AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL Auction 2021: ಐಪಿಎಲ್ ಟೈಟಲ್ ಪ್ರಾಯೋಜಕತ್ವ ಮತ್ತೆ ದಕ್ಕಿಸಿಕೊಂಡ ವಿವೊ

ಕಳೆದ ವರ್ಷ ಜೂನ್​ ತಿಂಗಳಲ್ಲಿ ಬಾರತ-ಚೀನಾ ನಡುವಿನ ಸಂಘರ್ಷವು ತಾರಕಕ್ಕೇರಿದ ಹಿನ್ನೆಲೆ ಮತ್ತು ಭಾರತವು ಚೀನಾದ ಅನೇಕ ಉತ್ಪಾದನೆಗಳ ಮೇಲೆ ನಿಷೇಧ ಹೇರಿದ್ದರಿಂದ ವಿವೊ ಸಂಸ್ಥೆಯನ್ನು ಐಪಿಎಲ್ ಪ್ರಾಯೋಜಕತ್ವದಿಂದ ಕೈಬಿಡಲಾಗಿತ್ತು.

IPL Auction 2021: ಐಪಿಎಲ್ ಟೈಟಲ್ ಪ್ರಾಯೋಜಕತ್ವ ಮತ್ತೆ ದಕ್ಕಿಸಿಕೊಂಡ ವಿವೊ
ಪ್ರಾತಿನಿಧಿಕ ಚಿತ್ರ
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 18, 2021 | 9:07 PM

Share

ಚೆನೈ: ಕಳೆದ ಬಾರಿ ಇಂಡಿಯನ್ ಪ್ರಿಮಿಯರ್ ಲೀಗ್​ (Indian Premier League – IPL) ಟೈಟಲ್ ಪ್ರಾಯೋಜಕತ್ವದ ಹಕ್ಕು ಪಡೆದಿದ್ದ ಅನ್​ಲೈನ್ ಗೇಮಿಂಗ್ ಪ್ಲಾಟ್​ಫಾರ್ಮ್ ಡ್ರೀಮ್ 11 ಅನ್ನು ಸ್ಥಾನಪಲ್ಲಟಗೊಳಿಸಿ ವಿವೊ ಮೊಬೈಲ್ ಮತ್ತು ಟೆಕ್ನಾಲಜಿ ಕಂಪನಿಯು ಮತ್ತೊಮ್ಮೆ ಆ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಚೆನೈಯಲ್ಲಿ ಐಪಿಎಲ್ 2021 ಸೀಸನ್​ನ ಮಿನಿ-ಹರಾಜನ್ನು ಉದ್ಘಾಟಿಸಿ ಮಾತಾಡಿದ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ವಿವೊ ಸಂಸ್ಥೆಯು ಟೈಟಲ್ ಸ್ಪಾನ್ಸರ್​ ಅಗಿ ವಾಪಸ್ಸಾಗಿರುವುದನ್ನು ಪ್ರಕಟಿಸಿದರು.

ಕ್ರಿಕೆಟ್ ಪ್ರೇಮಿಗಳಿಗೆ ನೆನಪಿರಬಹುದು, ಕಳೆದ ವರ್ಷದ ಐಪಿಎಲ್ ಟೂರ್ನಿಯು ಡ್ರೀಮ್ 11 ಐಪಿಎಲ್ ಆಗಿತ್ತು. ಹೋದ ವರ್ಷ ಜೂನ್​ನಲ್ಲಿ ಬಾರತ-ಚೀನಾ ನಡುವಿನ ಗಡಿ ಸಂಘರ್ಷ ತಾರಕಕ್ಕೇರಿದ ಹಿನ್ನೆಲೆ ಮತ್ತು ಭಾರತವು ಚೀನಾದ ಅನೇಕ ಉತ್ಪಾದನೆಗಳ ಮೇಲೆ ನಿಷೇಧ ಹೇರಿದ್ದರಿಂದ ವಿವೊ ಸಂಸ್ಥೆಯನ್ನು ಐಪಿಎಲ್ ಪ್ರಾಯೋಜಕತ್ವದಿಂದ ಕೈಬಿಡಲಾಗಿತ್ತು.

