ಜೇಸನ್ ಗಿಲ್ಲೆಸ್ಪಿ ಅದಾಗಲೇ ಮೈಂಡ್ ಗೇಮ್ ಪ್ರಾರಂಭಿಸಿದ್ದಾರೆ!
ಭಾರತ ಮತ್ತು ಆಸ್ಟ್ರೇಲಿಯ ನಡುವೆ ಕ್ರಿಕೆಟ್ ಪಂದ್ಯಗಳು ಕೇವಲ ಮೈದಾನದಲ್ಲಿ ಮಾತ್ರ ನಡೆಯುತ್ತವೆಯೆಂದು ನೀವು ಭಾವಿಸಿದ್ದರೆ ಅದು ತಪ್ಪು. ಯಾಕೆ ಗೊತ್ತಾ? ಆಸ್ಟ್ರೇಲಿಯ ಮತ್ತು ಅದರ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ನಡುವೆ ಪ್ರತಿಷ್ಠಿತ ಌಷಸ್ ಸರಣಿ ನಂತರ ಅಥವಾ ಅದರಷ್ಟೇ ಪ್ರತಿಷ್ಠಿತ ಎಂದು ಪರಿಗಣಿಸಲಾಗುತ್ತಿರುವ ಇಂಡೋ–ಆಸ್ಟ್ರೇಲಿಯ ಸರಣಿ ಶುರವಾಗುವ ಮೊದಲೇ ಅಲ್ಲಿನ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಭಾರತೀಯ ಆಟಗಾರರ ವಿರುದ್ಧ ಮೈಂಡ್ಗೇಮ್ ಆರಂಭಸಿ ಬಿಡುತ್ತಾರೆ. ಟೀಮ್ ಇಂಡಿಯಾದ ಖ್ಯಾತ ಬ್ಯಾಟ್ಸ್ಮನ್ಗಳು ಉಪಖಂಡದಲ್ಲಷ್ಟೇ ರನ್ ಗಳಿಸಬಲ್ಲರು, ಆಸ್ಟ್ರೇಲಿಯಾದ […]

ಭಾರತ ಮತ್ತು ಆಸ್ಟ್ರೇಲಿಯ ನಡುವೆ ಕ್ರಿಕೆಟ್ ಪಂದ್ಯಗಳು ಕೇವಲ ಮೈದಾನದಲ್ಲಿ ಮಾತ್ರ ನಡೆಯುತ್ತವೆಯೆಂದು ನೀವು ಭಾವಿಸಿದ್ದರೆ ಅದು ತಪ್ಪು. ಯಾಕೆ ಗೊತ್ತಾ? ಆಸ್ಟ್ರೇಲಿಯ ಮತ್ತು ಅದರ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ನಡುವೆ ಪ್ರತಿಷ್ಠಿತ ಌಷಸ್ ಸರಣಿ ನಂತರ ಅಥವಾ ಅದರಷ್ಟೇ ಪ್ರತಿಷ್ಠಿತ ಎಂದು ಪರಿಗಣಿಸಲಾಗುತ್ತಿರುವ ಇಂಡೋ–ಆಸ್ಟ್ರೇಲಿಯ ಸರಣಿ ಶುರವಾಗುವ ಮೊದಲೇ ಅಲ್ಲಿನ ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಭಾರತೀಯ ಆಟಗಾರರ ವಿರುದ್ಧ ಮೈಂಡ್ಗೇಮ್ ಆರಂಭಸಿ ಬಿಡುತ್ತಾರೆ. ಟೀಮ್ ಇಂಡಿಯಾದ ಖ್ಯಾತ ಬ್ಯಾಟ್ಸ್ಮನ್ಗಳು ಉಪಖಂಡದಲ್ಲಷ್ಟೇ ರನ್ ಗಳಿಸಬಲ್ಲರು, ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್ಗಳ ಮೇಲೆ ಅವರು ತಿಣುಕುವುದು ಸತ್ಯ, ಆಸ್ಸೀ ಬ್ಯಾಟ್ಸ್ಮನ್ಗಳು ಭಾರತೀಯ ಬೌಲರ್ಗಳ ಛಳಿ ಬಿಡಿಸಲಿದ್ದಾರೆ, ಭಾರತ ವ್ಹೈಟ್ವಾಶ್ ಆಗುವುದು ನಿಶ್ಚಿತ, ಹೀಗೆ ಭಾರತೀಯ ಆಟಗಾರರ ಬಗ್ಗೆ ನೆಗೆಟಿವ್ ಕಾಮೆಂಟ್ಗಳನ್ನು ಮಾಡಿ ಧೃತಿಗೆಡಿಸುವ ಪ್ರಯತ್ನ ಮಾಡುತ್ತಾರೆ. ಭಾರತೀಯರು ಆದಕ್ಕೆಲ್ಲ ಸೊಪ್ಪು ಹಾಕುವುದಿಲ್ಲವೆನ್ನುವುದು ಬೇರೆ ವಿಷಯ.
