IPL Auction 2021: ಬ್ರಿಟಿಷ್ ಆಟಗಾರರು ಐಪಿಎಲ್​ನಲ್ಲಿ ಆಡಿದರೆ ಯಾವುದೇ ಸಮಸ್ಯೆಯಿಲ್ಲ: ಇಂಗ್ಲೆಂಡ್ ಕೋಚ್ ಸಿಲ್ವರ್​ವುಡ್

IPL Auction 2021: ಬ್ರಿಟಿಷ್ ಆಟಗಾರರು ಐಪಿಎಲ್​ನಲ್ಲಿ ಆಡಿದರೆ ಯಾವುದೇ ಸಮಸ್ಯೆಯಿಲ್ಲ: ಇಂಗ್ಲೆಂಡ್ ಕೋಚ್ ಸಿಲ್ವರ್​ವುಡ್
ವಿವೊ ಐಪಿಎಲ್ ಹರಾಜು

ಆದರೆ ಐಪಿಎಲ್ ಟೂರ್ನಮೆಂಟ್​ ನಡೆಯುವಾಗ ಆರ್ಚರ್, ಸ್ಟೋಕ್ಸ್ ಅಥವಾ ಬಟ್ಲರ್​ರಂಥ ಆಟಗಾರರಿಗೆ ವಿಶ್ರಾಂತಿ ಒದಗಿಸುವ ಅವಕಾಶವೇ ಸೃಷ್ಟಿಯಾಗುವುದಿಲ್ಲ.

Arun Belly

|

Feb 18, 2021 | 6:57 PM

ಚೆನೈ: ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಆಡುವ ಇಂಗ್ಲೆಂಡ್ ಪ್ರಮುಖ ಆಟಗಾರರರಾದ ಜೊಸ್ ಬಟ್ಲರ್, ಜೊಫ್ರಾ ಆರ್ಚರ್, ಬೆನ್ ಸ್ಟೋಕ್ಸ್, ಜಾನಿ ಬೇರ್​ಸ್ಟೋ, ಸ್ಯಾಮ್ ಕರನ್ ಮತ್ತು ಕ್ರಿಸ್ ವೋಕ್ಸ್ ಮೊದಲಾದವರನ್ನು ಅವರು ಪ್ರತಿನಿಧಿಸುವ ಟೀಮಿಗಳು ಉಳಿಸಿಕೊಂಡಿವೆ (ರಿಟೇನ್). ಹಾಗೆಯೇ, ಇನ್ನೂ ಕೆಲ ಇಂಗ್ಲಿಷ್ ಆಟಗಾರರು ಇಂದು ಚೆನೈಯಲ್ಲಿ ನಡೆಯುತ್ತಿರುವ 2021 ಐಪಿಎಲ್ ಸೀಸನ್ ಹರಾಜಿನಲ್ಲಿ ಬಿಕರಿಯಾಗಲಿದ್ದಾರೆ. ಅಟಗಾರರು ದಣಿಯದಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ರೊಟೇಷನ್ ಪಾಲಿಸಿಯನ್ನೇನೋ ಜಾರಿಯಲ್ಲಿಟ್ಟಿದೆ, ಆದರೆ ಅಟಗಾರರು ಐಪಿಎಲ್ ಕಡೆ ಹೆಚ್ಚು ಒಲವು ತೋರುತ್ತಿರುವುದು ಇಸಿಬಿಗೆ ಆತಂಕ ಮೂಡಿಸಿದೆ, ಆದರೆ. ಇಂಗ್ಲೆಂಡ್ ತಂಡದ ಹೆಡ್ ಕೋಚ್ ಕ್ರಿಸ್ ಸಿಲ್ವರ್​ವುಡ್, ‘ಆಟಗಾರರು ಐಪಿಎಲ್​ನಲ್ಲಿ ಆಡಲಿಚ್ಛಿಸಿದರೆ ಅವರನ್ನು ತಡೆಯುವುದಾದರೂ ಹೇಗೆ’ ಎನ್ನುತ್ತಿದ್ದಾರೆ.

‘ಅವರು (ಇಂಗ್ಲಿಷ್ ಆಟಗಾರರು) ಐಪಿಎಲ್​ನಲ್ಲಿ ಆಡದಂತೆ ತಡೆಯುವುದು ಬಹಳ ಕಷ್ಟ. ಅಲ್ಲಿರುವ ಅಟಗಾರರ ಸಂಖ್ಯೆಯನ್ನು ಒಮ್ಮೆ ನೋಡಿದ್ದೇಯಾದರೆ ಅವರಿಗೆ ಭಾಗವಹಿಸದಂತೆ ಹೇಳುವುದು ಸಾಧ್ಯವೇ ಇಲ್ಲ. ಐಪಿಎಲ್ ಟಿ-20 ಕ್ರಿಕೆಟ್​ನ ಅತಿದೊಡ್ಡ ಈವೆಂಟ್ ಆಗಿರುವುದರಿಂದ ಆಟಗಾರರನ್ನು ತಡೆಯುವುದು ಅಸ್ಸಾಧ್ಯ’ ಎಂದು ಸಿಲ್ವರ್​ವುಡ್​ ಗುರುವಾರದಂದು ಚೆನೈಯಲ್ಲಿ ನಡೆದ ಸುದ್ದಿಗೋಷ್ಟಿಯೊಂದರಲ್ಲಿ ಹೇಳಿದರು. ಐಪಿಎಲ್ ಟೆಸ್ಟ್​ ಕ್ರಿಕೆಟ್​​ಗಿಂತ ಹೆಚ್ಚು ಪ್ರಾಧ್ಯಾನತೆ ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ಅವರು ಅಂಗೀಕರಿಸಿದರು.

