IPL 2021: ಟೀಂ ಇಂಡಿಯಾದ ಈ ಮಾಜಿ ಆಟಗಾರನ ಪ್ರಕಾರ ಆರ್​ಸಿಬಿ ಪ್ಲೇಆಫ್​ಗೂ ತಲುಪುವುದಿಲ್ಲವಂತೆ!

|

Updated on: Apr 04, 2021 | 3:33 PM

IPL 2021: ಅವರು ಈ ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ಮೂರು-ನಾಲ್ಕು ವರ್ಷಗಳನ್ನು ನೋಡಿದಾಗ, ಅವರ ಕೊನೆಯ ಆವೃತ್ತಿ ಅತ್ಯುತ್ತಮವಾದುದು,

IPL 2021: ಟೀಂ ಇಂಡಿಯಾದ ಈ ಮಾಜಿ ಆಟಗಾರನ ಪ್ರಕಾರ ಆರ್​ಸಿಬಿ ಪ್ಲೇಆಫ್​ಗೂ ತಲುಪುವುದಿಲ್ಲವಂತೆ!
ಆರ್​ಸಿಬಿ ತಂಡ
Follow us on

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಅನೇಕ ಐತಿಹಾಸಿಕ ವಿಜಯಗಳನ್ನು ಗೆದ್ದಿರಬಹುದು, ಆದರೆ ಅವರ ನಾಯಕತ್ವದ ಐಪಿಎಲ್‌ನಲ್ಲಿ ಇದುವರೆಗೆ ಯಾವುದೇ ಕಪ್​ ಸಿಕ್ಕಿಲ್ಲ. ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದೇ ಒಂದು ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಸಾಧ್ಯತೆಗಳಿಲ್ಲ. ಜೊತೆಗೆ ಈ ಬಾರಿ ಆರ್​ಸಿಬಿ ಪ್ಲೇಆಫ್‌ಗೂ ಹೋಗುವುದು ಸಹ ಕಷ್ಟವಾಗಿದೆ. ಕಳೆದ ಆವೃತ್ತಿಯಲ್ಲಿ ತಂಡವು ಪ್ಲೇಆಫ್ ತಲುಪಿದರೂ, ಪ್ರಶಸ್ತಿಯನ್ನು ಕಳೆದುಕೊಂಡಿತ್ತು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಚೋಪ್ರಾ ಪ್ರಕಾರ ಆರ್‌ಸಿಬಿ ಐಪಿಎಲ್ -2021ರಲ್ಲಿ ಪ್ಲೇಆಫ್​​ಗೂ ತಲುಪಲು ಸಾಧ್ಯವಾಗುವುದಿಲ್ಲವಂತೆ.

ಆರ್‌ಸಿಬಿ ಕೊನೆಯ ಬಾರಿಗೆ 2016 ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಆಡಿತು. ಆ ಪಂದ್ಯದಲ್ಲಿ ಕೊಹ್ಲಿ ತಂಡದ ನಾಯಕರಾಗಿದ್ದರು. ಫೈನಲ್‌ನಲ್ಲಿ ಆರ್​ಸಿಬಿಯನ್ನು ಸನ್‌ರೈಸರ್ಸ್ ಹೈದರಾಬಾದ್‌ ತಂಡ ಸೋಲಿಸಿತು. ಆರ್‌ಸಿಬಿ ಐಪಿಎಲ್ ಫೈನಲ್‌ನಲ್ಲಿ ಒಟ್ಟು ಮೂರು ಬಾರಿ ಆಡಿದೆ ಆದರೆ ಒಂದೇ ಒಂದು ಬಾರಿ ಯಶಸ್ವಿಯಾಗಲಿಲ್ಲ.

ಕಳೆದ ಆವೃತ್ತಿಯ ಸಾಧನೆ ಪುನರಾವರ್ತನೆಯಾಗುವುದಿಲ್ಲ
ಭಾರತದ ಮಾಜಿ ಬ್ಯಾಟ್ಸ್‌ಮನ್ ಮತ್ತು ನಿರೂಪಕ ಆಕಾಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಆವೃತ್ತಿಯಲ್ಲಿ ಆರ್‌ಸಿಬಿಗೆ ತಮ್ಮ ಹಿಂದಿನ ಆವೃತ್ತಿಯ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಅವರು ಈ ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ಮೂರು-ನಾಲ್ಕು ವರ್ಷಗಳನ್ನು ನೋಡಿದಾಗ, ಅವರ ಕೊನೆಯ ಆವೃತ್ತಿ ಅತ್ಯುತ್ತಮವಾದುದು, ಆದರೆ ಕೊನೆಯದಾಗಿ ಅವರು ಲಯ ಕಳೆದುಕೊಂಡರು. ಆರ್​ಸಿಬಿಯ ಪ್ರಾರಂಭ ಉತ್ತಮವಾಗಿಲ್ಲದಿದ್ದರೆ ಈ ತಂಡಕ್ಕೆ ಸಮಸ್ಯೆಗಳಿರಬಹುದು ಎಂದು ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಇದು ಉತ್ತಮ ಆರಂಭವಾಗಿತ್ತು
ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಆಡಿದ ಕೊನೆಯ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ಉತ್ತಮವಾಗಿ ಪ್ರಾರಂಭ ಪಡೆಯಿತು. ಆದರೆ ಪಂದ್ಯಾವಳಿಯ ದ್ವಿತೀಯಾರ್ಧದಲ್ಲಿ ತಂಡವು ಲಯವನ್ನು ಕಳೆದುಕೊಂಡಿತು. ನಾಲ್ಕನೇ ಸ್ಥಾನ ಗಳಿಸುವ ಮೂಲಕ ತಂಡವು ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಯನ್ನು ಸೋಲಿಸಿತು. ಜೊತೆಗೆ ಆರ್​ಸಿಬಿಯ ಫೈನಲ್‌ ಕನಸನ್ನು ನುಚ್ಚು ನೂರು ಮಾಡಿತು.

ಇದನ್ನೂ ಓದಿ:IPL 2021: ಮುಂಬೈನಲ್ಲಿ ಕೊರೊನಾ ಅಟ್ಟಹಾಸ! ಐಪಿಎಲ್​ ಸುಗಮವಾಗಿ ನಡೆಯಲು BCCI ಮುಂದಿವೆ ಈ ನಾಲ್ಕು ಆಯ್ಕೆಗಳು