IPL 2020: ಹೈದ್ರಾಬಾದ್ ಅಬ್ಬರಕ್ಕೆ ಡೆಲ್ಲಿ ಧೂಳಿಪಟವಾದ ದೃಶ್ಯಾವಳಿಗಳು..

|

Updated on: Oct 28, 2020 | 4:52 PM

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ 47ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 88 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಡೆಲ್ಲಿ ವಿರುದ್ಧ 88 ರನ್​ಗಳ ಗೆಲುವು ಸಾಧಿಸೋದ್ರೊಂದಿಗೆ ಸನ್​ರೈಸರ್ಸ್ ಹೈದ್ರಾಬಾದ್ ಐಪಿಎಲ್​ನಲ್ಲಿ ಎರಡನೇ ಅತಿ ದೊಡ್ಡ ಗೆಲುವು ಸಾಧಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಮಾಡಿದ ಸ್ಪಿನ್ನರ್ ರಶೀದ್ ಖಾನ್, 4 ಓವರ್​ಗಳಲ್ಲಿ ಕೇವಲ 7 ರನ್ ನೀಡಿದ ರಶೀದ್ ಖಾನ್ ಮೂರು ವಿಕೆಟ್ ಪಡೆದ್ರು. ಡೆಲ್ಲಿ ವಿರುದ್ಧ 219 ರನ್ […]

IPL 2020: ಹೈದ್ರಾಬಾದ್ ಅಬ್ಬರಕ್ಕೆ ಡೆಲ್ಲಿ ಧೂಳಿಪಟವಾದ ದೃಶ್ಯಾವಳಿಗಳು..
Follow us on

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ದುಬೈನಲ್ಲಿ ನಡೆದ 47ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 88 ರನ್‌ಗಳ ಭರ್ಜರಿ ಜಯ ಸಾಧಿಸಿದೆ.


ಡೆಲ್ಲಿ ವಿರುದ್ಧ 88 ರನ್​ಗಳ ಗೆಲುವು ಸಾಧಿಸೋದ್ರೊಂದಿಗೆ ಸನ್​ರೈಸರ್ಸ್ ಹೈದ್ರಾಬಾದ್ ಐಪಿಎಲ್​ನಲ್ಲಿ ಎರಡನೇ ಅತಿ ದೊಡ್ಡ ಗೆಲುವು ಸಾಧಿಸಿದೆ.


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಮಾಡಿದ ಸ್ಪಿನ್ನರ್ ರಶೀದ್ ಖಾನ್, 4 ಓವರ್​ಗಳಲ್ಲಿ ಕೇವಲ 7 ರನ್ ನೀಡಿದ ರಶೀದ್ ಖಾನ್ ಮೂರು ವಿಕೆಟ್ ಪಡೆದ್ರು.


ಡೆಲ್ಲಿ ವಿರುದ್ಧ 219 ರನ್ ಗಳಿಸಿದ ಸನ್​ರೈಸರ್ಸ್ ಹೈದ್ರಾಬಾದ್ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ ದೊಡ್ಡ ಮೊತ್ತವನ್ನ ಕಲೆಹಾಕ್ತು.


ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿತ ಕಂಡಿರೋ ಡೆಲ್ಲಿ ಕ್ಯಾಪಿಟಲ್ಸ್, ಉತ್ತಮ ಆರಂಭ ಪಡೆಯುವಲ್ಲಿ ವೈಫಲ್ಯ ಎದುರಿಸ್ತಿದೆ. ಪೃಥ್ವಿ ಬದಲಿಗೆ ರಹಾನೆ ಇನ್ನಿಂಗ್ಸ್ ಆರಂಭಿಸಿದ್ರೂ ಬಿಗ್ ಇನ್ನಿಂಗ್ಸ್ ಕಟ್ಟುತ್ತಿಲ್ಲ.


ಹೈದ್ರಾಬಾದ್ ವಿರುದ್ಧ ಸೋಲಿನ ನಂತ್ರ ನಾಯಕ ಶ್ರೇಯಸ್ ಐಯ್ಯರ್ ನಿರಾಸೆ ವ್ಯಕ್ತಪಡಿಸಿದ್ದಾರೆ. ಪವರ್ ಪ್ಲೇ ಹಂತದಲ್ಲೇ ನಾವು ಪಂದ್ಯವನ್ನ ಕಳೆದುಕೊಂಡಾಗಿತ್ತು ಎಂದು ಐಯ್ಯರ್ ತಿಳಿಸಿದ್ದಾರೆ.


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 45 ಬಾಲ್​ಗಳಲ್ಲಿ 87 ರನ್ ಗಳಿಸಿದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ, ಎರಡು ವರ್ಷಗಳ ಬಳಿಕ ಐಪಿಎಲ್​ನಲ್ಲಿ ಅರ್ಧಶತಕ ಬಾರಿಸಿದ್ರು.


ಶ್ರೇಯಸ್ ಐಯ್ಯರ್ ಪಡೆ ವಿರುದ್ಧ ಗೆಲುವು ಸಾಧಿಸಿದ ಸನ್​ರೈಸರ್ಸ್ ಹೈದ್ರಾಬಾದ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿತ ಕಂಡಿದೆ.