ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ.
ಟೇಬಲ್ ಟೆನಿಸ್ನಲ್ಲೂ ಜಡೇಜಾ ಪಂಟರ್!
ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಗೆಲುವು ಸಾಧಿಸಿದ್ರು.
ಡ್ರೋನ್ ಕಂಟ್ರೋಲ್ ಮಾಡಿದ ರೋಹಿತ್ ಶರ್ಮಾ!
ಆ ಕಡೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬೈ ಅಂಗಳದಲ್ಲಿ ರೋಹಿತ್ ಶರ್ಮಾ ಪ್ರಾಕ್ಟೀಸ್ ಟೈಮ್ನಲ್ಲಿ ಡ್ರೋನ್ ಕಂಟ್ರೋಲ್ ಮಾಡ್ತೀರೋ ಫನ್ನಿ ವಿಡಿಯೋವನ್ನ ಹರಿಯಬಿಟ್ಟಿದೆ. ಒಟ್ನಲ್ಲಿ ಬಯೋ ಬಬಲ್ ನಿಯಮ ಇದ್ರೂ ಮರಳುಗಾಡಿನಲ್ಲಿ ಐಪಿಎಲ್ ಆಟಗಾರರು ಬಿಂದಾಸ್ ಎಂಜಾಯ್ ಮಾಡ್ತಿದ್ದಾರೆ..
Guess the paddle is too small for the sword celebration! ? @imjadeja @sharmakarn03 #WhistlePodu pic.twitter.com/ffM5LmBYIA
— Chennai Super Kings (@ChennaiIPL) September 8, 2020
Ro's got the dROne in check ✅?#OneFamily #MumbaiIndians #MI #Dream11IPL @ImRo45 pic.twitter.com/eU9Rlj2HiY
— Mumbai Indians (@mipaltan) September 9, 2020
ಇದನ್ನೂ ಓದಿ:IPL 2020ಗೆ ಕೌಂಟ್ಡೌನ್ ಶುರು.. ಮ್ಯಾಚ್ ಟೈಮ್ಟೇಬಲ್ ಪ್ರಕಟ!
Published On - 11:03 am, Fri, 11 September 20