IPL Auction 2021; RCB 2 ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!

Royal Challengers Bangalore: ಕಳೆದ ಬಾರಿ ಪಂಜಾಬ್​ ತಂಡದಲ್ಲಿ ನೀರಸ ಪ್ರದರ್ಶನ ತೋರಿದ್ದ ಮ್ಯಾಕ್ಸ್​ವೆಲ್​ ನಂತರ ಆಸ್ಟ್ರೇಲಿಯಾದಲ್ಲಿ ಆಡುವಾಗ ಅಬ್ಬರಿಸಿದ್ದರು. ಈ ಪ್ರದರ್ಶನವೇ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ.

IPL Auction 2021; RCB 2 ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!
ಗ್ಲೆನ್​ ಮ್ಯಾಕ್ಸ್​ವೆಲ್​ - ಕೈಲ್‌ ಜೇಮಿಸ್ಸನ್
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Feb 18, 2021 | 7:48 PM

ಇಂದಿನ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಎಲ್ಲಾ ತಂಡಗಳು ತಮ್ಮ ತಂಡಕ್ಕೆ ಸೂಕ್ತ ಎನಿಸಿಕೊಳ್ಳುವಂಥ ಆಟಗಾರರನ್ನು ತೆಗೆದುಕೊಳ್ಳುತ್ತಿದೆ. ಕೆಲ ಆಟಗಾರರು ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ. ಇನ್ನೂ ಕೆಲ ಆಟಗಾರರು ಹರಾಜಾಗದೆ ಹೊರಗೆ ಉಳಿದಿದ್ದಾರೆ. ಇನ್ನು, ಆರ್​ಸಿಬಿ ಸದ್ಯ, 2 ಆಟಗಾರರನ್ನು ಮಾತ್ರ ಖರೀದಿ ಮಾಡಿದೆ. ಆದರೆ, ಈ ಇಬ್ಬರು ಆಟಗಾರರಿಗೆ ಬೆಂಗಳೂರು ತಂಡ ಖರ್ಚು ಮಾಡಿದ್ದು ಸರಿಸುಮಾರು 30 ಕೋಟಿ ರೂಪಾಯಿ.

ಆರ್​ಸಿಬಿ ಜೇಬಿನಲ್ಲಿ ಈ ಬಾರಿ 35.90 ಕೋಟಿ ರೂಪಾಯಿ ಇದೆ. ಆದರೆ, ಎರಡೇ ಆಟಗಾರರಿಗೆ ದೊಡ್ಡ ಮೊತ್ತದ ಹಣವನ್ನು ಆರ್​ಸಿಬಿ ಖರ್ಚು ಮಾಡಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ಗೆ ಈ ಬಾರಿಯ ಐಪಿಎಲ್​ 2021 ಹರಾಜು ಪ್ರಕ್ರಿಯೆಯಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ ಮೂಲ ಬೆಲೆ 2 ಕೋಟಿ ರೂಪಾಯಿ ಇತ್ತು. ಇವರನ್ನು ಖರೀದಿ ಮಾಡಲು ಚೆನ್ನೈ ಹಾಗೂ ಬೆಂಗಳೂರು ನಡುವೆ ಭಾರೀ ಕಾಂಪಿಟೇಷನ್​ ಇತ್ತು. ಕೊನೆಗೆ, 14.25 ಕೋಟಿ ರೂಪಾಯಿಗೆ ರಾಯಲ್​ ಚಾಲೆಂಜರ್ಸ್​ ತಂಡದ ಪಾಲಾಗಿದ್ದಾರೆ.

ಕಳೆದ ಬಾರಿ ಪಂಜಾಬ್​ ತಂಡದಲ್ಲಿ ನೀರಸ ಪ್ರದರ್ಶನ ತೋರಿದ್ದ ಮ್ಯಾಕ್ಸ್​ವೆಲ್​ ನಂತರ ಆಸ್ಟ್ರೇಲಿಯಾದಲ್ಲಿ ಆಡುವಾಗ ಅಬ್ಬರಿಸಿದ್ದರು. ಈ ಪ್ರದರ್ಶನವೇ ಇಂದಿನ ಬೇಡಿಕೆಗೆ ಕಾರಣ ಎನ್ನಲಾಗುತ್ತಿದೆ. ಸ್ವತಃ ಮ್ಯಾಕ್ಸ್​ವೆಲ್​​ ಆರ್​ಸಿಬಿ ತಂಡದ ಪರ ಆಡುವ ಆಸೆ ವ್ಯಕ್ತಪಡಿಸಿದ್ದರಿಂದ ಅವರನ್ನು ಬೆಂಗಳೂರು ತಂಡ ಖರೀದಿಸಬಹುದು ಎಂಬ ಮಾತುಗಳು ಹರಿದಾಡುತ್ತಿದ್ದವು. ಕಳೆದ ಬಾರಿ 10.75 ಕೋಟಿಗೆ ಪಂಜಾಬ್​ ತಂಡದ ಪಾಲಾಗಿದ್ದರು.

ಇನ್ನು, ನ್ಯೂಜಿಲೆಂಡ್​ನ ಕೈಲ್‌ ಜೇಮಿಸ್ಸನ್ ಅವರನ್ನು 15 ಕೋಟಿ ರೂಪಾಯಿಗೆ ಆರ್​ಸಿಬಿ ಖರೀದಿಸಿದೆ. ಪಂಜಾಬ್ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ತಂಡದ ನಡುವೆ ಬಿಡ್ಡಿಂಗ್‌ ವಾರ್‌ ನಡೆಸಿದ ಆರ್‌ಸಿಬಿ ಭಾರಿ ಪೈಪೋಟಿ ಕೊಟ್ಟು ‌ಕೈಲ್‌ ಜೇಮಿಸ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: IPL 2021 Auction RCB Players List: ಐಪಿಎಲ್ 2021 ಆರ್​ಸಿಬಿ ತನ್ನಲ್ಲೇ ಉಳಿಸಿಕೊಂಡ, ಕೈಬಿಟ್ಟ ಆಟಗಾರರು ಯಾರ್ಯಾರು ಗೊತ್ತಾ?

Published On - 7:24 pm, Thu, 18 February 21

ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