IPL 2020 ಪ್ಯಾಟ್ ಕಮಿನ್ಸ್ ವಿಚಾರದಲ್ಲಿ ಉಲ್ಟಾ ಆಯ್ತಾ.. KKR ಲೆಕ್ಕಚಾರ
IPL ನ ಪ್ರತಿ ಆವೃತ್ತಿಯ ಬಿಡ್ಡಿಂಗ್ನಲ್ಲೂ ಕೆಲ ಆಟಗಾರರೂ ಕನಸಿನಲ್ಲೂ ಅಂದುಕೊಂಡಿರದ ಬೆಲೆಗೆ ಸೇಲ್ ಆಗಿದ್ದಾರೆ. 2019ರ ಡಿಸೆಂಬರ್ನಲ್ಲಿ ನಡೆದ ಸೀಸನ್ 13ರ ಬಿಡ್ಡಿಂಗ್ನಲ್ಲಿ ವಿಶ್ವದ ನಂ. 1 ಟೆಸ್ಟ್ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂ.ಗೆ ಬಿಡ್ ಆಗಿ ಅಚ್ಚರಿಯನ್ನುಂಟು ಮಾಡಿದ್ರು. 2 ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್ನನ್ನ ಕೆಕೆಆರ್ ಫ್ರಾಂಚೈಸಿ 15.50 ಕೋಟಿ ಕೊಟ್ಟು ಖರೀದಿಸಿದೆ. ಭಾರೀ ಮೊತ್ತಕ್ಕೆ ಮಾರಾಟವಾಗಿರೋ ಕಮಿನ್ಸ್, ಐಪಿಎಲ್ ಇತಿಹಾಸದಲ್ಲೇ ಚರಿತ್ರೆ […]
IPL ನ ಪ್ರತಿ ಆವೃತ್ತಿಯ ಬಿಡ್ಡಿಂಗ್ನಲ್ಲೂ ಕೆಲ ಆಟಗಾರರೂ ಕನಸಿನಲ್ಲೂ ಅಂದುಕೊಂಡಿರದ ಬೆಲೆಗೆ ಸೇಲ್ ಆಗಿದ್ದಾರೆ. 2019ರ ಡಿಸೆಂಬರ್ನಲ್ಲಿ ನಡೆದ ಸೀಸನ್ 13ರ ಬಿಡ್ಡಿಂಗ್ನಲ್ಲಿ ವಿಶ್ವದ ನಂ. 1 ಟೆಸ್ಟ್ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂ.ಗೆ ಬಿಡ್ ಆಗಿ ಅಚ್ಚರಿಯನ್ನುಂಟು ಮಾಡಿದ್ರು.
2 ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್ನನ್ನ ಕೆಕೆಆರ್ ಫ್ರಾಂಚೈಸಿ 15.50 ಕೋಟಿ ಕೊಟ್ಟು ಖರೀದಿಸಿದೆ. ಭಾರೀ ಮೊತ್ತಕ್ಕೆ ಮಾರಾಟವಾಗಿರೋ ಕಮಿನ್ಸ್, ಐಪಿಎಲ್ ಇತಿಹಾಸದಲ್ಲೇ ಚರಿತ್ರೆ ಸೃಷ್ಟಿಸಿದ್ದಾರೆ. ಆದ್ರೀಗ ಇದೇ ಕಮಿನ್ಸ್ ವಿಚಾರದಲ್ಲಿ ಕೆಕೆಆರ್ ಫ್ರಾಂಚೈಸಿ ತಲೆಕೆಡಿಸಿಕೊಂಡಿದೆ
ಕೆಕೆಆರ್ ಪ್ಲಾನ್ ಉಲ್ಟಾ ಹೊಡಿತಾ? ಬರೋಬ್ಬರಿ 15.50ಕೋಟಿಗೆ ಸೇಲ್ ಆಗಿ ಇಡೀ ವಿಶ್ವ ಕ್ರಿಕೆಟ್ಟೆ ದಂಗಾಗುವಂತೆ ಮಾಡಿರೋ ಕಮಿನ್ಸ್, ತನ್ನ ಖರೀದಿಯನ್ನ ಸಮರ್ಥನೆ ಮಾಡಿಕೊಳ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಕೋಟಿ ಮೊತ್ತಕ್ಕೆ ಬಿಕರಿಯಾಗಿರೋ ಪ್ಯಾಟ್ ಕಮಿನ್ಸ್ ಮೇಲೆ ಕೆಕೆಆರ್ ಫ್ರಾಂಚೈಸಿ ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿತ್ತು. ಆದ್ರೀಗ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮಕ್ಕೂ ಮುನ್ನ, ಕಮಿನ್ಸ್ ಕೆಕೆಆರ್ ಫ್ರಾಂಚೈಸಿ ನಿರೀಕ್ಷೆ ಬುಡಮೇಲಾಗೋ ಸೂಚನೆ ನೀಡಿದ್ದಾನೆ.
ನಾವ್ಯಾಕೆ ಪ್ಯಾಟ್ ಕಮಿನ್ಸ್ಗೆ ಅಗ್ನಿ ಪರೀಕ್ಷೆ ಶುರುವಾಗಿದೆ ಅಂತ ಹೇಳ್ತಿದ್ದೀವಿ ಅಂದ್ರೆ, ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಕಮಿನ್ಸ್ ಪಡೆದಿದ್ದು ಒಂದೇ ಒಂದು ವಿಕೆಟ್ ಮಾತ್ರ. ಮೊದಲೆರೆಡು ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ಕಮಿನ್ಸ್ನನ್ನ 3ನೇ ಪಂದ್ಯದಿಂದ ಹೊರಗಿಡಲಾಯ್ತು. ಇದ್ರಿಂದ ಕಮಿನ್ಸ್ ಮೇಲೆ ಸಜಹವಾಗೇ ಒತ್ತಡ ಶುರುವಾಗಿದೆ.