ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14ನೇ ಆವೃತ್ತಿಗಾಗಿ ಆಟಗಾರರ ಹರಾಜು (ಐಪಿಎಲ್ 2021 ಹರಾಜು) ಇಂದು ನಡೆಯುತ್ತಿದೆ. ಚೆನ್ನೈನಲ್ಲಿ ಎಲ್ಲಾ 8 ಫ್ರಾಂಚೈಸಿಗಳು 291 ಕ್ರಿಕೆಟಿಗರ ಭವಿಷ್ಯವನ್ನು ಇಂದು ನಿರ್ಧರಿಸಲಿದ್ದಾರೆ. 14. 25 ಕೋಟಿಗೆ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪಾಲಾಗಿದ್ದಾರೆ. ಆರಂಭದಿಂದಲೂ ಚೆನ್ನೈ ಮತ್ತು ಬೆಂಗಳೂರು ನಡುವೆ ಭಾರಿ ಪೈಫೋಟಿ ಉಂಟಾಗಿತ್ತು. ಅಂತಿಮವಾಗಿ ಮ್ಯಾಕ್ಸ್‌ವೆಲ್, ಆರ್‌ಸಿಬಿ ಸೇರಿದರು. ಹಾಗೆಯೇ 16.25 ಕೋಟಿಗೆ ದಕ್ಷಿಣ ಆಫ್ರಿಕಾದ ಆಟಗಾರ ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಮೋರಿಸ್ಗಾಗಿ ಪಂಜಾಬ್ ಮತ್ತು ರಾಜಸ್ಥಾನ್ ನಡುವೆ ಬಾರಿ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ಮೋರಿಸ್ ರಾಜಸ್ಥಾನ್ ಸೇರಿದರು
ಹನುಮಾ ವಿಹಾರಿ ಮತ್ತೊಮ್ಮೆ ಯಾವುದೇ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ. ಮೂಲ ಬೆಲೆ 1 ಕೋಟಿ.
ವೆಂಕಟೇಶ್ ಅಯ್ಯರ್ ಅವರನ್ನು ಕೆಕೆಆರ್ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಪವನ್ ನೇಗಿಯನ್ನು ಕೆಕೆಆರ್ 50 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಆಕಾಶ್ ಸಿಂಗ್ ಅವರನ್ನು ರಾಜಸ್ಥಾನವು 20 ಲಕ್ಷ ಮೂಲ ಬೆಲೆಗೆ ಖರೀದಿಸಿತು.
ಮೂಲ ಬೆಲೆ 20 ಲಕ್ಷಕ್ಕೆ ಅರ್ಜುನ್ ತೆಂಡೂಲ್ಕರ್ ಮುಂಬೈಗೆ ಸೇರಿಕೊಂಡಿದ್ದಾರೆ. ವಾಡಿಕೆಯಂತೆ ಸಚಿನ್ ತೆಂಡೂಲ್ಕರ್ ಪುತ್ರನನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವಲ್ಲಿ ಮುಂಬೈ ಯಶಸ್ವಿಯಾಗಿದೆ.
ಪವನ್ ನೇಗಿ ಮತ್ತು ಗುರ್ಕಿರತ್ ಸಿಂಗ್ ಮನ್ ಎರಡನೇ ಬಾರಿಗೆ ಯಾವುದೇ ಖರೀದಿದಾರರ ಗಮನ ಸೆಳೆಯಲಿಲ್ಲ.ಹೀಗಾಗಿ 2ನೇ ಬಾರಿಯು ಮಾರಾಟವಾಗದೆ ಉಳಿದರು
ಬೆನ್ ಕಟಿಂಗ್ ಅವರನ್ನು ಕೆಕೆಆರ್ 75 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಸಿ ಹರಿ ನಿಶಾಂತ್ ಅವರನ್ನು ಸಿಎಸ್ಕೆ 20 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.
ಕರುಣ್ ನಾಯರ್ ಅವರನ್ನು ಕೆಕೆಆರ್ ಮೂಲ ಬೆಲೆ 50 ಲಕ್ಷಕ್ಕೆ ಖರೀದಿಸಿದೆ.
ಕೇದಾರ್ ಜಾಧವ್ ಅವರನ್ನು ಎಸ್‌ಆರ್‌ಹೆಚ್ 2 ಕೋಟಿ ಮೂಲ ಬೆಲೆಯಲ್ಲಿ ಖರೀದಿಸಿದೆ.
ದೆಹಲಿ ಕ್ಯಾಪಿಟಲ್ಸ್ ಸ್ಯಾಮ್ ಬಿಲ್ಲಿಂಗ್ಸ್ ಅನ್ನು 2 ಕೋಟಿ ಮೂಲ ಬೆಲೆಗೆ ಖರೀದಿಸಿತು
ಮುಜೀಬ್ ಉರ್ ರೆಹಮಾನ್ ಅವರನ್ನು ಸನ್‌ರೈಸರ್ಸ್ 1.5 ಕೋಟಿ ರೂ.ಗೆ ಖರೀದಿಸಿದೆ.
ಕೆಕೆಆರ್ ಹರ್ಭಜನ್ ಅನ್ನು 2 ಕೋಟಿಗೆ ಖರೀದಿಸಿದೆ.
