ರೋಚಕ IPL 2020: ರನ್​ ಹೊಳೆ ಹರಿಸಲು ಕೊಹ್ಲಿ ಬಳಗ ರೆಡಿ, ಕನ್ನಡದಲ್ಲಿ RCB ಟ್ವೀಟ್!

ರೋಚಕ IPL 2020: ರನ್​ ಹೊಳೆ ಹರಿಸಲು ಕೊಹ್ಲಿ ಬಳಗ ರೆಡಿ, ಕನ್ನಡದಲ್ಲಿ RCB ಟ್ವೀಟ್!

ಈ ಬಾರಿಯ ಐಪಿಎಲ್​ನಲ್ಲಿ ಆರ್​ಸಿಬಿ ತಂಡ ತನ್ನ ಮೊದಲ ಪಂದ್ಯದಲ್ಲಿ ಹೈದ್ರಾಬಾದ್ ತಂಡವನ್ನ ಎದುರಿಸಲಿದೆ. ಪ್ರಥಮ ಪಂದ್ಯದಲ್ಲೇ ರನ್ ಮಳೆ ಹರಿಸೋದಕ್ಕೆ ನಾನು ರೆಡಿ ಅನ್ನೋ ಪೋಸ್ಟ್ ಅನ್ನ ವಿರಾಟ್, ಟ್ವೀಟ್ ಮಾಡಿದ್ದಾರೆ.

ಕನ್ನಡದಲ್ಲಿ ಆರ್​ಸಿಬಿ ಟ್ವೀಟ್
ಆರ್​ಸಿಬಿ ತಂಡ ಕನ್ನಡದಲ್ಲಿ ಟ್ವೀಟ್ ಮಾಡಿ, ಕನ್ನಡಿಗರ ಮನಗೆದ್ದಿದೆ. ದೇವ್​ದತ್ತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ ಫೋಟೋ ಹಾಕಿ, ನಮ್ಮ ಕರ್ನಾಟಕದ ಹುಡುಗರಿಗೆ ಯಾವ ಸಂದೇಶವನ್ನ ನೀಡಲು ನೀವು ಬಯಸುತ್ತೀರಿ ಅಂತ ಪ್ರಶ್ನೆ ಮಾಡಿದೆ.

ಎಬಿಡಿ ಟಿಪ್ಸ್ ಪಡೆಯಲು ಸಲಹೆ
ಆರ್​ಸಿಬಿ ತಂಡದ ಆಟಗಾರರು ರಾತ್ರಿ ಅಭ್ಯಾಸ ಪಂದ್ಯವನ್ನಾಡಿದ್ರು. ಈ ವೇಳೆ ಪಾರ್ಥಿವ್ ಪಟೇಲ್, ಯುವ ಬ್ಯಾಟ್ಸ್​ಮನ್ ಪಡಿಕ್ಕಲ್​ಗೆ ಎಬಿ ಡಿವಿಲಿಯರ್ಸ್ ಬಳಿ ಟಿಪ್ಸ್ ಪಡೆಯಲು ಸೂಚನೆ ನೀಡಿದ್ರು.

ಆಕಾಶ್ ಟೀಮ್​ನಲ್ಲಿ 3 ಆಲ್​ರೌಂಡರ್
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದು, ಮೂವರು ಆಲ್​ರೌಂಡರ್​ಗೆ ಸ್ಥಾನ ನೀಡಿದ್ದಾರೆ. ಌರೋನ್ ಫಿಂಚ್, ಪಡಿಕ್ಕಲ್ ಓಪನರ್ಸ್ ಆದ್ರೆ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಕ್ರಿಸ್ ಮೋರಿಸ್​ಗೆ ಆಲ್​ರೌಂಡರ್ ಆಗಿ ಆಯ್ಕೆಯಾಗಿದ್ದಾರೆ.

ಸ್ಟೇನ್ ಅತ್ಯುತ್ತಮ ವೇಗಿ
ಆರ್​ಸಿಬಿ ತಂಡದ ವೇಗಿ ಡೇಲ್ ಸ್ಟೇನ್ ನಾನು ಕಂಡು ಅತ್ಯುತ್ತಮ ವೇಗಿ ಎಂದು ಕೇನ್ ವಿಲಿಯಮ್ಸನ್ ಹೇಳಿಕೊಂಡಿದ್ದಾರೆ. ನಾನು ಹಲವಾರು ವೇಗಿಗಳನ್ನ ಎದುರಿಸಿದ್ದೇನೆ. ಆದ್ರೆ, ಸ್ಟೇನ್​ರನ್ನ ಎದುರಿಸಿದ್ದು ಇನ್ನೂ ಸ್ಮರಣೀಯವಾಗಿದೆ ಎಂದು ಕೇನ್ ಹೇಳಿದ್ದಾರೆ.

