ರೋಹಿತ್ ಮತ್ತು ಸೈನಿ ಆಡುವುದು ಅನುಮಾನವಾದರೂ ಜಿದ್ದಿನ ಹಣಾಹಣಿ ನಿಶ್ಚಿತ
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ದ್ವಿತೀಯಾರ್ಧ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿದ್ದರಿಂದ ಪಾಯಿಂಟ್ಸ್ ಟೇಬಲ್ನ ಕೆಳಭಾಗದಲ್ಲಿದ್ದ ತಂಡಗಳಿಗೆ ಪ್ಲೇ ಆಫ್ ಹಂತ ತಲುಪುವ ಆಸೆ ಜೀವಂತವಾಗಿಬಿಟ್ಟಿದೆ. 14ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿ ತೊಂದರೆಗೆ ಸಿಕ್ಕಿಕೊಂಡಿದೆ. ಹಾಗೆಯೇ, ಇಂದು ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಸೆಣಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಟೀಮುಗಳು ತಮ್ಮ ಕೊನೆಯ ಪಂದ್ಯಗಳನ್ನು ಸೋತಿವೆ. ಹಾಗಾಗಿ ಈ ಮೂರು ತಂಡಗಳು ತಲಾ […]

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತ್ತಿಯ ದ್ವಿತೀಯಾರ್ಧ ಹಲವು ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿದ್ದರಿಂದ ಪಾಯಿಂಟ್ಸ್ ಟೇಬಲ್ನ ಕೆಳಭಾಗದಲ್ಲಿದ್ದ ತಂಡಗಳಿಗೆ ಪ್ಲೇ ಆಫ್ ಹಂತ ತಲುಪುವ ಆಸೆ ಜೀವಂತವಾಗಿಬಿಟ್ಟಿದೆ. 14ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿ ತೊಂದರೆಗೆ ಸಿಕ್ಕಿಕೊಂಡಿದೆ. ಹಾಗೆಯೇ, ಇಂದು ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಸೆಣಸಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಟೀಮುಗಳು ತಮ್ಮ ಕೊನೆಯ ಪಂದ್ಯಗಳನ್ನು ಸೋ
ತಿವೆ. ಹಾಗಾಗಿ ಈ ಮೂರು ತಂಡಗಳು ತಲಾ 14 ಪಾಯಿಂಟ್ಗಳನ್ನು ಹೊಂದಿದ್ದರೂ ನಿರಾತಂಕದಿಂದಿರುವಂತಿಲ್ಲ. ಇನ್ನುಳಿದ ಮೂರು ಪಂದ್ಯಗಳಲ್ಲಿ ಅವು ಕನಿಷ್ಠ ಒಂದರಲ್ಲಾದರೂ ಗೆಲುವು ಸಾಧಿಸಲೇಬೇಕು.
ತನ್ನ ಕೊನೆಯ ಪಂದ್ಯವನ್ನು ರಾಜಸ್ತಾನ ರಾಯಲ್ಸ್ಗೆ ಸೋತಿರುವ ಮುಂಬೈ ಟೀಮಿಗೆ ನಾಯಕ ರೋಹಿತ್ ಶರ್ಮ ಅವರ ಸೇವೆ ಲಭ್ಯವಾಗುವುದು ಅನುಮಾನಾಸ್ಪದವಾಗಿದೆ. ರೋಹಿತ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ ಮತ್ತು ಫಿಟ್ನೆಸ್ ಸಮಸ್ಯೆಯಿಂದಾಗಿಯೇ ಅವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆ ಮಾಡಿಲ್ಲ. ಓದುಗರಿಗೆ ಗೊತ್ತಿರುವಂತೆ ಕಳೆದೆರಡು ಪಂದ್ಯಗಳಲ್ಲಿ ಕೈರನ್ ಪೊಲ್ಲಾರ್ಡ್ ಟೀಮಿನ ನಾಯಕತ್ವ ವಹಿಸಿದ್ದರು. ರೋಹಿತ್ ಅವರ ಸ್ಥಾನದಲ್ಲಿ ಸೌರಬ್ ತಿವಾರಿಯನ್ನು ಆಡಿಸಲಾಗುತ್ತಿದೆ. ಆದರೆ, ಸೋಮವಾರದಂದು ರೋಹಿತ್ ನೆಟ್ಸ್ನಲ್ಲಿ ಪಾಲ್ಗೊಂಡಿದ್ದು ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ.