ಜೇಸನ್ ಗಿಲ್ಲೆಸ್ಪಿ ಗೊತ್ತಲ್ಲ? ಅವರು ಈಗಾಗಲೇ ಇಂಥ ಗೇಮ್ ಶುರು ಮಾಡಿಬಿಟ್ಟಿದ್ದಾರೆ. ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್, ನವೆಂಬರ್ನಿಂದ ಶುರುವಾಗುವ ಪ್ರವಾಸದಲ್ಲಿ ಭಾರತ, ಹಗಲು–ರಾತ್ರಿ ಟೆಸ್ಟ್ ಪಂದ್ಯವನ್ನಾಡಲು ಮೊದಲು ನಿರಾಕರಿಸಿ ಆಮೇಲೆ ಒಪ್ಪಿಕೊಂಡಿತು. ಈ ಸರಣಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅದು ಮುಗಿದುಹೋಗಿರುವ ಅಧ್ಯಾಯ. ಆದರೆ, ಗಿಲ್ಲೆಸ್ಪಿ ಅದನ್ನು ಪುನಃ ಕೆದಕಿದ್ದಾರೆ.
ಭಾರತೀಯರು ಡೇ ಌಂಡ್ ನೈಟ್ ಟೆಸ್ಟ್ ಪಂದ್ಯವನ್ನಾಡಲು ಹೆದರಬಾರದು, ಮುಂಬರುವ ದಿನಗಳಲ್ಲಿ ಈ ತೆರನಾದ ಪಂದ್ಯಗಳು ಕ್ರಿಕೆಟ್ನ ಭಾಗವಾಗಲಿರುವುದರಿಂದ ಅವರು ಆಡಲು ಒಪ್ಪಿಕೊಳ್ಳಬೇಕು. ಅವರು ಮುಕ್ತ ಮನಸ್ಸಿನಿಂದ ಮೈದಾನಕ್ಕಿಳಿಯುವ ಅವಶ್ಯಕತೆಯಿದೆ, ಅಂತಿಮವಾಗಿ ಅದು ಸಹ ಒಂದು ಕ್ರಿಕೆಟ್ ಪಂದ್ಯವೇ. ಕ್ರೀಡೆಯ ಕೆಲ ನಿಯಮಗಳು ಬದಲಾಗಬಹುದು, ಆದರೆ ಕ್ರೀಡೆ ಯಾವತ್ತೂ ಬದಲಾಗದು, ಎಂದು ಗಿಲ್ಲೆಸ್ಪಿ ಹೇಳಿದ್ದಾರೆ.
ಹೊನಲು ಬೆಳಕಿನಲ್ಲಿ ಪಿಂಕ್ ಚೆಂಡಿನಿಂದ ಟೆಸ್ಟ್ ಪಂದ್ಯವನ್ನಾಡುವುದು ದೊಡ್ಡ ಸಮಸ್ಯೆಯೇನಲ್ಲವೆಂದು ಗಿಲ್ಲೆಸ್ಪಿ ಹೇಳಿದ್ದಾರೆ.