ಸೆ.12ಕ್ಕೆ ಸಿಪಿಎಲ್ ಆಟಗಾರರ ಆಗಮನ
ಸಿಪಿಎಲ್ ಟೂರ್ನಿ ನಿನ್ನೆಗೆ ಅಂತ್ಯಗೊಂಡಿದ್ದು, ಸೆ.12ರಂದು ಐಪಿಎಲ್​ನಲ್ಲಿ ಭಾಗವಹಿಸೋ ಆಟಗಾರರು ಯುಎಇ ತಲುಪಲಿದ್ದಾರೆ. ಡ್ವೇನ್ ಬ್ರಾವೋ, ಸ್ಯಾಂಟ್ನರ್, ತಾಹೀರ್ ಹಾಗೂ ಕಿರಾನ್ ಪೊಲಾರ್ಡ್ ಒಂದು ವಾರ ಕ್ವಾರಂಟೈನ್ ಆಗಬೇಕಿದೆ.

ಅಭ್ಯಾಸಕ್ಕೆ ಎಂಟ್ರಿಕೊಟ್ಟ ದೀಪಕ್
ಕೊರೊನಾ ಸೋಂಕಿಗೆ ತುತ್ತಾಗಿದ್ದ ಚೆನ್ನೈ ತಂಡದ ವೇಗಿ ದೀಪಕ್ ಚಹರ್, ಪ್ರಾಕ್ಟೀಸ್ ಸೆಷನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಕ್ ಸೋಂಕಿನಿಂದ ಸಂಪೂರ್ಣ ಗುಣಮುಖನಾಗಿದ್ದು, ಎರಡನೇ ಕೊವಿಡ್ ಪರೀಕ್ಷಾ ವರದಿಯೂ ನೆಗಿಟಿವ್ ಬಂದಿದೆ.

ಪ್ರಾಚಿ ಜೊತೆ ಪೃಥ್ವಿ ಡೇಟಿಂಗ್?
ಡೆಲ್ಲಿ ತಂಡದ ಆಟಗಾರ ಪೃಥ್ವಿ ಶಾ ಬಾಲಿವುಡ್ ನಟಿಯ ಪ್ರೇಮಬಲೆಯಲ್ಲಿ ಬಿದ್ದಿದ್ದಾರೆ ಅನ್ನೋ ಸುದ್ದಿ ಇನ್ ಸ್ಟಾಗ್ರಾಂನಲ್ಲಿ ವೈರಲ್ ಆಗ್ತಿದೆ. ಪ್ರಾಚಿ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಕೆಲವೊಂದು ಪೋಸ್ಟ್ ಗಳು ಪೃಥ್ವಿ ಜತೆಗೆ ಪ್ರೇಮಾಂಕುರವಾಗಿದೆ ಅನ್ನೋದನ್ನ ಖಚಿತಪಡಿಸಿವೆ.

ರಗಡ್ ರಬಾಡ
ಐಪಿಎಲ್ ಸೀಸನ್ 13ರಲ್ಲೂ ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿ ಎಂದು ಡೆಲ್ಲಿ ವೇಗಿ ಕಗಿಸೋ ರಬಾಡ ಹೇಳಿದ್ದಾರೆ. ಕಳೆದ ಸೀಸನ್​ನಲ್ಲಿ 12ಪಂದ್ಯಗಳನ್ನಾಡಿ 25ವಿಕೆಟ್ ಪಡೆದಿದ್ದು, ಈ ಆವೃತ್ತಿಯಲ್ಲೂ ಅದ್ಭುತ ಪ್ರದರ್ಶನ ನೀಡುವೆ ಎಂದಿದ್ದಾರೆ.

ರಾಯಲ್ಸ್ ಅಭ್ಯಾಸ
ಎರಡನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಗೆ ಕನಸು ಹೊತ್ತಿರೋ ರಾಜಸ್ಥಾನ ರಾಯಲ್ಸ್ ತಂಡ, ಯುಎಇನಲ್ಲಿ ಭರ್ಜರಿ ಅಭ್ಯಾಸ ಮಾಡ್ತಿದೆ. ರಾತ್ರಿ ನಡೆದ ಬ್ಯಾಟಿಂಗ್ ಸೆಷನ್​ನಲ್ಲಿ ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್ ಅಭ್ಯಾಸ ನಡೆಸಿದ್ರು.