ಮುಂಬೈ ಮತ್ತು ಬೆಂಗಳೂರು ತಲಾ 11 ಪಂದ್ಯಗಳನ್ನಾಡಿದ್ದು 7ರಲ್ಲಿ ಗೆದ್ದಿವೆ ಮತ್ತು 4ರಲ್ಲಿ ಸೋತಿವೆ. ಇವೆರಡರ ನಡುವೆ ದುಬೈಯಲ್ಲಿ ನಡೆದ ಮೊದಲ ಸುತ್ತಿನ ಸಮರದಲ್ಲಿ ವಿರಾಟ್ ಕೊಹ್ಲಿಯ ಪಡೆ ಸೂಪರ್ ಓವರ್ನಲ್ಲಿ ಗೆದ್ದಿತ್ತು. ಮುಂದಿನ ಎರಡು ಪಂದ್ಯಗಳಲ್ಲಿ ಇವು, ಡೆಲ್ಲಿ ಮತ್ತು ಸನ್ರೈಸರ್ಸ್ ಹೈದರಾಬಾದ್ಗಳನ್ನು ಎದುರಿಸಬೇಕಿದೆ. ಹಾಗೆಯೇ ಇಂದು ಗೆಲ್ಲುವ ಟೀಮು ಪ್ಲೇ ಆಫ್ನಲ್ಲಾಡುವ ಅರ್ಹತೆಯನ್ನು ಗಿಟ್ಟಿಸಿಕೊಳ್ಳುತ್ತದೆ.
ಇದುವರೆಗಿನ ಐಪಿಎಲ್ ಇತಿಹಾಸದಲ್ಲಿ ಮುಂಬಯಿ ಮತ್ತು ಬೆಂಗಳೂರು 26 ಸಲ ಮುಖಾಮುಖಿಯಾಗಿವೆ, 16 ಬಾರಿ ಜಯಗಳಿಸಿರುವ ಮುಂಬೈ ತನ್ನ ಪಾರಮ್ಯ ಮೆರೆದಿದೆ.
ಬೆಂಗಳೂರು ಟೀಮಿನ ಇದುವರೆಗಿನ ಪ್ರದರ್ಶನ ಚೆನ್ನಗಿತ್ತಾದರೂ ಸೋತು ಸುಣ್ಣವಾಗಿ, ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ಚೆನೈ ಸೂಪರ್ ಕಿಂಗ್ಸ್ಗೆ ಕಳೆದ ಪಂದ್ಯದಲ್ಲಿ ಸೋತಿದ್ದು ಸ್ವಲ್ಪ ವಿಚಲಿತಗೊಳಿಸಿದೆ. ಆ ಮ್ಯಾಚ್ನಲ್ಲಿ ಕೇವಲ ಕೊಹ್ಲಿ ಮಾತ್ರ ಉತ್ತಮವಾಗಿ ಆಡಿ ಅರ್ಧಶತಕ ಬಾರಿಸಿದ್ದರು. 13ನೇ ಆವೃತ್ತಿಯಲ್ಲಿ ಇದುವರೆಗೆ 415 ರನ್ ಗಳಿಸಿರುವ ಕೊಹ್ಲಿ ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಚೆನ್ನಾಗಿ ಆಡಬೇಕಿದೆ.
ದೇವದತ್ ಪಡಿಕ್ಕಲ್, ಆರನ್ ಫಿಂಚ್, ಎಬಿ ಡಿವಿಲಿಯರ್ಸ್ ಮೊದಲಾದವರ ಬ್ಯಾಟ್ಗಳಿಂದಲೂ ರನ್ ಬಂದಿವೆಯಾದರೂ ಈಗ ಎದುರಾಗಿರುವುದು ನಿರ್ಣಾಯಕ ಘಟ್ಟ. ಮುಂದಿನ ಮೂರು ಪಂದ್ಯಗಳಲ್ಲಿ ಪ್ರದರ್ಶನ ನೀರಸಗೊಂಡರೆ ಇದುವರೆಗೆ ಪಟ್ಟ ಶ್ರಮ ವ್ಯರ್ಥವಾಗುತ್ತದೆ.