20 ವರ್ಷದ ದಕ್ಷಿಣ ಆಫ್ರಿಕಾದ ಆಟಗಾರ ಮಾರ್ಕೊ ಜಾನ್ಸನ್ ಅವರನ್ನು ಮುಂಬೈ 20 ಲಕ್ಷ ರೂ. ನೀಡಿ ಖರೀದಿಸಿದೆ.
ಪಂಜಾಬ್ ಯುಪಿಯ ಸೌರಭ್ ಕುಮಾರ್ ಅವರನ್ನು 20 ಲಕ್ಷಕ್ಕೆ ಖರೀದಿಸಿತು. ಸೌರಭ್ ಪ್ರಸ್ತುತ ಅಹ್ಮದಾಬಾದ್‌ನಲ್ಲಿ ಭಾರತೀಯ ತಂಡದೊಂದಿಗೆ ನೆಟ್ ಬೌಲರ್ ಆಗಿದ್ದಾರೆ.
ಕಳೆದ ಬಾರಿ 7 ಕೋಟಿಗೆ ಮಾರಾಟವಾಗಿದ್ದ ಕೇದಾರ್ ಜಾದವ್, ಈ ಬಾರಿ 2 ಕೋಟಿಗೆ ಹೈದ್ರಾಬಾದ್ ತಂಡವನ್ನು ಸೇರಿಕೊಂಡರು.
ಯುಧ್ವೀರ್ ಚರಕ್ ಅವರನ್ನು ಮುಂಬೈ 20 ಲಕ್ಷ ಮೂಲ ಬೆಲೆಗೆ ಖರೀದಿಸಿತು. ಸಿ.ಎಸ್.ಕೆ ಕೆ ಭಗತ್ ವರ್ಮಾ ಅವರನ್ನು 20 ಲಕ್ಷಕ್ಕೆ ಖರೀದಿಸಿದರು.
ಕಳೆದ ವರ್ಷ ಕೆಕೆಆರ್‌ನ ಭಾಗವಾಗಿದ್ದ ಕ್ರಿಸ್ ಗ್ರೀನ್ ಈ ಬಾರಿ ಖಾಲಿ ಕೈಯಲ್ಲಿಯೇ ವಾಪಾಸ್ಸಾಗಿದ್ದಾರೆ. ಮೂಲ ಬೆಲೆ 30 ಲಕ್ಷ.
ಈ ಬಾರಿ ಯಾರೂ ಇಸುರು ಉದಾನನನ್ನು ಖರೀದಿಸಿಲ್ಲ. ಉದನಾ ಕಳೆದ ವರ್ಷ ಆರ್‌ಸಿಬಿ ಜೊತೆಗಿದ್ದರು.
ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಯಾವುದೇ ಖರೀದಿದಾರರ ಗಮನ ಸೆಳೆಯಲಿಲ್ಲ. ಅವರ ಮೂಲ ಬೆಲೆ 1 ಕೋಟಿ.
ಶ್ರೀಲಂಕಾದ ಥಿಸರಾ ಪೆರೆರಾ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಮೂಲ ಬೆಲೆ 20 ಲಕ್ಷ ರೂ.
ದೇಶಿ ಆಟಗಾರ ಹರಿಶಂಕರ್ ರೆಡ್ಡಿ ಮೂಲ ಬೆಲೆ 20 ಲಕ್ಷಕ್ಕೆ ಸಿಎಸ್ಕೆ ಸೇರಿಕೊಂಡಿದ್ದಾರೆ
ದೇಶಿ ಆಟಗಾರ ಭರತ್ ಮೂಲ ಬೆಲೆ 20 ಲಕ್ಷಕ್ಕೆ ಆರ್‌ಸಿಬಿ ಸೇರಿಕೊಂಡಿದ್ದಾರೆ
4.80 ಕೋಟಿಗೆ ಡ್ಯಾನಿಯಲ್ ಕ್ರಿಶ್ಚಿಯನ್ ಆರ್‌ಸಿಬಿಗೆ ಸೇರಿಕೊಂಡಿದ್ದಾರೆ. ಡ್ಯಾನಿಯಲ್ ಕ್ರಿಶ್ಚಿಯನ್ಗಾಗಿ ಕೊಲ್ಕತ್ತಾ ಹಾಗೂ ಬೆಂಗಳೂರು ಸೆಣಸಾಟ ನಡೆಸಿದ್ದವು. ಆದರೆ ಅಂತಿಮವಾಗಿ ಡ್ಯಾನಿಯಲ್ ಕ್ರಿಶ್ಚಿಯನ್ ಆರ್‌ಸಿಬಿ ಪಾಲಾದರು.
