ಈ ಸಲ ಕಪ್​ ನಮ್ದೇನಾ? ಇಂದಿನ RCB-MI ಸಮರದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ವಿಶ್ಲೇಷಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳೋ ಭರವಸೆ ಮೂಡಿಸಿದೆ. ಮರಳುಗಾಡಿನ ಮಹಾಯುದ್ಧದಲ್ಲಿ ಕೊಹ್ಲಿ ಪಡೆಗೆ ಕಪ್ ಗೆಲ್ಲೋ ಸಾಮರ್ಥ್ಯವಿದೆ ಅನ್ನೋದು ಗೊತ್ತಾಗ್ತಿದೆ. ಇದರ ಜೊತೆಯಲ್ಲೆ ಅದೃಷ್ಟವೂ ಆರ್​ಸಿಬಿ ತಂಡದ ಕೈ ಹಿಡಿಯುತ್ತಿದೆ. ನಿನ್ನೆ ಹೈದರಾಬಾದ್ ತಂಡ ಡೆಲ್ಲಿಯನ್ನ ಮಣಿಸಿದ್ದು, ಆರ್​ಸಿಬಿ ಅದೃಷ್ಟ ಬದಲಾಗುವಂತೆ ಮಾಡ್ತು. ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದ್ದ ಆರ್​ಸಿಬಿ, ಡೆಲ್ಲಿ ಸೋತಿದ್ದರಿಂದ 2ನೇ ಸ್ಥಾನಕ್ಕೇರಿದೆ. ಇಲ್ಲಿ ಅದೃಷ್ಟವೂ ಆರ್​ಸಿಬಿ ತಂಡಕ್ಕಿದೆ ಅನ್ನೋದು ಸಾಬೀತಾಗ್ತಿದೆ. ಆರ್‌ಸಿಬಿ ತಂಡ ಈ ಸೀಸ್‌ನಲ್ಲಿ ತನ್ನ […]

ಈ ಸಲ ಕಪ್​ ನಮ್ದೇನಾ? ಇಂದಿನ RCB-MI ಸಮರದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ವಿಶ್ಲೇಷಣೆ
ಹೌದು, ಕಳೆದ 14 ವರ್ಷದಿಂದ​ ಐಪಿಎಲ್​ನಲ್ಲಿ ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್​ 28 ಬಾರಿ ಮುಖಾಮುಖಿಯಾಗಿತ್ತು. ಆದರೆ ಒಮ್ಮೆಯೂ ಕೂಡ ಆರ್​ಸಿಬಿ ಬೌಲರುಗಳಿಗೆ ಮುಂಬೈ ಇಂಡಿಯನ್ಸ್​ ತಂಡವನ್ನು ಆಲೌಟ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ದುಬೈನಲ್ಲಿ ನಡೆದ ಐಪಿಎಲ್​ನ 39ನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಹಾಗೂ ಯುಜುವೇಂದ್ರ ಚಹಲ್ ಸ್ಪಿನ್ ಮ್ಯಾಜಿಕ್​ನೊಂದಿಗೆ ಆರ್​ಸಿಬಿ ಮುಂಬೈ ಇಂಡಿಯನ್ಸ್​ ತಂಡವನ್ನು ಆಲೌಟ್ ಮಾಡಿದೆ.
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 28, 2020 | 11:55 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳೋ ಭರವಸೆ ಮೂಡಿಸಿದೆ. ಮರಳುಗಾಡಿನ ಮಹಾಯುದ್ಧದಲ್ಲಿ ಕೊಹ್ಲಿ ಪಡೆಗೆ ಕಪ್ ಗೆಲ್ಲೋ ಸಾಮರ್ಥ್ಯವಿದೆ ಅನ್ನೋದು ಗೊತ್ತಾಗ್ತಿದೆ. ಇದರ ಜೊತೆಯಲ್ಲೆ ಅದೃಷ್ಟವೂ ಆರ್​ಸಿಬಿ ತಂಡದ ಕೈ ಹಿಡಿಯುತ್ತಿದೆ. ನಿನ್ನೆ ಹೈದರಾಬಾದ್ ತಂಡ ಡೆಲ್ಲಿಯನ್ನ ಮಣಿಸಿದ್ದು, ಆರ್​ಸಿಬಿ ಅದೃಷ್ಟ ಬದಲಾಗುವಂತೆ ಮಾಡ್ತು. ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದ್ದ ಆರ್​ಸಿಬಿ, ಡೆಲ್ಲಿ ಸೋತಿದ್ದರಿಂದ 2ನೇ ಸ್ಥಾನಕ್ಕೇರಿದೆ. ಇಲ್ಲಿ ಅದೃಷ್ಟವೂ ಆರ್​ಸಿಬಿ ತಂಡಕ್ಕಿದೆ ಅನ್ನೋದು ಸಾಬೀತಾಗ್ತಿದೆ.

