IPL 2021 Auction: ಟ್ವಿಟರ್ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್, ಯಾವ ತಂಡಕ್ಕೆ ಸಚಿನ್ ಪುತ್ರ?
Arjun Tendulkar: ಹೆಚ್ಚಿನ ಟ್ವೀಟಿಗರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೇ ಅರ್ಜುನ್ ಅವರನ್ನು ಖರೀದಿ ಮಾಡಲಿದೆ ಎಂದು ಹೇಳುತ್ತಿದ್ದು ಇನ್ನು ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ಅರ್ಜುನ್ ಅವರನ್ನು ಖರೀದಿ ಮಾಡಿದರೆ ಚೆನ್ನಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಗಾಗಿ ಆಟಗಾರರು ಹರಾಜು ಪ್ರಕ್ರಿಯೆ ನಡೆಯುತ್ತಿದ್ದಂತೆ ಟ್ವಿಟರ್ನಲ್ಲಿ ಅರ್ಜುನ್ ತೆಂಡೂಲ್ಕರ್ನ್ನು ಯಾವ ತಂಡ ಖರೀದಿಸುತ್ತದೆ? ಎಂಬುದರ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಹೆಚ್ಚಿನ ಟ್ವೀಟಿಗರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೇ ಅರ್ಜುನ್ ಅವರನ್ನು ಖರೀದಿ ಮಾಡಲಿದೆ ಎಂದು ಹೇಳುತ್ತಿದ್ದು ಇನ್ನು ಕೆಲವರು ಚೆನ್ನೈ ಸೂಪರ್ ಕಿಂಗ್ಸ್ ಅರ್ಜುನ್ ಅವರನ್ನು ಖರೀದಿ ಮಾಡಿದರೆ ಚೆನ್ನಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಅರ್ಜುನ್ ತೆಂಡೂಲ್ಕರ್ ನ್ನು ಖರೀದಿ ಮಾಡಿದರೆ ಸಿಎಸ್ ಕೆ ತಂಡದಲ್ಲಿ ಕರನ್ (Curran) ಮತ್ತು ಅರ್ಜುನ್ ಇರಲಿದ್ದಾರೆ ಎಂಬ ಮೀಮ್ ಕೂಡಾ ಟ್ವಿಟರ್ನಲ್ಲಿ ಹರಿದಾಡಿದೆ.
If by any chance CSK buys Arjun Tendulkar, then CSK will have both Curran and Arjun in the same team ?? #IPLAuction2021 pic.twitter.com/3NC5p3B96a
— Manish Shukla (@ManishS34685635) February 18, 2021
If Arjun Tendulkar is purchased by any franchise other than Mumbai Indians in today's auction I'll quit twitter.#IPLAuction2021
— Tejusurya 2.0 (@Tejusurya_) February 18, 2021
When U get jersey before auction..
Only Arjun Tendulkar can do it.. pic.twitter.com/A70DmGwQYs
— ₭₳฿łⱤ ₱₳₮ɆⱠ (@kabeerbackup) February 18, 2021
Arjun Tendulkar for @ChennaiIPL ..
Please get him at any cost ??#IPLAuction2021 pic.twitter.com/zuCS2tgdad
— ? ???? ⚔️ ?????? ™️ ? ❁ (@Kingstmb) February 18, 2021
if #CSK buys Arjun Tendulkar #IPLAuction2021, then DHONI will have both Curran-Arjun… pic.twitter.com/FkQCsZPrNN
— Sidharth Dash (@Sidharth_dash) February 18, 2021
Auctioneer: "Ladies & Gentlemen, Arjun Tendulkar at base price for 20L, Anyone?"
*silence*
"Anyone?? Guys??"
