು ಬಿಡುಗಡೆಗೊಳಿಸಿದರು. ಹೀಗೆ ಹತ್ತು ಹಲವು ವಿಶೇಷತೆಗಳಿಂದ ರಾಜಸ್ಥಾನ ರಾಯಲ್ಸ್ ಕಪ್​ ಗೆಲ್ಲುವ ಹಾಟ್​ ಫೇವರೆಟ್​ ತಂಡವಾಗಿ ರಣರಂಗಕ್ಕೆ ಸಿದ್ಧವಾಗುತ್ತಿದೆ.

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Published On - 10:34 am, Fri, 11 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us