ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ಹಣಾಹಣಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದ್ದಾರೆ. ಹೀಗಾಗಿ ರೋಹಿತ್ ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬುಧವಾರ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದ್ದು, ವಿಡಿಯೋದಲ್ಲಿ ರೋಹಿತ್ ಶರ್ಮಾ ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಹೊಡೆಯುವುದನ್ನು ಕಾಣಬಹುದು.
ವೀಡಿಯೊದಲ್ಲಿ, ರೋಹಿತ್ ಟ್ರ್ಯಾಕ್ನ ಮುಂದೆ ಬಂದು ಚೆಂಡನ್ನು ನೇರವಾಗಿ ಬೌಲರಿನ ತಲೆಯ ಮೇಲೆ ಹೊಡೆದಿದ್ದಾರೆ. ಆದರೆ ಶಾಟ್‌ನ ಕುತೂಹಲಕಾರಿ ಸಂಗತಿಯೆಂದರೆ ರೋಹಿತ್ ಹೊಡೆದ ಬಾಲ್ ಕ್ರೀಡಾಂಗಣದಿಂದ ಹೊರಗೆ ಹೋಗಿ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಬಿದ್ದಿದೆ!
? Batsmen smash sixes
? Legends clear the stadium
? Hitman smashes a six + clears the stadium + hits a moving ?#OneFamily #MumbaiIndians #MI #Dream11IPL @ImRo45 pic.twitter.com/L3Ow1TaDnE— Mumbai Indians (@mipaltan) September 9, 2020