ಚೆನೈ ವಿರುದ್ಧದ ಗೇಮ್ಲ್ಲಿ ಅಂಗೈಗೆ ಗಾಯ ಮಾಡಿಕೊಂಡ ವೇಗದ ಬೌಲರ್ ನವದೀಪ್ ಸೈನಿ ಇವತ್ತು ಆಡುವುದು ಅನುಮಾನ ಎನ್ನಲಾಗುತ್ತಿದೆ. ಅವರ ಸ್ಥಾನದಲ್ಲಿ ಉಮೇಶ್ ಯಾದವ್ ಆಡಬಹುದು.
ಮತ್ತೊಂದೆಡೆ, ಮುಂಬೈ ಟೀಮಿನ ಪ್ರಮುಖ ಬ್ಯಾಟ್ಸ್ಮನ್ಗಳು ಸಹ ಉತ್ತಮ ಫಾರ್ಮ್ನಲ್ಲ್ಲಿದ್ದಾರೆ. ಕ್ವಿಂಟನ್ ಡಿ ಕಾಕ್ ಅಪರೂಪಕ್ಕೊಮ್ಮೆ ವಿಫಲರಾಗುತ್ತಾರೆ. ಸೂರ್ಯಕುಮಾರ್ ಯಾದವ್, ಇಶಾನ್ ಕಿಷನ್, ತಿವಾರಿ, ಹಾರ್ದಿಕ್ ಪಾಂಡ್ಯ ಮತ್ತು ಪೊಲ್ಲಾರ್ಡ್ ಅವರನ್ನೊಳಗೊಂಡ ಮಧ್ಯಮ ಕ್ರಮಾಂಕ ಸದೃಢವಾಗಿದೆ. ಆದರೆ, ಟೂರ್ನಮೆಂಟ್ ಈಗ ನಿರ್ಣಾಯಕ ಹಂತ ತಲುಪಿರುವುದರಿಂದ ರೋಹಿತ್ ಅಡುವುದು ಅನಿವಾರ್ಯ ಅಂತ ಟೀಮ್ ಮ್ಯಾನೇಜ್ಮೆಂಟ್ಗೆ ಅನಿಸುತ್ತಿರಬಹುದು.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ರಾಯಲ್ಸ್ ವಿರುದ್ಧ ಕೇವಲ 21 ಎಸೆತಗಳಲ್ಲಿ ಅಜೇಯ 60 ರನ್ ಬಾರಿಸಿದ್ದು ಅವರೆಂಥ ಅಪಾಯಕಾರಿ ಬ್ಯಾಟ್ಸ್ಮನ್ ಎನ್ನುವುದನ್ನು ಸಾಬೀತುಮಾಡಿದೆ. ಮುಂಬೈ ಟೀಮಿನ ಬೌಲಿಂಗ್ ಶಕ್ತಿ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವಂತಿದೆ. ದಾಳಿಯ ನೇತೃತ್ವವಹಿಸಿಕೊಂಡಿರುವ ಟ್ರೆಂಟ್ ಬೌಲ್ಟ್ ಮತ್ತು ಜಸ್ಪ್ರೀತ್ ಬುಮ್ರಾ ತಮ್ಮ ನಡುವೆ 33 ವಿಕೆಟ್ಗಳನ್ನು ಪಡೆದಿದ್ದಾರೆ. ಜೇಮ್ಸ್ ಪ್ಯಾಟಿನ್ಸನ್ ಮತ್ತು ಪೊಲ್ಲಾರ್ಡ್ ಬೌಲಿಂಗ್ನಲ್ಲಿ ಮಿತವ್ಯಯಿಗಳಾಗಿದ್ದಾರೆ. ರಾಹುಲ ಚಹರ್ ಮತ್ತು ಕೃಣಾಲ್ ಪಾಂಡೆ ತಮ್ಮ ಜವಾಬ್ದಾರಿಗಳನ್ನು ತಕ್ಕಮಟ್ಟಿಗೆ ನಿಭಾಯಿಸುತ್ತಿದ್ದಾರೆ.
ರೋಹಿತ್ ಮತ್ತು ಸೈನಿ ಆಡಲಿ ಅಥವಾ ಆಡದಿರಲಿ, ಇವತ್ತಿನ ಪಂದ್ಯದಲ್ಲಿ ಈ ಎರಡು ಬಲಿಷ್ಠ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುವುದು ಮಾತ್ರ ನಿಶ್ಚಿತ.
Published On - 4:15 pm, Wed, 28 October 20