ಆರ್‌ಸಿಬಿ ತಂಡ ಈ ಸೀಸ್‌ನಲ್ಲಿ ತನ್ನ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಬುಧಾಬಿಯಲ್ಲಿ ಮುಖಾಮುಖಿಯಾಗ್ತಿದೆ. ಉಭಯ ತಂಡಗಳಿಗೆ ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎರಡೂ ತಂಡಗಳಿಗೆ ಪ್ಲೇ ಆಫ್‌ಗೆ ಎಂಟ್ರಿಕೊಡೋಕೆ ಇನ್ನೊಂದು ಗೆಲುವಿನ ಅನಿವಾರ್ಯತೆ ಇದೆ. ಹೀಗಾಗಿ ಅಬುಧಾಬಿಯಲ್ಲಿ ಇಂದು ಆರ್​ಸಿಬಿ ಮತ್ತು ಮುಂಬೈ ನಡುವೆ ಬಿಗ್ ಫೈಟ್ ನಡೆಯಲಿದೆ.

ಟಾಸ್ ಪಾತ್ರ ಬಹುಮುಖ್ಯ ಮುಕ್ಕಾಲು ಭಾಗ ಲೀಗ್ ಪಂದ್ಯ ಮುಗಿದು ಪ್ಲೇ ಆಫ್ ಭವಿಷ್ಯ ನಿರ್ಧಾರವಾಗೋ ಸಮಯ ಇದಾಗಿದ್ದು, ಈಗ ಎಲ್ಲಾ ತಂಡಗಳಿಗೂ ಟಾಸ್ ಮುಖ್ಯವಾದ ಪಾತ್ರವಹಿಸುತ್ತೆ. ಯಾಕಂದ್ರೆ ಯಾರೇ ಟಾಸ್ ಗೆದ್ರೂ ಮೊದಲು ಬ್ಯಾಟಿಂಗ್ ಮಾಡೋಕೆ ಮುಂದಾಗ್ತಾರೆ. ಚೇಸಿಂಗ್ ಮಾಡೋವಾಗ ವಿಕೆಟ್ ಬೀಳೋದ್ರಿಂದ, ಇವತ್ತು ಟಾಸ್ ಗೆದ್ದೋನೆ ಬಾಸ್ ಅಂತಾ ಹೇಳಿದ್ರೂ ಅತಿಶಯೋಕ್ತಿಯಿರೋದಿಲ್ಲ.

ಎರಡೂ ತಂಡಗಳಿಗೆ ಕಾಡ್ತಿದೆ ಗಾಯದ ಸಮಸ್ಯೆ ಇಂದಿನ ಪಂದ್ಯದಲ್ಲಿ ಆರ್​ಸಿಬಿ ಮತ್ತು ಮುಂಬೈ ತಂಡಗಳೆರಡಕ್ಕೂ ಗಾಯದ ಸಮಸ್ಯೆ ಕಾಡ್ತಿದೆ. ಮುಂಬೈಗೆ ನಾಯಕ ರೋಹಿತ್ ಶರ್ಮಾ ಗಾಯದಿಂದ ಹೊರಗುಳಿದಿರೋದು ಭಾರಿ ಹಿನ್ನಡೆಯಾದಂತಾಗಿದೆ. ಇತ್ತ ಆರ್​ಸಿಬಿ ಬೌಲಿಂಗ್ ಪ್ಯಾಕ್ ಪರ್ಫೆಕ್ಟ್ ಆಗಿತ್ತು. ಆದ್ರೀಗ ನವದೀಪ್ ಸೈನಿ ಇಂಜುರಿಯಿಂದ ಹೊರಗುಳಿದಿರೋದು, ಬೌಲಿಂಗ್ ಕಾಂಬಿನೇಷನ್​ನಲ್ಲಿ ರಿದಮ್ ಕಳೆದುಕೊಳ್ಳೋ ಹಾಗೇ ಮಾಡಿದೆ. [yop_poll id=”24″] ಮೊದಲಿಗೆ ಮುಂಬೈ ತಂಡದ ಬಲಾಬಲ ನೋಡಿದ್ರೆ, ಕೆಲವು ಸಂಗತಿಗಳು ಆರ್​ಸಿಬಿಗೆ ಅಡ್ವಾಂಟೇಜ್ ಆಗೋ ಹಾಗಿದ್ರೆ, ಇನ್ನು ಕೆಲವು ಸಂಗತಿಗಳು ಆರ್​ಸಿಬಿ ವಿರುದ್ಧ ಮುಂಬೈ ಹುಡುಗರು ಮೇಲುಗೈ ಸಾಧಿಸೋ ಸಾಧ್ಯತೆಯನ್ನ ತೋರಿಸುತ್ತೆ.