75 ಲಕ್ಷಕ್ಕೆ ಫ್ಯಾಬಿಯನ್ ಅಲೆನ್ ವೆಸ್ಟ್ಇಂಡಿಸ್ ತಂಡದ ಆಲ್‌ರೌಂಡರ್ ಆಟಗಾರ ಪಂಜಾಬ್ ಪಾಲಾಗಿದ್ದಾರೆ
20 ಲಕ್ಷ ಮೂಲ ಬೆಲೆಗೆ ಅರೋರಾ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ
ದೇಶಿ ಆಟಗಾರ ಸಕ್ಸೆನಾ ಮೂಲ ಬೆಲೆ 30 ಲಕ್ಷ ರೂಪಾಯಿಗಳಿಗೆ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಬಿಗ್ ಬ್ಯಾಂಗ್ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬೆಂಗಳೂರು 14.25 ಕೋಟಿಗೆ ಖರೀದಿಸಿದೆ. ಹರಾಜಿನ ಮೊದಲು, ಮ್ಯಾಕ್ಸ್‌ವೆಲ್ ಆರ್‌ಸಿಬಿಯೊಂದಿಗೆ ಆಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದರು. ಅವರ ಆಸೆ ಈಗ ಈಡೇರಿದೆ. ಟ್ವೀಟ್ ಮಾಡುವ ಮೂಲಕ ಮ್ಯಾಕ್ಸ್‌ವೆಲ್ ಸಂತೋಷ ವ್ಯಕ್ತಪಡಿಸಿದ್ದಾರೆ. “ಈ ವರ್ಷ ಆರ್‌ಸಿಬಿಗೆ ಸೇರಲು ಎದುರು ನೋಡುತ್ತಿದ್ದೇನೆ, ಈ ವರ್ಷ ಟ್ರೋಫಿಯನ್ನು ಗೆಲ್ಲಲು ನನ್ನ ಸಂಪೂರ್ಣ ಸಾಮರ್ಥ್ಯವನ್ನು ಹಾಕಲು ನಾನು ಉತ್ಸುಕನಾಗಿದ್ದೇನೆ” ಎಂದು ಮ್ಯಾಕ್ಸ್‌ವೆಲ್ ಬರೆದುಕೊಂಡಿದ್ದಾರೆ.
ಯಾವುದೇ ತಂಡವು ವರುಣ್ ಆರನ್ ಅವರನ್ನು ಖರೀದಿಸಿಲ್ಲ. ಮೂಲ ಬೆಲೆ – 50 ಲಕ್ಷ
ಓಶೆನ್ ಥಾಮಸ್ ಸಹ ಸೆಲ್ ಆಗಲಿಲ್ಲ, ಮೂಲ ಬೆಲೆ- 50 ಲಕ್ಷ
ಮೋಹಿತ್ ಶರ್ಮಾ ಕೂಡ ಮಾರಾಟವಾಗಲಿಲ್ಲ, ಮೂಲ ಬೆಲೆ – 50 ಲಕ್ಷ
ಬಿಲ್ಲಿ ಸ್ಟಾನ್ಲೇಕ್ ಸಹ ಮಾರಾಟವಾಗಿಲ್ಲ, ಮೂಲ ಬೆಲೆ – 50 ಲಕ್ಷ
ಮಿಚೆಲ್ ಮೆಕ್ಲೆನೆಗನ್ ಸಹ ಮಾರಾಟವಾಗಿಲ್ಲ, ಮೂಲ ಬೆಲೆ – 50 ಲಕ್ಷ
ಜೇಸನ್ ಬೆಹ್ರೆಂಡೋರ್ಫ್ 1 ಕೋಟಿ ಮೂಲ ಬೆಲೆಗೆ ಮಾರಾಟ ಆಗಲಿಲ್ಲ.
ಅಫ್ಘಾನಿಸ್ತಾನದ ನವೀನ್ ಉಲ್ ಹಕ್ ಕೂಡ ಹರಾಜಾಗಲಿಲ್ಲ, ಮೂಲ ಬೆಲೆ – 50 ಲಕ್ಷ
4.20 ಕೋಟಿಗೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಹೆನ್ರಿಕೇಸ್ ಪಂಜಾಬ್ ಸೇರಿದ್ದಾರೆ.ಹೆನ್ರಿಕೇಸ್ ಕೊಳ್ಳಲು ಆರ್‌ಸಿಬಿ ಹಾಗೂ ಪಂಜಾಬ್ ನಡುವೆ ಪೈಫೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಪಂಜಾಬ್ ಹೆನ್ರಿಕೇಸ್ ಪಡೆಯುವಲ್ಲಿ ಯಶಸ್ವಿಯಾಯಿತು.
5.25 ಕೋಟಿಗೆ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಆಟಗಾರ ಟಾಮ್ ಕರನ್ ಡೆಲ್ಲಿ ತಂಡದ ಪಾಲಾಗಿದ್ದಾರೆ. ಕರನ್ ಕೊಳ್ಳಲು ಡೆಲ್ಲಿ ಹಾಗೂ ಹೈದ್ರಾಬಾದ್ ಜಿದ್ದಿಗೆ ಬಿದ್ದಿದ್ದವು.