ಎಲ್ಲ ಫಾರ್ಮಾಟ್​ಗಳಲ್ಲಿ ಆಡುವ ಇಂಗ್ಲೆಂಡ್ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳಲು ಟೆಸ್ಟ್ ಕ್ರಿಕೆಟ್​ನಲ್ಲಿ ರೊಟೇಷನ್ ಪಾಲಿಸಿಗೊಳಗಾಗಿದ್ದಾರೆ. ಆದರೆ ಐಪಿಎಲ್ ಟೂರ್ನಮೆಂಟ್​ ನಡೆಯುವಾಗ ಆರ್ಚರ್, ಸ್ಟೋಕ್ಸ್ ಅಥವಾ ಬಟ್ಲರ್​ರಂಥ ಆಟಗಾರರಿಗೆ ವಿಶ್ರಾಂತಿ ಒದಗಿಸುವ ಅವಕಾಶವೇ ಸೃಷ್ಟಿಯಾಗುವುದಿಲ್ಲ, ಯಾಕೆಂದರೆ ಅವರು ಸ್ಟಾರ್ ಪರ್ಫಾರ್ಮರ್​ಗಳು. ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್​ಬ್ಯಾಶ್ ಟೂರ್ನಿಯನ್ನು ಕಡೆಗಣಿಸಿ ಐಪಿಎಲ್​ನಲ್ಲಿ ಆಡಲು ಆಸಕ್ತಿ ತೋರುತ್ತಿರುವ ಹಲವಾರು ಆಟಗಾರರು ಈಗ ರೊಟೇಶನ್ ಪಾಲಿಸಿ ನೆಪದಲ್ಲಿ ಟೆಸ್ಟ್​ ಕ್ರಿಕೆಟ್​ ಅನ್ನೂ ಕಡೆಗಳಿಸುತ್ತಿರುವುದು ಅತಂಕಕಾರಿ ವಿಷಯವಲ್ಲವೇ ಎಂಬ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಸಿಲ್ವರ್​ವುಡ್ ಅದೇನೂ ದೊಡ್ಡ ಸಮಸ್ಯೆಯಲ್ಲ ಎಂದರು.

Chris Silverwood

ಕ್ರಿಸ್ ಸಿಲ್ವರ್​ವುಡ್

‘ಅದೊಂದು ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ, ಕೆಲವು ಆಟಗಾರರು ಟಿ20 ಕ್ರಿಕೆಟ್​ನಲ್ಲೂ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿದ್ದಾರೆ ಮತ್ತು ಅದು ನಮಗೆ ಪ್ರಯೋಜನಕಾರಿಯಾಗಿ ಪರಿಣಮಿಸಿದೆ, ಆಟಗಾರರಿಗೂ ಅದು ಲಾಭಕಾರಿಯಾಗಿದೆ. ಬಿಬಿಎಲ್, ಸಿಪಿಎಲ್ ಅಥವಾ ಐಪಿಎಲ್ ಟೂರ್ನಿಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆನ್ನುವುದು ಆಟಗಾರರಿಗೆ ವಿವೇಚನೆಗೆ ಬಿಟ್ಟಿರುವ ವಿಷಯವಾಗಿದೆ. ಅವರು ಈ ಟೂರ್ನಿಗಳಲ್ಲಿ ಆಡುವುದು ನಮಗೆ ಪ್ರಯೋಜನಕಾರಿಯೇ’ ಎಂದು ಸಿಲ್ವರ್​ವುಡ್​ ಹೇಳಿದರು.

ಆಡುವ ದಿನಗಳಲ್ಲಿ ಒಬ್ಬ ವೇಗದ ಬೌಲರ್ ಆಗಿದ್ದ ಸಿಲ್ವರ್​ವುಡ್, ಟಿ20 ಕ್ರಿಕೆಟ್​ನೊಂದಿಗೆ ತಾನು ಸಂಧಾನ ಮಾಡಿಕೊಂಡಿರುವುದಾಗಿ ಹೇಳಿದರು.

‘ಟಿ20 ಕ್ರಿಕೆಟ್​ನೊಂದಿಗೆ ನಾನು ರಾಜಿ ಮಾಡಿಕೊಂಡಿರುವುದು ನಿಜ, ಆದರೆ ಕನಿಷ್ಠ ನನ್ನ ಮಟ್ಟಿಗಾದರೂ ಟೆಸ್ಟ್ ಕ್ರಿಕೆಟ್ ಮೊದಲ ಆದ್ಯತೆಯಾಗಿ ಉಳಿಯಲಿದೆ’ ಎಂದು ಅವರು ಹೇಳಿದರು.

