ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಈ ಬಾರಿಯ ಐಪಿಎಲ್ 2021 ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಂಡಿದ್ದರು. ಹರಾಜಿನಲ್ಲಿ ಅರ್ಜುನ್ ಅವರನ್ನು ಯಾವ ತಂಡ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇತ್ತು. ಎಲ್ಲರೂ ಊಹಿಸಿದಂತೆ ಅರ್ಜುನ್ ಅವರನ್ನು ಮುಂಬೈ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಅರ್ಜುನ್ ಕಾಲಿಟ್ಟಿದ್ದರು. ಬೌಲರ್ ಆಗಿರುವ ಇವರು, ಮುಂಬೈ ಪರ ಆಡಿದ್ದರು. ಹರಿಯಾಣ ವಿರುದ್ಧದ ಪಂದ್ಯದಲ್ಲಿ 34 ರನ್ ನೀಡಿ ಒಂದು ವಿಕೆಟ್ ಪಡೆದರೆ, ಪುದುಚೇರಿ ವಿರುದ್ಧ 33 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.
ಫೆಬ್ರವರಿ 14 ರಂದು ಮುಂಬೈನಲ್ಲಿ ನಡೆದ 73 ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿದ್ದರು. ಎ ಗುಂಪಿನ ಎರಡನೇ ಸುತ್ತಿನಲ್ಲಿ 31 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದ ಅವರು ಬೌಲಿಂಗ್ನಲ್ಲಿ 41 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದರು.
ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು. ಏಕೆಂದರೆ, ಸಚಿನ್ ತೆಂಡೂಲ್ಕರ್ ಮುಂಬೈನವರು. ಮುಂಬೈ ಇಂಡಿಯನ್ಸ್ ಪರವಾಗಿ ಅವರು ಆಡಿದ್ದಾರೆ. ಹೀಗಾಗಿ, ಎಂಐ ಈ ಬಗ್ಗೆ ಆಸಕ್ತಿ ತೋರಿಸುವ ಸಾಧ್ಯತೆ ಇದೆ ಎಂಬುದು ಭಾರೀ ಚರ್ಚೆ ಆಗಿತ್ತು.
Arjun Tendulkar joins @mipaltan for INR 20 Lac. @Vivo_India #IPLAuction
— IndianPremierLeague (@IPL) February 18, 2021
ಹರಾಜಿನಲ್ಲಿ ಅರ್ಜುನ್ ಅವರ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿತ್ತು. ಅರ್ಜುನ್ ಹೆಸರು ಬರುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಅವರು ಬಿಡ್ ಮಾಡಿದರು. ಉಳಿದ ಯಾವ ತಂಡದವರೂ ಬಿಡ್ ಮಾಡದ ಕಾರಣ ಅರ್ಜುನ್ ಮುಂಬೈ ಪಾಲಾದರು.
ಇದನ್ನೂ ಓದಿ: ಟ್ವಿಟರ್ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್
Published On - 8:23 pm, Thu, 18 February 21