ಚೆನ್ನೈ ಉದ್ಯಮಿ ವಿರುದ್ಧ ವಂಚನೆ ಆರೋಪ: ಹರ್ಭಜನ್​ ಸಿಂಗ್​ರಿಂದ ದೂರು ದಾಖಲು

  • Updated On - 6:46 pm, Thu, 10 September 20
ಚೆನ್ನೈ ಉದ್ಯಮಿ ವಿರುದ್ಧ ವಂಚನೆ ಆರೋಪ: ಹರ್ಭಜನ್​ ಸಿಂಗ್​ರಿಂದ ದೂರು ದಾಖಲು

ದೆಹಲಿ: ಚೆನ್ನೈ ಮೂಲದ ಉದ್ಯಮಿಯೊಬ್ಬರು ನನ್ನಿಂದ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಟೀಂ ಇಂಡಿಯಾದ ಖ್ಯಾತ ಆಫ್​ ಸ್ಪಿನ್ನರ್ ಹರ್ಭಜನ್​ ಸಿಂಗ್​ ಆರೋಪಿಸಿದ್ದಾರೆ. ಈ ಕುರಿತು ಹರ್ಭಜನ್ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

2015 ರಲ್ಲಿ ಚೆನ್ನೈ ಮೂಲದ ಉದ್ಯಮಿಯೊಬ್ಬರು ನನ್ನ ಬಳಿ 4 ಕೋಟಿ ರೂಪಾಯಿ ಮೊತ್ತವನ್ನು ಸಾಲವಾಗಿ ಪಡೆದಿದ್ದರು. ಆದರೆ, ನಾನು ಎಷ್ಟು ಬಾರಿ ಕೇಳಿದರೂ ಅವರು ಸಾಲದ ಮೊತ್ತ ಹಿಂದಿರುಗಿಸುತ್ತಿಲ್ಲ ಅಂತಾ ಹರ್ಭಜನ್ ಆರೋಪಿಸಿದ್ದಾರೆ.

ಹೀಗಾಗಿ, ಹರ್ಭಜನ್​ ತಮಗೆ ವಂಚೆನ ಆಗಿದೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ, ಬಂಧನದ ಭೀತಿ ಎದುರಿಸುತ್ತಿರುವ ಉದ್ಯಮಿ ಮದ್ರಾಸ್​ ಹೈಕೋರ್ಟ್​ನ ಮೊರೆ ಹೋಗಿ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

Click on your DTH Provider to Add TV9 Kannada