ಮುಂಬೈ ಸ್ಟ್ರೆಂಥ್ 1. ಸಾಲಿಡ್ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳ ಜೊತೆ ಮಿಡಲ್ ಆರ್ಡರ್​ನಲ್ಲೂ ಅಬ್ಬರಿಸೋ ಬ್ಯಾಟ್ಸ್​ಮನ್​ಗಳಿದ್ದಾರೆ. 2. ಆಲ್​ರೌಂಡರ್ ವಿಚಾರಕ್ಕೆ ಬಂದ್ರೆ ಮೂವರು ಅದ್ಭುತ ಆಲ್​ರೌಂಡರ್​ಗಳಿದ್ದಾರೆ. 3. ಕರಾರುವಾಕ್ ಬೌಲಿಂಗ್ ಮಾಡೋ ಸ್ಟಾರ್ ವೇಗಿಗಳು ತಂಡದಲ್ಲಿದ್ದಾರೆ. ಈ ಎಲ್ಲಾ ಪ್ಲಸ್ ಪಾಯಿಂಟ್​ಗಳ ಜೊತೆ, ಚಾಂಪಿಯನ್ ಮುಂಬೈ ತಂಡದಲ್ಲೂ ಕೆಲ ನ್ಯೂನ್ಯತೆಗಳಿವೆ.

ಮುಂಬೈ ವೀಕ್ನೆಸ್ 1. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವ ನಿಭಾಯಿಸುತ್ತಿರೋ ಕೆರಾನ್ ಪೊಲ್ಲಾರ್ಡ್ ನಾಯಕತ್ವ ವಿಭಿನ್ನವಾಗಿದೆ. ಹೀಗಾಗಿ ಪೊಲ್ಲಾರ್ಡ್ ನಾಯಕತ್ವದಲ್ಲಿ ಸೆಟಲ್ ಆಗೋದಕ್ಕೆ ಇನ್ನು ಸಮಯ ಬೇಕಿದೆ. 2. ಕೆಲವು ಪಂದ್ಯಗಳಲ್ಲಿ ಮುಂಬೈನ ಸ್ಟಾರ್ ಬೌಲರ್​ಗಳು ದುಬಾರಿ ಸ್ಪೆಲ್ ಮಾಡಿ, ತಂಡದ ಸೋಲಿಗೆ ಕಾರಣವಾಗಿದ್ದಾರೆ.

ಇತ್ತ ಆರ್​ಸಿಬಿ ಈ ಸೀಸನ್​ನಲ್ಲಿ ಬೊಂಬಾಟ್ ಪ್ರದರ್ಶನ ನೀಡ್ತಿದೆ. ಇಲ್ಲಾ ಅಂದಿದ್ರೆ, ಇಷ್ಟು ಬೇಗ ಕೊಹ್ಲಿ ಪಡೆ ಪ್ಲೇ ಆಫ್​ ರೌಂಡ್ ಸನಿಹಕ್ಕೆ ಬರೋದಕ್ಕೆ ಸಾಧ್ಯವಾಗ್ತಿರಲಿಲ್ಲ. ಸದ್ಯ ಆರ್​ಸಿಬಿ ತಂಡದಲ್ಲಿ ನಾವೇ ಚಾಂಪಿಯನ್ ಆಗ್ತೀವಿ ಅನ್ನೋ ಸಂಗತಿಗಳಿವೆ.