ನ್ಯೂಜಿಲ್ಯಾಂಡ್ ತಂಡದ ವೇಗದ ಬೌಲರ್ ಜಮೀಸನ್ 15 ಕೋಟಿಗೆ ಆರ್‌ಸಿಬಿ ಪಾಲಾಗಿದ್ದಾರೆ. ಆರಂಭದಿಂದಲೂ ಪಂಜಾಬ್ ಹಾಗೂ ಬೆಂಗಳೂರು ನಡುವೆ ಜಮೀಸನ್ಗಾಗಿ ಪೈಫೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ ಜಮೀಸನ್ ಅವರನ್ನು ಆರ್‌ಸಿಬಿ 15 ಕೋಟಿ ನೀಡಿ ತನ್ನ ಬತ್ತಳಿಕೆಗೆ ಹಾಕಿಕೊಂಡಿತು.
ಟೀಂ ಇಂಡಿಯಾದ ಟೆಸ್ಟ್ ಬ್ಯಾಟ್ಸಮನ್ ಚೇತೇಶ್ವರ್ ಪೂಜಾರ ಮೂಲ ಬೆಲೆ 50 ಲಕ್ಷಕ್ಕೆ ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ.
ದೇಶಿ ಪ್ರತಿಭೆ ಕೆ ಸಿ ಕರಿಯಪ್ಪ ಮೂಲ ಬೆಲೆ 20 ಲಕ್ಷ ರೂಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಕೊಂಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿ ಆಡಿದ್ದ ಜಗದೀಶನ್ ಸುಚಿತ್, 30 ಲಕ್ಷ ರೂಗಳಿಗೆ ಹೈದ್ರಾಬಾದ್ ತಂಡಕ್ಕೆ ಮಾರಾಟವಾಗಿದ್ದಾರೆ.
ಆಸ್ಟ್ರೇಲಿಯಾದ ಆಟಗಾರ ರಿಲೇ ಮೆರೆಡಿತ್ ಬರೋಬ್ಬರಿ 8 ಕೋಟಿ ರೂಗಳಿಗೆ ಪಂಜಾಬ್ ತಂಡ ಸೇರಿದ್ದಾರೆ. ಮೆರೆಡಿತ್ ಪಡೆಯಲು ಡೆಲ್ಲಿ ಹಾಗೂ ಪಂಜಾಬ್ ನಡುವೆ ಪೈಫೋಟಿ ನಡೆದಿತ್ತು. ಆದರೆ ಮೆರೆಡಿತ್ ಪಡೆಯುವಲ್ಲಿ ಪಂಜಾಬ್ ಯಶಸ್ವಿಯಾಯಿತು.
After a three-team bidding war, K Gowtham joined @ChennaiIPL for INR 9.25 Cr. ⚡️⚡️@Vivo_India #IPLAuction pic.twitter.com/DO5IMJOOV3
— IndianPremierLeague (@IPL) February 18, 2021
When you get a certain "Shahrukh Khan" in your side ?? @PunjabKingsIPL @Vivo_India #IPLAuction pic.twitter.com/z4te9w2EIZ
— IndianPremierLeague (@IPL) February 18, 2021
ದೇಶಿ ಪ್ರತಿಭೆ ಚೇತನ್ ಸಕಾರಿಯ 1.20 ಕೋಟಿಗೆ ರಾಜಸ್ಥಾನ್ ತಂಡದ ಪಾಲಾಗಿದ್ದಾರೆ. ಸಚಿನ್ ಪಡೆಯಲು ಆರ್‌ಸಿಬಿ ಹಾಗೂ ರಾಜಸ್ಥಾನ್ ಜಿದ್ದಿಗೆ ಬಿದ್ದಿದ್ದವು. ಆದರೆ ಅಂತಿಮವಾಗಿ ಸಚಿನ್ ರಾಜಸ್ಥಾನ್ ತಂಡ ಸೇರಿಕೊಂಡರು.
Shahrukh Khan earns big and how! ?
He joins @PunjabKingsIPL for INR 5.25 Cr. @Vivo_India #IPLAuction pic.twitter.com/uHcOJ7LGdl
— IndianPremierLeague (@IPL) February 18, 2021
ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ್ದ ಮೊಹಮ್ಮದ್ ಅಜಾರುದ್ದೀನ್ 20 ಲಕ್ಷ ಮೂಲ ಬೆಲೆಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ.
ಕನ್ನಡಿಗ ಕೆ. ಗೌತಮ್ 9.25 ಕೋಟಿ ರೂಗಳಿಗೆ ಚೆನ್ನೈ ತಂಡದ ಪಾಲಾಗಿದ್ದಾರೆ.ಗೌತಮ್ ಕೊಳ್ಳಲು ಆರಂಭದಲ್ಲಿ ಕೊಲ್ಕತ್ತಾ ಹಾಗೂ ಹೈದ್ರಾಬಾದ್ ಪೈಫೋಟಿಗಿಳಿದಿದ್ದವು. ನಂತರ ಬಂದ ಚೆನ್ನೈ, ಉಳಿದ ತಂಡಗಳನ್ನೇಲ್ಲಾ ಮೀರಿಸಿ 9. 25 ಕೋಟಿಗೆ ಕೊಂಡುಕೊಂಡಿತು.