ಧೋನಿಗಿಂತ ಉತ್ತಮ ನಾಯಕನಿಲ್ಲ!
ಈ ಬಾರಿಯ ಐಪಿಎಲ್​ನಲ್ಲಿ ಎಂ.ಎಸ್. ಧೋನಿಗಿಂತ ಉತ್ತಮ ನಾಯಕ ಯಾರು ಇಲ್ಲ ಎಂದು ಸಂಜಯ್ ಮಾಂಜ್ರೇಕರ್ ಹೇಳಿದ್ದಾರೆ. ಯುಇಎನಲ್ಲಿ ಸ್ಲೋ ಪಿಚ್ ಆಗಿದ್ದು, ಧೋನಿಗೆ ಸಾಕಷ್ಟು ಅನುಭವವಿದೆ ಎಂದು ಮಂಜ್ರೇಕರ್ ತಿಳಿಸಿದ್ದಾರೆ.

ಕೆಲ ಪಂದ್ಯಗಳಿಗೆ ಹೇಜಲ್​ವುಡ್ ಭಾಗಿ
ಸೀಸನ್ 11ರಲ್ಲಿ ಚೆನ್ನೈ ಪರ ಆಡಲು ಹಿಂದೇಟು ಹಾಕಿದ್ದ ಜೋಶ್ ಹೇಜಲ್​ವುಡ್, ಇದೀಗ ಕೆಲ ಪಂದ್ಯಗಳನ್ನ ಆಡುವ ಸೂಚನೆ ನೀಡಿದ್ದಾರೆ. ಚೆನ್ನೈ ಫ್ರಾಂಚೈಸಿ ಅವಕಾಶ ನೀಡಿದ್ದು, ಕೆಲ ಪಂದ್ಯಗಳನ್ನ ಚೆನ್ನೈ ಪರ ಆಡೋದಾಗಿ ಹೇಜಲ್​ವುಡ್ ತಿಳಿಸಿದ್ದಾರೆ.

ಮುಂಬೈ ಸೇರಿದ ಕ್ರಿಸ್ ಲೈನ್
ಮುಂಬೈ ಇಂಡಿಯನ್ಸ್ ತಂಡದ ಓಪನರ್ ಕ್ರಿಸ್ ಲೀನ್, ದುಬೈಗೆ ಆಗಮಿಸಿದ್ದು 6ದಿನಗಳ ಕ್ವಾರಂಟೈನ್ ಆಗಿದ್ದಾರೆ. ಸಿಪಿಎಲ್​ನಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಲೀನ್, ಹೀನಾಯ ಪ್ರದರ್ಶನ ನೀಡಿದ್ರು. 9ಪಂದ್ಯಗಳನ್ನಾಡಿದ್ದ ಲೀನ್, 138ರನ್ ಗಳಿಸಿದ್ರು.

ಮಿಶ್ರಾಗೆ ಪಂತ್ ಸಿಕ್ಸರ್ ಪಂಚ್
ಐಪಿಎಲ್​ಗೆ ಭರ್ಜರಿ ಹೋಮ್​ವರ್ಕ್ ಮಾಡ್ತಿರೋ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಾರ್ಜಾದಲ್ಲಿ ಅಭ್ಯಾಸ ಪಂದ್ಯಗಳನ್ನ ಆಡ್ತಿದೆ. ಇದೇ ವೇಳೆ ಪವರ್ ಹಿಟ್ಟರ್ ರಿಷಬ್ ಪಂತ್, ಅಮಿತ್ ಮಿಶ್ರಾ ಎಸೆತದಲ್ಲಿ ಸಿಕ್ಸರ್ ಬಾರಿಸಿ ಪರಾಕ್ರಮ ಮೆರೆದಿದ್ದಾರೆ.

ಚೆನ್ನೈ ಚಾಂಪಿಯನ್.. ಬ್ರೆಟ್ ಲೀ ಭವಿಷ್ಯ!
ಐಪಿಎಲ್ ಸೀಸನ್ 13ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಲಿದೆ ಎಂದು ಮಾಜಿ ವೇಗಿ ಬ್ರೇಟ್ ಲೀ ಹೇಳಿದ್ದಾರೆ. ಸಿಎಸ್​ಕೆ ಈ ಬಾರಿ ಚಾಂಪಿಯನ್ ಆಗಲಿದೆ. ಪ್ಲೇ ಆಫ್ ತಲುಪಲಿದೆ ಎಂದು ಬ್ರೆಟ್ ಲೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಂಡೆಗೆ ಶುಭಕೋರಿದ ಆಟಗಾರರು
ಕನ್ನಡಿಗ ಹಾಗೂ ಸನ್​ರೈಸರ್ಸ್ ಹೈದ್ರಾಬಾದ್ ತಂಡದ ಬ್ಯಾಟ್ಸ್​ಮನ್ ಮನೀಷ್ ಪಾಂಡೆ, 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮನೀಷ್​​ಗೆ ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ ಸೇರಿದಂತೆ ಹೈದ್ರಾಬಾದ್ ತಂಡದ ಆಟಗಾರರು ಶುಭಕೋರಿದ್ರು.

