ರೋಚಕ IPL 2020: ಎರಡು ಪಂದ್ಯಕ್ಕೆ ಆಂಗ್ಲೋ-ಆಸಿಸ್ ಆಟಗಾರರು ಅಲಭ್ಯ! ಕಾರಣವೇನು?

ರೋಚಕ IPL 2020: ಎರಡು ಪಂದ್ಯಕ್ಕೆ ಆಂಗ್ಲೋ-ಆಸಿಸ್ ಆಟಗಾರರು ಅಲಭ್ಯ! ಕಾರಣವೇನು?

ಮರಳುಗಾಡಿನಲ್ಲಿ ಓಯಸಿಸ್​ನಂತೆ ನಡೆಯುವ IPL 2020 ಮಹಾಸಂಗ್ರಾಮಕ್ಕಾಗಿ ಎಂಟೂ ತಂಡಗಳ ಆಟಗಾರರು ಜೋರಾಗಿಯೇ ತಯಾರಿಯನ್ನ ನಡೆಸಿಕೊಳ್ತಿದ್ದಾರೆ. ಆದ್ರೆ ಐಪಿಎಲ್ ಆರಂಭಕ್ಕೂ ಮುನ್ನವೇ ಅದೊಂದು ವಿಚಾರ, ಎಂಟು ಫ್ರಾಂಚೈಸಿ ಮಾಲೀಕರ ಮತ್ತು ಕ್ಯಾಪ್ಟನ್​ಗಳ ನಿದ್ದೆಗೆಡಿಸುವಂತೆ ಮಾಡಿದೆ.

ನಿಜ.. IPL ಕೊರೊನಾಗೆ ಬಲಿಯಾಗುತ್ತೆ ಅನ್ನೋ ಆತಂಕ ದೂರವಾಗಿ, ದೂರದ ದುಬೈನಲ್ಲಿ ನಡೀತಿರೋದು ಆಟಗಾರರಿಗೆ ಮತ್ತು ಫ್ರಾಂಚೈಸಿ ಮಾಲೀಕರಿಗೆ ಇನ್ನಿಲ್ಲದ ಖುಷಿ ನೀಡಿತ್ತು. ಆದ್ರೀಗ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರಿಂದಾಗಿ, ಫ್ರಾಂಚೈಸಿ ಮಾಲೀಕರಿಗೆ ಮತ್ತು ಕ್ಯಾಪ್ಟನ್​ಗಳಿಗೆ ತಲೆನೋವು ಶುರುವಾಗಿದೆ.

ಮೊದಲೆರಡು ಪಂದ್ಯಗಳಿಗಿರೋದಿಲ್ಲ ಆಸಿಸ್ ಇಂಗ್ಲೆಂಡ್ ಆಟಗಾರರು!
ಇದೇ ಈಗ ಐಪಿಎಲ್ ಫ್ರಾಂಚೈಸಿ ಮಾಲೀಕರು ಮತ್ತು ಎಂಟೂ ತಂಡಗಳ ನಾಯಕರ ಬೇಸರಕ್ಕೆ ಕಾರಣವಾಗಿರೋದು. ಯಾಕಂದ್ರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಸೆಪ್ಟಂಬರ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಸೆಪ್ಟಂಬರ್ 17ಕ್ಕೆ ಆಸಿಸ್ ಮತ್ತು ಇಂಗ್ಲೆಂಡ್ ಅಟಗಾರರು ದುಬೈಗೆ ಬಂದ್ರೂ, ಸೆಪ್ಟಂಬರ್ 19 ರಿಂದ ಆರಂಭಗೊಳ್ಳೊ ಐಪಿಎಲ್​ನಲ್ಲಿ ಪಾಲ್ಗೊಳ್ಳೋದಕ್ಕೆ ಸಾಧ್ಯವಿಲ್ಲ.

ಐಪಿಎಲ್​ಗೆ ಇನ್ನೊಂದು ದಿನ ಬಾಕಿಯುರುವಂತೆಯೇ ಯುಎಇಗೆ ಬಂದ್ರೂ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಐಸಿಸಿ ಬಯೊ ಬಬಲ್ (bio bubble) ನಿಯಮ ಆಸಿಸ್ ಮತ್ತು ಆಂಗ್ಲ ಆಟಗಾರರ ಐಪಿಎಲ್ ಎಂಟ್ರಿಗೆ ಮುಳುವಾಗಿ ಪರಿಣಮಿಸಲಿದೆ.

ಸೆಪ್ಟೆಂಬರ್ 17ಕ್ಕೆ ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರು ಯುಎಇಗೆ ಬಂದಿಳೀತಾರೆ. ಆದ್ರೆ ಕೊರೊನಾ ಸುರಕ್ಷತೆಯ ದೃಷ್ಟಿಯಿಂದ ತರಲಾಗಿರೋ ಬಯೊ ಬಬಲ್ ನಿಯಮ, ಐಪಿಎಲ್ ಮೊದಲೆರಡು ಪಂದ್ಯಗಳಿಗೆ ಆಂಗ್ಲೋ, ಆಸಿಸ್ ಆಟಗಾರರು ಅಲಭ್ಯರಾಗುವಂತೆ ಮಾಡೋ ಸಾಧ್ಯೆತಯಿದೆ.

ಎರಡು ಪಂದ್ಯಕ್ಕೆ ಆಂಗ್ಲೋ,ಆಸಿಸ್ ಆಟಗಾರರು ಅಲಭ್ಯ!
ಇಂಗ್ಲೆಂಡ್ ಆಸ್ಟ್ರೇಲಿಯಾ ಆಟಗಾರರು ಯುಎಇಗೆ ಬಂದಿಳಿಯುತ್ತಿದ್ದಂತೆ, ಆರು ದಿನ ಕ್ವಾರಂಟೈನ್ ಆಗಿರಲಿದ್ದಾರೆ. ಈ ಕ್ವಾರಂಟೈನ್ ಸಮಯದಲ್ಲಿ ಎಲ್ಲಾ ಆಟಗಾರರಿಗೆ ಮೂರು ಬಾರಿ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತೆ. ಮೂರು ಪರೀಕ್ಷೆಯಲ್ಲೂ ನೆಗೆಟಿವ್ ಬರಬೇಕು. ಆ ಬಳಿಕ ಬಯೊ ಸೆಕ್ಯೂರ್​ಗೆ ಒಳಗಾಗಬೇಕು. ಇಷ್ಟೆಲ್ಲಾ ಆಗೋದ್ರೊಳಗೆ ಐಪಿಎಲ್ ಶುರುವಾಗಿ ನಾಲ್ಕು ದಿನಗಳಾಗಿರುತ್ತೆ. ಅಂದ್ರೆ ಎರಡು ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Click on your DTH Provider to Add TV9 Kannada