5.25 ಕೋಟಿ ರೂಗಳಿಗೆ ದೇಶಿ ಪ್ರತಿಭೆ ಶಾರೂಖ್ ಖಾನ್, ಪಂಜಾಬ್ ಪಾಲಾಗಿದ್ದಾರೆ. ಶಾರೂಖ್ ಖಾನ್ಗಾಗಿ ಆರ್‌ಸಿಬಿ ಹಾಗೂ ಪಂಜಾಬ್ ಜಿದ್ದಾಜಿದ್ದಿಗೆ ಬಿದ್ದಿದ್ದವು. ಆದರೆ ಅಂತಿಮವಾಗಿ ಪಂಜಾಬ್ ಶಾರೂಖ್ ಖಾನ್ ಅವರನ್ನು ಕೊಂಡುಕೊಂಡಿತು. ಶಾರೂಖ್ ಖಾನ್ ಮೂಲ ಬೆಲೆ 20 ಲಕ್ಷ ಆಗಿತ್ತು.
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ 2.4 ಕೋಟಿಗೆ ಮುಂಬೈ ಪಾಲಾಗಿದ್ದಾರೆ. ಈ ಹಿಂದೆ ಚೆನ್ನೈ ತಂಡದ ಪರವಾಗಿ ಆಡುತ್ತಿದ್ದ ಚಾವ್ಲಾ ಕಳೆದ ಬಾರಿಯ ಐಪಿಎಲ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
ಆರ್‌ಸಿಬಿ ತಂಡದ ಮಾಜಿ ಆಟಗಾರ ಸಚಿನ್ ಬೇಬಿ 20 ಲಕ್ಷ ಮೂಲ ಬೆಲೆಗೆ ಮತ್ತೊಮ್ಮೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಈ ಹಿಂದೆ ಆರ್‌ಸಿಬಿ ಸಚಿನ್ ಬೇಬಿಯನ್ನು ತಂಡದಿಂದ ಕೈಬಿಟ್ಟಿತ್ತು.
Did you folks see this coming? ??
Massive buy from @PunjabKingsIPL ?? @Vivo_India #IPLAuction pic.twitter.com/MUTQcevC53— IndianPremierLeague (@IPL) February 18, 2021
– ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಯಾವುದೇ ಖರೀದಿದಾರರು ಖರೀದಿಸಲು ಮನಸು ಮಾಡಲಿಲ್ಲ. ರಶೀದ್ ಅವರ ಮೂಲ ಬೆಲೆ 1.5 ಕೋಟಿ.
– ಭಾರತೀಯ ಸ್ಪಿನ್ನರ್ ರಾಹುಲ್ ಶರ್ಮಾ ಕೂಡ ಹರಾಜಾಗಲಿಲ್ಲ. ಮೂಲ ಬೆಲೆ 50 ಲಕ್ಷ ರೂಪಾಯಿ.
– ಅಫ್ಘಾನಿಸ್ತಾನ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಕೂಡ ಯಾವುದೇ ತಂಡಕ್ಕೆ ಆಯ್ಕೆಯಾಗಲಿಲ್ಲ.
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹರಾಜಾಗದೆ ಉಳಿದಿದ್ದಾರೆ. ಈ ಹಿಂದೆ ಹರ್ಭಜನ್ ಸಿಂಗ್ ಚೆನ್ನೈ ತಂಡದ ಪರವಾಗಿ ಆಡುತ್ತಿದ್ದರು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹರ್ಭಜನ್ ಸಿಂಗ್ ಮೇಲೆ ಬಾರಿ ನಿರೀಕ್ಷೆಗಳಿದ್ದವು.
ಟೀಂ ಇಂಡಿಯಾದ ವೇಗದ ಬೌಲರ್ ಉಮೇಶ್ ಯಾದವ್ 1 ಕೋಟಿ ರೂಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಈ ಹಿಂದೆ ಉಮೇಶ್ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದರು.
ಆಸ್ಟ್ರೇಲಿಯಾದ ವೇಗದ ಬೌಲರ್ ಕೋಲ್ಟರ್ನೈಲ್ 5 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ
ಆಸ್ಟ್ರೇಲಿಯಾದ ವೇಗದ ಬೌಲರ್ ಜ್ಯಾಯ್ ರಿರ್ಚಡ್ಸನ್ 14 ಕೋಟಿ ರೂಗಳಿಗೆ ಪಂಜಾಬ್ ತಂಡದ ಪಾಲಾದರು. ಆರಂಭದಲ್ಲಿ ಡೆಲ್ಲಿ ಹಾಗೂ ಬೆಂಗಳೂರು ನಡುವೆ ರಿರ್ಚಡ್ಸನ್ಗಾಗಿ ಪೈಫೋಟಿ ಆರಂಭವಾಗಿತ್ತು. ಹರಾಜು ಒಂದು ಹಂತಕ್ಕೆ ಬಂದ ನಂತರ್ ಡೆಲ್ಲಿ ಹರಾಜಿನಿಂದ ಹಿಂದೆ ಸರಿಯಿತು. ನಂತರ ಬೆಂಗಳೂರು ಎದುರು ಬಿಡ್ ಮಾಡಲು ಪಂಜಾಬ್ ಎದುರಾಗಿ, ಅಂತಿಮವಾಗಿ 14 ಕೋಟಿಗೆ ರಿರ್ಚಡ್ಸನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
ಬಾಂಗ್ಲದೇಶ ತಂಡದ ವೇಗದ ಬೌಲರ್ ಮುಸ್ತಫೀಜೂರ್ ರೆಹಮಾನ್ 1 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ.