‘‘ಹಗಲು–ರಾತ್ರಿ ಟೆಸ್ಟ್ ಪಂದ್ಯದಲ್ಲಿ ಅರ್ಧ ದಿನದ ಆಟ ಸಹಜವಾದ ಬೆಳಕಿನಲ್ಲಿ ನಡೆಯುತ್ತದೆ. ಕೊನೆಯ ಸೆಷನ್ ಮಾತ್ರ ಕೃತಕ ಬೆಳಕಿನಲ್ಲಿ ಆಡಲಾಗುತ್ತದೆ. ಅಷ್ಟು ಮಾತ್ರದ ಸಮಯದಲ್ಲಿ ಪಿಂಕ್ ಬಣ್ಣದ ಬಾಲ್ನಿಂದ ಆಡುವುದು ಬ್ಯಾಟ್ಸ್ಮನ್ ಮತ್ತು ಫೀಲ್ಡರ್ಗಳಿಗೆ ಕೊಂಚ ತೊಂದರೆಯಾಗುವುದು ನಿಜವಾದರೂ ಸಮಸ್ಯೆ ಖಂಡಿತ ಅಲ್ಲ. ಇಂಡಿಯಾ ಪ್ರಪಂಚದೆಲ್ಲೆಡೆ ಕ್ರಿಕೆಟ್ ಆಡಿದೆ. ಹಾಗಾಗಿ, ಡೇ ಌಂಡ್ ನೈಟ್ ಟೆಸ್ಟ್ ಆಡಲು ಅದು ಹಿಂಜರಿಯಬಾರದು,’’ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ.
ಆದರೆ, ಗಿಲ್ಲೆಸ್ಪಿ ಬಾರತದ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಮನಸಾರೆ ಕೊಂಡಾಡಿದ್ದಾರೆ.
‘‘ಬುಮ್ರಾ ಎತ್ತರದ ಆಳಾಗಿರುವುದರ ಜೊತೆಗೆ ಜಾಸ್ತಿ ವೇಗವನ್ನು ಹೊಂದಿರುವುದರಿಂದ, ಆಸ್ಟ್ರೇಲಿಯಾದ ಬೌನ್ಸಿ ಪಿಚ್ಗಳಲ್ಲಿ ಹೆಚ್ಚು ಪುಟಿತವನ್ನು ಪಡೆದು ಚೆಂಡನ್ನು ಸ್ವಿಂಗ್ ಮತ್ತು ಸೀಮ್ ಮಾಡಬಲ್ಲರು. ಶಮಿ ಸಹ ಬಾಲನ್ನು ಎರಡೂ ಕಡೆ ಸ್ವಿಂಗ್ ಮಾಡುತ್ತಾರೆ. ಅವರಿಬ್ಬರೂ ನಿಸ್ಸಂದೇಹವಾಗಿ ಕ್ವಾಲಿಟಿ ಬೌಲರ್ಗಳು,’’ ಎಂದು ಗಿಲ್ಲೆಸ್ಪಿ ಭಾರತೀಯ ಬೌಲರ್ಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
‘‘ಆದರೆ ಆಸ್ಟ್ರೇಲಿಯಾದ ಬೌನ್ಸಿ ವಿಕೆಟ್ಗಳನ್ನು ನೆನೆದು ಬೌಲರ್ಗಳು ಕ್ಯಾರೀಡ್–ಅವೇ ಅಗುವುದು ಸಹಜ, ಹಾಗಾಗೇ ಅವರು ಅಲ್ಲಿ ಆಡುವಾಗ ಶಾರ್ಟ್ಪಿಚ್ ಎಸೆತಗಳ ಮೊರೆ ಹೋಗುತ್ತಾರೆ. ಹಾಗೆ ಮಾಡಿ ಬ್ಯಾಟ್ಸ್ಮನ್ನನ್ನು ಹೆದರಿಸಬಹುದೆಂದು ಭಾವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂಡಿಯಾದ ಬೌಲರ್ಗಳು ಸ್ವಲ್ಪ ಎಚ್ಚರವಹಿಸುವುದು ಒಳಿತು,’’ ಎಂದು ಗಿಲ್ಲೆಸ್ಪಿ ಹೇಳಿದ್ದಾರೆ.
ಅಂದಹಾಗೆ, ಭಾರತ ಮತ್ತು ಆಸ್ಟ್ರೇಲಿಯ ನಡುವೆ 4-ಟೆಸ್ಟ್ ಪಂದ್ಯಗಳ ಮೈಕಿ ಮೊದಲನೆಯದ್ದು ಹಗಲು–ರಾತ್ರಿ ಟೆಸ್ಟ್ ಆಗಿದ್ದು, ಅಡಿಲೇಡ್ನಲ್ಲಿ ಡಿಸೆಂಬರ್ 17ರಿಂದ ನಡೆಯಲಿದೆ.