ಐಪಿಎಲ್ನಲ್ಲಿ ರಾಜಸ್ತಾನ ರಾಯಲ್ಸ್ ಆಟಗಾರರ ಮೇಲೆ TV9 ಭಾರತವರ್ಷ್ ಜೆರ್ಸಿ!
ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ. ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಮಹಾ ಕ್ರಿಕೆಟ್ ಮೇಳ […]
ಸೆಪ್ಟಂಬರ್ 19ರಿಂದ ನವೆಂಬರ್10ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತಿಯಲ್ಲಿ ಭಾಗವಹಿಸುವ ರಾಜಸ್ತಾನ ರಾಯಲ್ಸ್ ತಂಡಕ್ಕೆ TV9 ಭಾರತವರ್ಷ್ ಪ್ರಮುಖ ಪಾಲುದಾರನಾಗಿರುತ್ತದೆ. ರಾಯಲ್ಸ್ ಫ್ರಾಂಚೈಸಿಯ ಆಟಗಾರರು TV9 ಲೊಗೊ ಮುಂಭಾಗದಲ್ಲಿರುವ ಜೆರ್ಸಿಯನ್ನು ಅತ್ಯಂತ ಹೆಮ್ಮೆಯಿಂದ ಧರಿಸಲಿದ್ದಾರೆಂದು ತಂಡದ ಆಡಳಿತ ವರ್ಗ ಪ್ರಕಟಿಸಿದೆ.
ರಾಜಸ್ತಾನ ರಾಯಲ್ಸ್ ಆಟಗಾರರು ಧರಿಸುವ ಜೆರ್ಸಿಯ ಮುಂಭಾಗದಲ್ಲಿರಬೇಕಿದ್ದ EXPO 2020 Dubai ಬ್ರ್ಯಾಂಡನ್ನು TV9 ಭಾರತವರ್ಷ್ ಸ್ಥಾನಪಲ್ಲಟಗೊಳಿಸಿದೆ. ಕೊವಿಡ್ ಪಿಡುಗಿನಿಂದಾಗಿ ಈ ಬಾರಿಯ ಐಪಿಎಲ್-13 ಮಹಾ ಕ್ರಿಕೆಟ್ ಮೇಳ ಸೆಪ್ಟಂಬರ್ವರೆಗೆ ಮುಂದೂಡಲ್ಪಟ್ಟಿದೆ.
TV9 ನೆಟ್ವರ್ಕ್ ಮತ್ತು ರಾಜಸ್ತಾನ ರಾಯಲ್ಸ್ ಹೆಚ್ಚಿನದನ್ನು ಸಾಧಿಸುವ ಬಗ್ಗೆ ಹೆಮ್ಮೆಪಡುತ್ತಿವೆ, ಆದರೆ ಅದು ಈ ಎರಡೂ ಗುಂಪುಗಳು ತಮ್ಮ ತಮ್ಮ ವಹಿವಾಟಿನಲ್ಲಿ ಅವಿಷ್ಕಾರ ಮಾಡುವುದನ್ನು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ರಾಯಲ್ಸ್ ತಂಡವು ಮುಂಬರುವ ಸೀಸನ್ನಲ್ಲಿ ತನ್ನಲ್ಲಿರುವ ಅಪ್ರತಿಮ ಕ್ರಿಕೆಟ್ ಕಂಟೆಂಟನ್ನು TV9 ನ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಹಂಚಿಕೊಳ್ಳುವುದಕ್ಕೆ ಎದುರು ನೋಡುತ್ತಿದೆ, ಎಂದು ತಂಡದ ಪ್ರಕಟಣೆ ತಿಳಿಸಿದೆ.
ಈ ಸಹಭಾಗಿತ್ವದ ಬಗ್ಗೆ ಪ್ರತಿಕ್ರಿಯಿಸಿರುವ TV9 ನೆಟ್ವರ್ಕ್ನ ಸಿಈಒ, ಬರುನ್ ದಾಸ್, ‘‘ಭಾರತದಲ್ಲೀಗ ಕ್ರಿಕೆಟ್ ಕೇವಲ ಕ್ರೀಡೆ ಮಾತ್ರವಾಗಿರದೆ, ಒಂದು ಧರ್ಮವಾಗಿ ಮಾರ್ಪಟ್ಟಿದೆ. ಈ ಹಿನ್ನೆಲೆಯಲ್ಲೇ ಭಾರತದ ಅತಿ ದೊಡ್ಡ ಸುದ್ದ್ದಿ ಜಾಲವಾಗಿರುವ TV9 ನೆಟ್ವರ್ಕ್, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ತಾನ ರಾಯಲ್ಸ್ ತಂಡದೊಂದಿಗೆ ಪಾಲುದಾರಿಕೆ ಹೊಂದಿದೆ.’’ ಎಂದು ಹೇಳಿದರು.
‘‘ನಮ್ಮ ರಾಷ್ಟ್ರೀಯ ಹಿಂದಿ ನ್ಯೂಸ್ ಚ್ಯಾನೆಲ್ TV9 ಭಾರತವರ್ಷ್ ದೇಶದ ಚ್ಯಾನೆಲ್ ಎರಡನೇ ಅತಿ ಜನಪ್ರಿಯ ಚ್ಯಾನೆಲ್ ಎನಿಸಿಕೊಳ್ಳುವಲ್ಲಿ ತೋರಿರುವ ಅಸಾಧಾರಣ ಪ್ರಗತಿಯು, ವೀಕ್ಷಕರು ನೈಜ್ಯ ಸುದ್ದಿ ಮಾತ್ರವಲ್ಲದೆ ಸುದ್ದಿ ಒದಗಿಸುವ ವಿಧಾನದಲ್ಲೂ ಹೊಸ ಅವಿಷ್ಕಾರಗಳನ್ನು ಬಯಸುತ್ತಾರೆ ಎಂದು ನಿರೂಪಿಸುತ್ತದೆ, ಎಂದು ದಾಸ್ ಹೇಳಿದರು.