3.2 ಕೋಟಿಗೆ ನ್ಯೂಜಿಲ್ಯಾಂಡ್ನ ವೇಗದ ಬೌಲರ್ ಅಡಂ ಮಿಲ್ನೆ ಮುಂಬೈ ಪಾಲಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕ್ರಿಸ್ ಮೋರಿಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ 16.25 ಕೋಟಿ ರೂ. ನೀಡಿ ಕೊಂಡುಕೊಂಡಿದೆ. 2015 ರಲ್ಲಿ ಆರ್‌ಸಿಬಿ ಖರೀದಿಸಿದ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮೋರಿಸ್ ಮುರಿದರು.
ಮೋರಿಸ್ ಅವರನ್ನು ಕಳೆದ ವರ್ಷ ಆರ್‌ಸಿಬಿ 10 ಕೋಟಿಗೆ ಖರೀದಿಸಿತ್ತು. ಆದರೆ ಮತ್ತೆ ಬಿಡುಗಡೆ ಮಾಡಲಾಯಿತು.
Base price – INR 75 Lac
Sold for – INR 16.25 Cr@rajasthanroyals win the bidding war to bring @Tipo_Morris on board. ??@Vivo_India #IPLAuction pic.twitter.com/m5AMqKE1Dy— IndianPremierLeague (@IPL) February 18, 2021
1. 50 ಕೋಟಿ ರೂಗಳಿಗೆ ಇಂಗ್ಲೆಂಡ್ ತಂಡದ ಆಟಗಾರ ಡೇವಿಡ್ ಮಲನ್ ಪಂಜಾಬ್ ಪಾಲಾಗಿದ್ದಾರೆ.
16.25 ಕೋಟಿಗೆ ದಕ್ಷಿಣ ಆಫ್ರಿಕಾದ ಆಟಗಾರ ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ ಪಾಲಾಗಿದ್ದಾರೆ. ಮೋರಿಸ್ಗಾಗಿ ಪಂಜಾಬ್ ಮತ್ತು ರಾಜಸ್ಥಾನ್ ನಡುವೆ ಬಾರಿ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ಮೋರಿಸ್ ರಾಜಸ್ಥಾನ್ ಸೇರಿದರು
Moeen Ali will now don the Yellow ? after @ChennaiIPL acquire his services for INR 7 Cr. @Vivo_India #IPLAuction pic.twitter.com/I4y4KaECdr
— IndianPremierLeague (@IPL) February 18, 2021
4.40 ಕೋಟಿಗೆ ಶಿವಂ ದುಬೆ, ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ. ಈ ಹಿಂದೆ ದುಬೆ ಆರ್‌ಸಿಬಿ ತಂಡದಲ್ಲಿದ್ದರು.
.@KKRiders bring @Sah75official on board for INR 3.2 Cr. @Vivo_India #IPLAuction pic.twitter.com/VvolLQsVv2
— IndianPremierLeague (@IPL) February 18, 2021
ಬರೋಬ್ಬರಿ 7 ಕೋಟಿ ರೂಗಳಿಗೆ ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಮೋಯಿನ್ ಅಲಿ ಸಿಎಸ್ಕೆ ಪಾಲಾಗಿದ್ದಾರೆ. ಅಲಿಗಾಗಿ ಪಂಜಾಬ್ ಮತ್ತು ಚೆನ್ನೈ ನಡುವೆ ತೀವ್ರ ಪೈಫೋಟಿ ಏರ್ಪಟ್ಟಿತ್ತು.
2 ಕೋಟಿ ಮೂಲ ಬೆಲೆಯೊಂದಿಗೆ ಹರಾಜಿಗಿಳಿದ ಕೇದಾರ್ ಜಾದವ್ ಅವರನ್ನು ಯಾವೊಂದು ಫ್ರಾಂಚೈಸಿಯು ಕೊಂಡುಕೊಳ್ಳಲು ಮುಂದಾಗಲಿಲ್ಲ. ಹೀಗಾಗಿ ಜಾದವ್ ಹರಾಜಾಗದೆ ಉಳಿದೊದ್ದಾರೆ
Base Price – INR 2 Crore
Sold for – INR 14.25 Crore@Gmaxi_32 heads to @RCBTweets after a fierce bidding war. ?? @Vivo_India #IPLAuction pic.twitter.com/XKpJrlG5Cc— IndianPremierLeague (@IPL) February 18, 2021
3.20 ಕೋಟಿಗೆ ಬಾಂಗ್ಲದೇಶದ ಆಲ್‌ರೌಂಡರ್ ಶಕೀಬ್ ಹಲ್ ಹಸನ್ ಕೆಕೆಆರ್ ತಂಡದ ಪಾಲಾಗಿದ್ದಾರೆ
.@stevesmith49 moves to @DelhiCapitals for INR 2.20 Cr. @Vivo_India #IPLAuction pic.twitter.com/gDoNb1frkV
— IndianPremierLeague (@IPL) February 18, 2021
14. 25 ಕೋಟಿಗೆ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪಾಲಾಗಿದ್ದಾರೆ. ಆರಂಭದಿಂದಲೂ ಚೆನ್ನೈ ಮತ್ತು ಬೆಂಗಳೂರು ನಡುವೆ ಭಾರಿ ಪೈಫೋಟಿ ಉಂಟಾಗಿತ್ತು. ಅಂತಿಮವಾಗಿ ಮ್ಯಾಕ್ಸ್‌ವೆಲ್, ಆರ್‌ಸಿಬಿ ಸೇರಿದರು.