ಆರ್​ಸಿಬಿ ಸ್ಟ್ರೆಂಥ್ 1. ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ದೇವದತ್ ಪಡಿಕ್ಕಲ್ ಸೇರಿ ಕ್ವಾಲಿಟಿ ಬ್ಯಾಟಿಂಗ್ ಲೈನ್​ಅಪ್ ಹೊಂದಿದೆ. 2. ಐಪಿಎಲ್​ನಲ್ಲಿರೋ ದಿ ಬೆಸ್ಟ್ ಮೂವರು ಸ್ಪಿನ್ನರ್​ಗಳಾದ ಚಹಲ್, ಸುಂದರ್ ಮತ್ತು ಮೊಯಿನ್ ಅಲಿ ಆರ್​ಸಿಬಿ ತಂಡದಲ್ಲಿದ್ದಾರೆ. 3. ವೇಗಿಗಳ ವಿಭಾಗದಲ್ಲಿ ಕ್ರಿಸ್ ಮಾರಿಸ್, ಇಸುರು ಉದಾನಾ, ಮೊಹಮ್ಮದ್ ಸಿರಾಜ್ ಅದ್ಭುತವಾದ ಬೌಲಿಂಗ್ ಮಾಡುತ್ತಿರೋದು ತಂಡಕ್ಕೆ ಅಡ್ವಾಂಟೇಜ್ ಆಗಿದೆ. ಈ ಎಲ್ಲಾ ಬಲಾಬಲಗಳ ನಡುವೆ ಆರ್​ಸಿಬಿ ತಂಡದಲ್ಲಿ ಕೆಲ ವೀಕ್ನೆಸ್​ಗಳು ಇವೆ.

ಆರ್​ಸಿಬಿ ವೀಕ್ನೆಸ್ 1. ಕೊಹ್ಲಿ, ಎಬಿಡಿ ಬಳಿಕ ಆರ್​ಸಿಬಿ ಮಧ್ಯಮ ಕ್ರಮಾಂಕದಲ್ಲಿ ಅನುಭವವಿಲ್ಲದ ಬ್ಯಾಟ್ಸ್​ಮನ್​ಗಳಿದ್ದಾರೆ. ಗುರುಕೀರತ್ ಮನ್ ಸೇರಿದಂತೆ ಕೆಲ ಬ್ಯಾಟ್ಸ್​ಮನ್​ಗಳು ಗಮನ ಸೆಳೆಯೋ ಪ್ರದರ್ಶನ ನೀಡಿಲ್ಲ. 2. ಆರಂಭಿಕ ಌರೋನ್ ಫಿಂಚ್ ಬ್ಯಾಟಿಂಗ್ ಲಯ ಕಂಡುಕೊಳ್ಳದಿರೋದು ಆರ್​ಸಿಬಿಗೆ ತಲೆನೋವಾಗಿ ಪರಿಣಮಿಸಿದೆ. 3. ತಂಡದಲ್ಲಿ ಆಲ್​ರೌಂಡರ್​ಗಳಿದ್ರೂ ಇದುವರೆಗೂ ಯಾವೊಬ್ಬ ಆಲ್​ರೌಂಡರ್ ಕೂಡ ಕ್ವಾಲಿಟಿ ಆಟವಾಡಿಲ್ಲ.

ಕೊಹ್ಲಿ ಗ್ಯಾಂಗ್ ಈ ಎಲ್ಲಾ ವೀಕ್ನೆಸ್​ಗಳನ್ನ ಮೆಟ್ಟಿ ನಿಂತು ಇವತ್ತು ಮುಂಬೈ ವಿರುದ್ಧ ಕಣಕ್ಕಿಳಿದ್ರೆ, ಮತ್ತೊಮ್ಮೆ ಪೊಲ್ಲಾರ್ಡ್ ಪಡೆಗೆ ಪಂಚ್ ಕೊಡೋದ್ರಲ್ಲಿ ಅನುಮಾನವಿಲ್ಲ. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಮತ್ತು ಮುಂಬೈ ಮುಗ್ಗರಿಸಿವೆ. ಮುಂಬೈ ಇಂಡಿಯನ್ಸ್ ತಂಡವನ್ನ, ಕಳೆದ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡ 8 ವಿಕೆಟ್‌ಗಳಿಂದ ಮಣಿಸಿತ್ತು. ಇನ್ನು ಆರ್‌ಸಿಬಿ ತಂಡವನ್ನ ಸಿಎಸ್‌ಕೆ ಕೂಡ 8 ವಿಕೆಟ್‌ಗಳಿಂದ ಸೋಲಿಸಿತ್ತು. ಹೀಗಾಗಿ ಪ್ಲೇ ಆಫ್​ಗೆ ಮೊದಲ ತಂಡ ಯಾವುದು ಅಂತಾ ನಿರ್ಧಾರವಾಗೋ ಇಂದಿನ ಕದನ ರಣರೋಚಕತೆಯಿಂದ ಕೂಡಿರೋದ್ರಲ್ಲಿ ಯಾವ ಅನುಮಾನವೂ ಇಲ್ಲ.

Published On - 11:09 am, Wed, 28 October 20