Chris Silverwood

₹ 7 ಕೋಟಿಗೆ ಬಿಕರಿಯಾದ ಮೋಯಿನ್ ಅಲಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿನಿಂದ ಬಿಡುಗಡೆಯಾಗಿರುವ ಮೋಯಿನ್ ಅಲಿ, ಡೇವಿಡ್ ಮಲನ್ ಸೇರಿದಂತೆ ಇನ್ನು 15 ಇಂಗ್ಲಿಷ್ ಆಟಗಾರರು ಗುರುವಾರದ ಹರಾಜಿನಲ್ಲಿ ಬಿಕರಿಯಾಗಲಿದ್ದಾರೆ. ಅವರಲ್ಲಿ ಹಲವಾರು ಆಟಗಾರರು ಐಪಿಎಲ್​ನೊಂದಿಗಿನ ಕಮಿಟ್​ಮೆಂಟ್​ನಿಂದಾಗಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

‘ಐಪಿಎಲ್ ಆಟಗಾರರಿಗೆ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಕೆಲವು ಬ್ರಿಟಿಷ್ ಆಟಗಾರರು ಈ ಬಾರಿಯ ಸೀಸನ್​ನಲ್ಲಿ ಪದಾರ್ಪಣೆ ಮಾಡುವ ಸಂಗತಿ ನನ್ನಲ್ಲಿ ರೋಮಾಂಚ ಹುಟ್ಟಿಸುತ್ತಿದೆ. ಅವರು ಉತ್ತಮ ಪ್ರದರ್ಶನಗಳನ್ನು ನೀಡಿದರೆ, ನಿಜಕ್ಕೂ ಖುಷಿಪಡುವ ವಿಷಯವೇ,’ ಎಂದು ಸಿಲ್ವರ್​ವುಡ್​ ಹೇಳುತ್ತಾರೆ.

ಮೋಯಿನ್ ಮತ್ತು ವುಡ್ ಬಿಕರಿಯಾಗದಿರಲಿ ಅಂತ ಆಶಿಸುತ್ತೀರಾ ಅಂತ ಕೇಳಿದ ಪ್ರಶ್ನೆಗೆ ಸಿಲ್ವರ್​ವುಡ್, ‘ಹಾಗೇನೂ ಇಲ್ಲ. ಅವರು ಖರೀದಿಸಲ್ಪಡಲಿ ಮತ್ತು ಚೆನ್ನಾಗಿ ಅಡಲಿ ಅಂತ ನಾನು ಆಶಿಸುತ್ತೇನೆ. ಅವರ ನಿರ್ಧಾರಗಳನ್ನು ನಾನು ಬೆಂಬಲಿಸುತ್ತೇನೆ. ಅವರು ಆಯ್ಕೆಯಾದರೆ ಸಂತೋಷವಾಗುತ್ತದೆ. ಅವರಿಗೆ ಭಾರತದಲ್ಲಿನ ಹವಾಮಾನ ಮತ್ತು ಪಿಚ್​ ಕಂಡೀಷನ್​ಗಳ ಬಗ್ಗೆ ಹೆಚ್ಚು ಜ್ಞಾನವಿರುವುದರಿಂದ ಅವರಿಂದ ಉತ್ತಮ ಆಟ ಬರಲಿ ಮತ್ತು ವೈಯಕ್ತಿಕವಾಗಿಯೂ ಅವರ ಆಟ ಸುಧಾರಿಸಲಿ ಅಂತ ಬಯಸುತ್ತೇನೆ’ ಎಂದು ಹೇಳಿದರು.

ಟಿ-20 ಕ್ರಿಕೆಟ್​ಗೋಸ್ಕರ, ಆಟಗಾರರು ಅದರಲ್ಲೂ ವಿಶೆಷವಾಗಿ ಐಪಿಎಲ್​ನಲ್ಲಿ ಭಾರಿ ಮೊತ್ತಗಳಿಗೆ ಬಿಕರಿಯಾಗುವವರು ಟೆಸ್ಟ್​ ಕ್ರಿಕೆಟ್ ಉಪೇಕ್ಷಿಸುತ್ತಿರುವುದನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಆದರೆ ಸಿಲ್ವರ್​ವುಡ್, ಬಯೋ-ಬಬಲ್​ಗಳ ಮೇಲೆ ದೋಷ ಹೊರಿಸಿ, ಆ ನಿಯಮದಿಂದಾಗಿ ಆಟಗಾರರು ತಮ್ಮ ಕುಟುಂಬಗಳಿಗೆ ಜಾಸ್ತಿ ಸಮಯ ನೀಡಲಾಗುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: IPL 2021 Auction LIVE: ಜಮೀಸನ್​ 15 ಕೋಟಿಗೆ ಆರ್​ಸಿಬಿ ಪಾಲು, 9. 25 ಕೋಟಿಗೆ ಚೆನ್ನೈ ಸೇರಿದ ಕನ್ನಡಿಗ ಕೆ. ಗೌತಮ್​

Follow us on

Most Read Stories

Click on your DTH Provider to Add TV9 Kannada