ಅಪ್ಪನಾದ ಸ್ಟಾರ್ ಆಟಗಾರ: ಐಪಿಎಲ್ ಹರಾಜಿನಿಂದ ಅರ್ಧಕ್ಕೆ ಹೊರನಡೆದ ಇಂಗ್ಲೆಂಡ್ ವೇಗಿ
Seamer Mark Wood: ಸೀಮರ್ ಇತ್ತೀಚಗಷ್ಟೇ ತಂದೆ ಆಗಿದ್ದರು. ಹೀಗಾಗಿ, ಕುಟುಂಬದ ಜತೆ ಮತ್ತಷ್ಟು ಸಮಯ ಕಳೆಯಲು ಅವರು ಬಯಸಿದ್ದಾರೆ.
ಐಪಿಎಲ್ 2021 ಹರಾಜು ಪ್ರಕ್ರಿಯೆ ಆರಂಭವಾಗಿದೆ. ಕ್ರಿಸ್ ಮಾರಿಸ್ ಅತ್ಯಂತ ಹೆಚ್ಚು ಬೆಲೆಗೆ ಅಂದರೆ 16.25 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಈ ಮಧ್ಯೆ, ಇಂಗ್ಲೆಂಡ್ ವೇಗಿ ಸೀಮರ್ ಮಾರ್ಕ್ ವುಡ್ ಹರಾಜು ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ. 31 ವರ್ಷದ ಸೀಮರ್ ಮಾರ್ಕ್ ಮೂಲ ಬೆಲೆ 2 ಕೋಟಿ ರೂಪಾಯಿ ಆಗಿತ್ತು. ಆದರೆ, ಕೊನೆಯ ಘಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿರುವ ಸೀಮರ್, ಹರಾಜಿನಿಂದ ದೂರ ಉಳಿದಿದ್ದಾರೆ. ಸೀಮರ್ ಇತ್ತೀಚಗಷ್ಟೇ ತಂದೆ ಆಗಿದ್ದರು. ಹೀಗಾಗಿ, ಕುಟುಂಬದ ಜತೆ ಮತ್ತಷ್ಟು ಸಮಯ ಕಳೆಯಲು ಅವರು ಬಯಸಿದ್ದಾರೆ. ಈ ಕಾರಣಕ್ಕೆ ಐಪಿಎಲ್ ಆಡದಿರಲು ಅವರು ನಿರ್ಧರಿಸಿದ್ದಾರೆ.
ಸೀಮರ್ ಭಾರತದ ವಿರುದ್ಧದ ಸರಣಿಗೆ ಇಂಗ್ಲೆಂಡ್ ಪರ ಸೀಮರ್ ಆಡಬೇಕಿತ್ತು. ಆದರೆ, ಅವರು ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಕೊನೆಯ ಎರಡು ಟೆಸ್ಟ್ನಲ್ಲಿ ವುಡ್ ಇಂಗ್ಲೆಂಡ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದಾಖಲೆ ಬರೆದ ಕ್ರಿಸ್ ಮಾರಿಸ್..
2021ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ 16.25 ಕೋಟಿ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇಂದಿನ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್ ಮೊರಿಸ್ ಮೂಲ ಬೆಲೆ 75 ಲಕ್ಷ ರೂಪಾಯಿ ಇತ್ತು. ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ 2020ರಲ್ಲಿ ಆರ್ಸಿಬಿ ಪರ ಆಡಿದ್ದರು. ಗಾಯದ ಸಮಸ್ಯೆಯಿಂದ ಕೆಲ ಮ್ಯಾಚ್ಗಳಿಗೆ ಅವರು ಅಲಭ್ಯರಾಗಿದ್ದರು. ಆದರೆ, ಆಡಿದ ಕೆಲವೇ ಮ್ಯಾಚ್ಗಳಲ್ಲಿ ಅವರು ಮಿಂಚಿದ್ದರು. ಆದಾಗ್ಯೂ, ಆರ್ಸಿಬಿ ಅವರನ್ನು ತಂಡದಿಂದ ಕೈಬಿಟ್ಟಿತ್ತು.
ಕ್ರಿಸ್ ಮೊರಿಸ್ಗೆ ಮುಂಬೈ ಇಂಡಿಯನ್ಸ್ ಮೊದಲ ಬಾರಿಗೆ ಬಿಡ್ ಮಾಡಿತ್ತು. ಆರ್ಸಿಬಿ ಕೂಡ ಇಂದಿನ ಪಂದ್ಯದಲ್ಲಿ ಬಿಡ್ ಮಾಡಿತ್ತು. ಆರ್ಸಿಬಿ ಕ್ರಿಸ್ ಮಾರಿಸ್ಗೆ 12.75 ಕೋಟಿ ರೂಪಾಯಿವರೆಗೆ ಬಿಡ್ ಮಾಡಿತ್ತು. ಮೊರಿಸ್ ಅವರನ್ನು ಪಡೆಯಲು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಭಾರೀ ಪೈಪೋಟಿ ನಡೆದಿತ್ತು. ಈ ಮಧ್ಯೆ ಪಂಜಾಬ್ ಕೂಡ ಹರಾಜಿನಲ್ಲಿ ಸೇರಿಕೊಂಡು 16 ಕೋಟಿ ರೂಪಾಯಿ ಕೂಗಿತ್ತು. ಕೊನೆಗೆ ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂಪಾಯಿಗೆ ಖರೀದಿಸಿತು.
ಇದನ್ನೂ ಓದಿ: IPL 2021 Auction: ಐಪಿಎಲ್ 2021 ಹರಾಜಿನಲ್ಲಿದ್ದಾರೆ 14 ಕನ್ನಡಿಗರು, ಕರ್ನಾಟಕದವರಿಗೆ ಆದ್ಯತೆ ಕೊಡುತ್ತಾ RCB
Published On - 5:21 pm, Thu, 18 February 21