ರೆಫಲ್ ಜೆಟ್​ಗೆ ಧೋನಿ ಫಿದಾ
ಭಾರತದ ವಾಯುಪಡೆಗೆ ಸೇರ್ಪಡೆಯಾದ ರಫೇಲ್ ಜೆಟ್‌ ವಿಮಾನಗಳ ಬಗ್ಗೆ ಪ್ರತಿಕ್ರಿಯಿಸಿರೋ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಲೋಹದ ಹಕ್ಕಿಗಳು ಬಹಳ ಉತ್ಕೃಷ್ಠವಾಗಿವೆ. ಭಾರತೀಯ ವಾಯುಪಡೆಗೆ ಪೈಲಟ್‌ಗಳಿಗೆ ಸಿಕ್ಕಿರುವ ಅಮೋಘವಾದ ಆಯುಧಗಳಾಗಿವೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಚೆನ್ನೈ ಪರ ಆಡೋದು ನನ್ನ ಕನಸು
ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡೋದೇ ಅದೃಷ್ಟ ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡದಲ್ಲಿ ಆಡೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ.

ಬಾಂಗ್ಲಾ ತಂಡಕ್ಕಿಲ್ಲ ಪ್ರಾಯೋಜಕರು
ಕ್ರಿಕೆಟ್‌ ದುನಿಯಾದಲ್ಲಿ ಪವರ್‌ ಫುಲ್‌ ಟೀಂ ಆಗಲು ಹೊರಟಿರೋ ಬಾಂಗ್ಲಾದೇಶ ತಂಡಕ್ಕೆ ಸ್ಪಾನ್ಸರ್‌ ಶಿಪ್‌ ಇಲ್ಲದೇ ಪರದಾಡುವ ಸ್ಥಿತಿಗೆ ಬಂದಿದೆ. ಕೊರೊನಾ ಹೊಡೆತಕ್ಕೆ ಇದೀಗ ಬಾಂಗ್ಲಾ ಕ್ರಿಕೆಟ್‌ ಮಂಡಳಿ ತತ್ತರಿಸಿದ್ದು, ನಮ್ಮ ತಂಡಕ್ಕೆ ಪ್ರಾಯೋಜಕತ್ವ ನೀಡಲು ಯಾರು ಬಂದಿಲ್ಲ ಎಂದು ಹೇಳಿಕೊಂಡಿದೆ.

ಸಿಮೋನ್ಸ್ ರನ್ ಸರದಾರ
ಈ ಬಾರಿಯ ಸಿಪಿಎಲ್​ನಲ್ಲಿ ಟ್ರಿಬ್ಯಾಗೊ ನೈಟ್ ರೈಡರ್ಸ್ ತಂಡ ಓಪನರ್ ಲಿಂಡ್ಲಲ್ ಸಿಮೋನ್ಸ್ ಅತೀ ಹೆಚ್ಚು ರನ್ ಕಲೆಹಾಕಿದ್ದಾರೆ. ಫೈನಲ್ ಪಂದ್ಯದಲ್ಲಿ ಅಜೇಯ 84ರನ್ ಗಳಿಸಿದ್ದ ಸಿಮೋನ್ಸ್, ಈ ಆವೃತ್ತಿಯಲ್ಲಿ 356ರನ್ ಕಲೆಹಾಕಿದ್ದಾರೆ.

ಕುಗ್ಗೆಜಿನ್​ಗೆ ಬೆಸ್ಟ್ ಬೌಲರ್
ಸಿಪಿಎಲ್ 2020ರ ಆವೃತ್ತಿಯಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ತಂಡದ ಸ್ಕಾಟ್ ಕುಗ್ಗೆಜಿನ್, ಹೈಯೆಸ್ಟ್ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದ್ದಾರೆ. 11ಪಂದ್ಯಗಳನ್ನಾಡಿದ್ದ ಕುಗ್ಗೆಜಿನ್ ಒಟ್ಟು 17ವಿಕೆಟ್ ಪಡೆದುಕೊಂಡಿದ್ದಾರೆ.

ಪೊಲ್ಲಾರ್ಡ್ ಶ್ರೇಷ್ಠ ಆಟಗಾರ
ಸಿಪಿಎಲ್ 2020ರಲ್ಲಿ ಚಾಂಪಿಯನ್ ಕ್ಯಾಪ್ಟನ್ ಕಿರಾನ್ ಪೊಲ್ಲಾರ್ಡ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡ್ರು. 11ಪಂದ್ಯಗಳಲ್ಲಿ 8ವಿಕೆಟ್ ಪಡೆದಿರೋ ಪೊಲ್ಲಾರ್ಡ್​, 207ರನ್ ಕಲೆಹಾಕಿದ್ರು.

ಇದನ್ನೂ ಓದಿ: IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Click on your DTH Provider to Add TV9 Kannada