2015ರಲ್ಲಿ ಮೊದಲ ಬಾರಿಗೆ ವಿವೊ ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು 2 ಸೀಸನ್​ಗಳಿಗೆ ಅಂದರೆ 2017ರ ಸೀಸನ್​ವರೆಗೆ ಪಡೆದುಕೊಂಡಿತ್ತು. ನಂತರ 2017ರಲ್ಲಿ ಅದು ಸುಮಾರು 2475 ಕೋಟಿ ರೂಪಾಯಿ ತೆತ್ತು 2022ರ ಅವಧಿವರೆಗೆ ಆ ಹಕ್ಕನ್ನು ವಿಸ್ತರಿಸಿಕೊಂಡಿತ್ತು. ಆದರೆ ವಿವೊ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಆಗಸ್ಟ್​ 2020ರಲ್ಲಿ ಕೇವಲ ಒಂದು ಸಾಲಿನ ಹೇಳಿಕೆಯನ್ನು ಬಿಡುಗಡೆಗೊಳಿಸಿ ಅಮಾನತು ಮಾಡಿತ್ತು.

IPL VIVO

ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್

ಬಿಸಿಸಿಐ ಅಂದು ಬಿಡುಗಡೆ ಮಾಡಿದ ಹೇಳಿಕೆ ಹೀಗಿತ್ತು: ‘ಬಿಸಿಸಿಐ ಮತ್ತು ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಇಂಡಿಯನ್​ ಪ್ರಿಮೀಯರ್​ ಲೀಗ್​ಗೆ ಸಂಬಂಧಿಸಿದ ಪಾಲುದಾರಿಕೆಯನ್ನು ಅಮಾನತುಗೊಳಿಸಿವೆ’.

ಅದಾದ ನಂತರ ಟೈಟಲ್ ಪ್ರಾಯೋಜತ್ವಕ್ಕೆ ಹೊಸ ಪಾಲುದಾರನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಯಿತು. ಹಲವಾರು ಉಮೇದುವಾರರನ್ನು ಹಿಂದಿಕ್ಕಿದ ಡ್ರೀಮ್ 11 ಆ ಹಕ್ಕನ್ನು ₹ 222 ಕೋಟಿಗೆ ತನ್ನದಾಗಿಸಿಕೊಂಡಿತು. ಭಾರತೀಯ ಆಟಗಾರರ ಕಿಟ್​ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಧರಿಸುವ ಉಡುಪನ್ನು ಸ್ಪಾನ್ಸರ್ ಮಾಡುವ ಬೈಜೂಸ್ ಸಂಸ್ಥೆ ಸಹ ರೇಸ್​ನಲ್ಲಿತ್ತು.

ಐಪಿಎಲ್ ಟೈಟಲ್ ಪ್ರಾಯೋಜಕತ್ವವು ಟೂರ್ನಮೆಂಟ್ ಆದಾಯ ಹಂಚಿಕೆ ಒಪ್ಪಂದದ ಪ್ರಮುಖ ಭಾಗವಾಗಿದೆ. ಪ್ರಾಯೋಜಕತ್ವದ ಶೇ 50 ರಷ್ಟು ಭಾಗವು 8 ಫ್ರಾಂಚೈಸಿಗಳಿಗೆ ಹೋಗುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರತಿ ಸೀಸನ್​ನಲ್ಲಿ ಎಲ್ಲ ಫ್ರಾಂಚೈಸಿಗಳು ಈ ಮೂಲದ ಮೂಲಕ ತಲಾ ₹ 20 ಕೋಟಿಯನ್ನು ಪಡೆಯುತ್ತವೆ. ಡ್ರೀಮ್ 11 ಸಂಸ್ಥೆಯು 2018ರಿಂದ ಐಪಿಎಲ್​ನ ಅಧಿಕೃತ ಪಾಲುದಾರನಾಗಿದ್ದು ಐಪಿಎಲ್​ ವೆಬ್​ಸೈಟ್​ನಲ್ಲಿ ಈಗಲೂ ಲಿಸ್ಟ್ ಆಗಿದೆ.

ಇದನ್ನೂ ಓದಿ: RCB ಈ ಇಬ್ಬರು ಆಟಗಾರರಿಗೆ ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿ!

Published On - 8:58 pm, Thu, 18 February 21

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