2.20 ಕೋಟಿಗೆ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ
ಇಂಗ್ಲೆಂಡ್‌ನ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಅವರ ಮೂಲ ಬೆಲೆ 1.50 ಕೋಟಿ ರೂ, ಆದರೆ ಯಾರೂ ಖರೀದಿಸಿಲ್ಲ.
ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರೊಂದಿಗೆ ಹರಾಜು ಆರಂಭವಾಗಿದೆ. ಮೂಲ ಬೆಲೆ 50 ಲಕ್ಷ, ಆದರೆ ಯಾರೂ ಅವರನ್ನು ಖರೀದಿಸಿಲ್ಲ.
ವರದಿಗಳ ಪ್ರಕಾರ, ಸಿಎಸ್‌ಕೆ, ಡಿಸಿ, ಎಂಐ, ಪಂಜಾಬ್ ಕಿಂಗ್ಸ್ ಸ್ಟೀವ್ ಸ್ಮಿತ್ ಮೇಲೆ ಕಣ್ಣಿಟ್ಟಿದ್ದಾರೆ. ರಾಜಸ್ಥಾನ್ ರಾಯಲ್ಸ್ ಸಹ ಮತ್ತೊಮ್ಮೆ ಅವರ ಮೇಲೆ ಬಿಡ್ ಮಾಡಬಹುದು. ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೇಲೆ ಕಣ್ಣಿಟ್ಟಿದೆ.
ಎಲ್ಲಾ ಫ್ರಾಂಚೈಸಿಗಳ ಕಣ್ಣುಗಳು ಈ ಬಾರಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೇಲೆ ಇದೆ. ಮ್ಯಾಕ್ಸ್‌ವೆಲ್ ಅವರನ್ನು ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) 10.75 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಐಪಿಎಲ್ 2020 ರಲ್ಲಿ ಅವರ ಸಾಧನೆ ಬಹಳ ನಿರಾಶಾದಾಯಕವಾಗಿತ್ತು. ಇದರಿಂದಾಗಿ ಪಂಜಾಬ್ ಅವರನ್ನು ಈ ಬಾರಿ ಬಿಡುಗಡೆ ಮಾಡಿದೆ. ಆದರೆ, ಆಸ್ಟ್ರೇಲಿಯಾ ಪರ ಆಡುವಾಗ ಭಾರತ ವಿರುದ್ಧದ ಟಿ 20 ಸರಣಿಯಲ್ಲಿ ಮ್ಯಾಕ್ಸ್‌ವೆಲ್ ಸಾಕಷ್ಟು ರನ್ ಗಳಿಸಿದರು. ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಲು ಬಯಸುತ್ತೇನೆ ಎಂದು ಈ ಬಾರಿ ಮ್ಯಾಕ್ಸ್‌ವೆಲ್ ಸುಳಿವು ನೀಡಿದ್ದಾರೆ. ವಿರಾಟ್ ನಾಯಕತ್ವದಲ್ಲಿ ಮತ್ತು ಡಿವಿಲಿಯರ್ಸ್‌ನಂತಹ ಅನುಭವಿಗಳೊಂದಿಗೆ ಆಡುವುದು ತಮಾಷೆಯಾಗಿರುತ್ತದೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು.
ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಫೈನಲ್‌ಗೆ ಕರೆದೊಯ್ದ ಕೋಚ್ ರಿಕಿ ಪಾಂಟಿಂಗ್ ಈ ಬಾರಿ ತಮ್ಮ ತಂಡವನ್ನು ಬಲಪಡಿಸಲು ಯತ್ನಿಸಿದ್ದಾರೆ. ಪಾಂಟಿಂಗ್ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ. ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಇಂದಿನ ಐಪಿಎಲ್ ಹರಾಜನ್ನು ಎದುರು ನೋಡುತ್ತಿದ್ದೇನೆ ಮತ್ತು ನನ್ನ ತಂಡವನ್ನು ಬಲ ಪಡಿಸಲು ಉತ್ಸುಕನಾಗಿದ್ದೇನೆ” ಎಂದು ಪಾಂಟಿಂಗ್ ಬರೆದುಕೊಂಡಿದ್ದಾರೆ.
Looking forward to the IPL auction tonight with @delhicapitals and filling out our squad for the season. Hope moneybags @bazmccullum doesn't outbid me again though.