*silence*
"No interest. Unso…"
Voice from the back: "20 LAKHS"
*Everybody turns around*
KARAN JOHAR
— Gabbbar (@GabbbarSingh) February 18, 2021
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಪ್ರವೇಶ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಅರ್ಜುನ್ ಕಾಲಿಟ್ಟಿದ್ದರು. ಬೌಲರ್ ಆಗಿರುವ ಇವರು, ಮುಂಬೈ ಪರ ಆಡಿದ್ದರು. ಹರಿಯಾಣ ವಿರುದ್ಧದ ಪಂದ್ಯದಲ್ಲಿ 34 ರನ್ ನೀಡಿ ಒಂದು ವಿಕೆಟ್ ಪಡೆದರೆ, ಪುದುಚೇರಿ ವಿರುದ್ಧ 33 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಹರಾಜಿನಲ್ಲಿ ಅರ್ಜುನ್ ಅವರ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿದೆ.
ಫೆಬ್ರವರಿ 14 ರಂದು ಮುಂಬೈನಲ್ಲಿ ನಡೆದ 73 ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿದ್ದರು. ಎ ಗುಂಪಿನ ಎರಡನೇ ಸುತ್ತಿನಲ್ಲಿ 31 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದ್ದ ಅರ್ಜುನ್ ಅವರು ಬೌಲಿಂಗ್ನಲ್ಲಿ 41 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದರು. ಇದರಿಂದಾಗಿ ಎಂಐಜಿ ಕ್ರಿಕೆಟ್ ಕ್ಲಬ್, ಇಸ್ಲಾಂ ಜಿಮ್ಖಾನಾ ತಂಡವನ್ನು 194 ರನ್‌ಗಳಿಂದ ಸೋಲಿಸಿತ್ತು.
ಹೊಸ ದಾಖಲೆ ಬರೆದ ಕ್ರಿಸ್ ಮೊರಿಸ್ 2021ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ ಮೂಲ ಬೆಲೆ 75 ಲಕ್ಷ ರೂಪಾಯಿ ಇತ್ತು. ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ 2020ರಲ್ಲಿ ಆರ್ಸಿಬಿ ಪರ ಆಡಿದ್ದರು. ಗಾಯದ ಸಮಸ್ಯೆಯಿಂದ ಕೆಲ ಮ್ಯಾಚ್ಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ಆಡಿದ ಕೆಲವೇ ಮ್ಯಾಚ್ಗಳಲ್ಲಿ ಅವರು ಮಿಂಚಿದ್ದರು. ಆದಾಗ್ಯೂ, ಆರ್ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಕ್ರಿಸ್ ಮೊರಿಸ್ಗೆ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಬಿಡ್ ಮಾಡಿತ್ತು. ಆರ್ಸಿಬಿ ಕೂಡ ಇಂದಿನ ಪಂದ್ಯದಲ್ಲಿ ಬಿಡ್ ಮಾಡಿತ್ತು. ಆರ್ಸಿಬಿ ಕ್ರಿಸ್ ಮಾರಿಸ್ಗೆ 12.75 ಕೋಟಿ ರೂಪಾಯಿವರೆಗೆ ಬಿಡ್ ಮಾಡಿತ್ತು. ಮೊರಿಸ್ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಮಧ್ಯೆ ಪಂಜಾಬ್ ಕೂಡ ಹರಾಜಿನಲ್ಲಿ ಸೇರಿಕೊಂಡು 16 ಕೋಟಿ ರೂಪಾಯಿ ಕೂಗಿತ್ತು. ಕೊನೆಗೆ ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತು.
ಇದನ್ನೂ ಓದಿ: ಒಂದೇ ಓವರ್ನಲ್ಲಿ 5 ಸಿಕ್ಸರ್; IPL 14 ಹರಾಜಿಗೂ ಮುನ್ನ ಅರ್ಜುನ್ ತೆಂಡೂಲ್ಕರ್ ಅದ್ಭುತ ಆಲ್ರೌಂಡ್ ಪ್ರದರ್ಶನ
Published On - 4:57 pm, Thu, 18 February 21