— Ricky Ponting AO (@RickyPonting) February 18, 2021
ಹರಾಜು ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು, ಇನ್ನೂ ಕೆಲವು ಆಟಗಾರರು ಹರಾಜು ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಾರೆ. ಇದರಲ್ಲಿ ಅತ್ಯಂತ ವಿಶೇಷವಾದ ಹೆಸರು ಮಾಯಾಂಕ್ ದಾಗರ್. ಮಾಯಾಂಕ್ ದಾಗರ್ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸೋದರಳಿಯ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬರೂ ಸಹ ಅವರ ಮೇಲೆ ನಿಗಾ ಇಡಲಿದ್ದಾರೆ. ಎಡಗೈ ನಿಧಾನಗತಿಯ ಬೌಲರ್ ಮಾಯಾಂಕ್ ದಾಗರ್ 23 ಪ್ರಥಮ ದರ್ಜೆ ಪಂದ್ಯಗಳಲ್ಲಿ 64 ವಿಕೆಟ್ ಮತ್ತು 31 ಟಿ 20 ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದಾರೆ.
ಇವರಲ್ಲದೆ ಆಸ್ಟ್ರೇಲಿಯಾದ ಜೇವಿಯರ್ ಬಾರ್ಲೆಟ್, ಪುದುಚೇರಿಯ ಡಿ ರೋಹಿತ್, ಕೇರಳದ ಮ್ಯಾಕ್ಸ್‌ವೆಲ್ ಎಂದು ಕರೆಯಲ್ಪಡುವ ಕೆಕೆ ಜಿಯಾಸ್, ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಅಶೋಕ್ ಮೆನೇರಿಯಾ ಮತ್ತು ಉತ್ತರ ಪ್ರದೇಶದ ಸ್ಪಿನ್ನರ್ ಸೌರಭ್ ಕುಮಾರ್ ಕೂಡ ಇದ್ದಾರೆ.
ಈ ಬಾರಿ 292 ಆಟಗಾರರಲ್ಲಿ 128 ಮಂದಿ ವಿದೇಶಿಯರಾಗಿದ್ದು, ಗರಿಷ್ಠ 35 ಆಟಗಾರರು ಆಸ್ಟ್ರೇಲಿಯಾದವರಾಗಿದ್ದಾರೆ. ಇವರಲ್ಲದೆ, ನ್ಯೂಜಿಲೆಂಡ್‌ನ 20 ಆಟಗಾರರು ಮತ್ತು ವೆಸ್ಟ್ ಇಂಡೀಸ್‌ನ 19 ಆಟಗಾರರ ಹೆಸರನ್ನು ಸಹ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
The stage is set in Chennai.?
We’re ready to #BidForBold at the #IPLAuction! ????Excited, 12th Man Army? ?#PlayBold #ClassOf2021 pic.twitter.com/i6G38bPbvJ
— Royal Challengers Bangalore (@RCBTweets) February 18, 2021
Start the whistles for the #SuperAuction #RounduKatti #WhistlePodu ?? pic.twitter.com/VH7ZKzoBog
— Chennai Super Kings (@ChennaiIPL) February 18, 2021
Few more hours until the clock strikes "SOLD" ?
Dilliwalon, drop in your pick for one player we should get into a bidding war ?#IPLAuction2021 #IPLAuction #YehHaiNayiDilli pic.twitter.com/fwGT0NuahY
— Delhi Capitals (@DelhiCapitals) February 18, 2021
आला रे आला …#IPLAuction चा दिवस आला ??
Are you ready for the big day, Paltan? ?#OneFamily #MumbaiIndians pic.twitter.com/GVU9BjsmKN
— Mumbai Indians (@mipaltan) February 18, 2021
ಐಪಿಎಲ್ 2021 ರ ಹರಾಜು ಪ್ರಕ್ರಿಯೆ ಇನ್ನೇನೂ ಶುರುವಾಗಲಿದೆ. ಎಲ್ಲಾ ತಂಡಗಳು 292 ಆಟಗಾರರಿಗಾಗಿ ಸ್ಪರ್ಧಿಸಲಿವೆ. ಮಧ್ಯಾಹ್ನ 3 ರಿಂದ ಚೆನ್ನೈನಲ್ಲಿ ಹರಾಜು ಪ್ರಾರಂಭವಾಗಲಿದೆ. ಎಲ್ಲಾ 8 ತಂಡಗಳ ಪ್ರತಿನಿಧಿಗಳು ಸ್ಥಳಕ್ಕೆ ತಲುಪಿದ್ದಾರೆ ಮತ್ತು ಹರಾಜಿನ ನಿಯಮಗಳನ್ನು ಅವರಿಗೆ ಬಿಸಿಸಿಐ ವಿವರಿಸಿದೆ.
Trophy in all its glory ?? #IPLAuction pic.twitter.com/XBcC0NUkaX
— IndianPremierLeague (@IPL) February 18, 2021
ಈ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ಮೊತ್ತವನ್ನು ಹೊಂದಿದೆ. ಪಂಜಾಬ್ ಬಳಿ 53 ಕೋಟಿ ರೂ. ಉಳಿದಿದೆ ಮತ್ತು ಅವರು 9 ಕ್ಕೂ ಹೆಚ್ಚು ಆಟಗಾರರನ್ನು ಖರೀದಿಸಬೇಕಾಗಿದೆ. ಅದೇ ಸಮಯದಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಬಳಿ 10.7 ಕೋಟಿ ರೂ ಹಣವಿದೆ.
Published On - 8:19 pm, Thu, 18 February 21