AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arjun Tendulkar: 20 ಲಕ್ಷ ರೂಪಾಯಿಗೆ ಮುಂಬೈ ತಂಡ ಸೇರಿದ ಅರ್ಜುನ್​ ತೆಂಡೂಲ್ಕರ್​!

ಅರ್ಜುನ್​ ತೆಂಡೂಲ್ಕರ್​ ಅವರನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು. ಅಂತೆಯೇ, ಅರ್ಜುನ್​ ಹೆಸರು ಬರುತ್ತಿದ್ದಂತೆ ಮುಂಬೈ ಇಂಡಿಯನ್ಸ್​ ಅವರು ಬಿಡ್​ ಮಾಡಿದರು.

Arjun Tendulkar: 20 ಲಕ್ಷ ರೂಪಾಯಿಗೆ ಮುಂಬೈ ತಂಡ ಸೇರಿದ ಅರ್ಜುನ್​ ತೆಂಡೂಲ್ಕರ್​!
ಅರ್ಜುನ್ ತೆಂಡೂಲ್ಕರ್
Follow us
ರಾಜೇಶ್ ದುಗ್ಗುಮನೆ
|

Updated on:Feb 18, 2021 | 8:33 PM

ಸಚಿನ್​ ತೆಂಡೂಲ್ಕರ್​ ಅವರ ಮಗ ಅರ್ಜುನ್​ ತೆಂಡೂಲ್ಕರ್​ ಈ ಬಾರಿಯ ಐಪಿಎಲ್​ 2021 ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಂಡಿದ್ದರು. ಹರಾಜಿನಲ್ಲಿ ಅರ್ಜುನ್​ ಅವರನ್ನು ಯಾವ ತಂಡ ತೆಗೆದುಕೊಳ್ಳಲಿದೆ ಎನ್ನುವ ಕುತೂಹಲ ಇತ್ತು. ಎಲ್ಲರೂ ಊಹಿಸಿದಂತೆ ಅರ್ಜುನ್​ ಅವರನ್ನು ಮುಂಬೈ ತಂಡ 20 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟಿ20ಗೆ ಅರ್ಜುನ್​ ಕಾಲಿಟ್ಟಿದ್ದರು. ಬೌಲರ್​ ಆಗಿರುವ ಇವರು, ಮುಂಬೈ ಪರ ಆಡಿದ್ದರು. ಹರಿಯಾಣ ವಿರುದ್ಧದ ಪಂದ್ಯದಲ್ಲಿ 34 ರನ್​ ನೀಡಿ ಒಂದು ವಿಕೆಟ್​ ಪಡೆದರೆ, ಪುದುಚೇರಿ ವಿರುದ್ಧ 33 ರನ್​ ನೀಡಿ ಒಂದು ವಿಕೆಟ್​ ಪಡೆದಿದ್ದರು.

ಫೆಬ್ರವರಿ 14 ರಂದು ಮುಂಬೈನಲ್ಲಿ ನಡೆದ 73 ನೇ ಪೊಲೀಸ್ ಆಹ್ವಾನ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅದ್ಭುತ ಆಟ ಪ್ರದರ್ಶಿಸಿದ್ದರು. ಎ ಗುಂಪಿನ ಎರಡನೇ ಸುತ್ತಿನಲ್ಲಿ 31 ಎಸೆತಗಳಲ್ಲಿ ಅಜೇಯ 77 ರನ್ ಗಳಿಸಿದ ಅವರು ಬೌಲಿಂಗ್​ನಲ್ಲಿ 41 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದರು.

ಅರ್ಜುನ್​ ತೆಂಡೂಲ್ಕರ್​ ಅವರನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿತ್ತು. ಏಕೆಂದರೆ, ಸಚಿನ್​ ತೆಂಡೂಲ್ಕರ್​ ಮುಂಬೈನವರು. ಮುಂಬೈ ಇಂಡಿಯನ್ಸ್​ ಪರವಾಗಿ ಅವರು ಆಡಿದ್ದಾರೆ. ಹೀಗಾಗಿ, ಎಂಐ ಈ ಬಗ್ಗೆ ಆಸಕ್ತಿ ತೋರಿಸುವ ಸಾಧ್ಯತೆ ಇದೆ ಎಂಬುದು ಭಾರೀ ಚರ್ಚೆ ಆಗಿತ್ತು.

ಹರಾಜಿನಲ್ಲಿ ಅರ್ಜುನ್ ಅವರ ಮೂಲ ಬೆಲೆಯನ್ನು 20 ಲಕ್ಷ ರೂಪಾಯಿ ಎಂದು ನಿಗದಿ ಮಾಡಲಾಗಿತ್ತು. ಅರ್ಜುನ್​ ಹೆಸರು ಬರುತ್ತಿದ್ದಂತೆ ಮುಂಬೈ ಇಂಡಿಯನ್ಸ್​ ಅವರು ಬಿಡ್​ ಮಾಡಿದರು. ಉಳಿದ ಯಾವ ತಂಡದವರೂ ಬಿಡ್​ ಮಾಡದ ಕಾರಣ ಅರ್ಜುನ್​ ಮುಂಬೈ ಪಾಲಾದರು.

ಇದನ್ನೂ ಓದಿ: ಟ್ವಿಟರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್ 

Published On - 8:23 pm, Thu, 18 February 21

ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ಇದು ನನ್ನ ಗ್ರೌಂಡ್... ಕೆಎಲ್ ರಾಹುಲ್​ಗೆ ವಿರಾಟ್ ಕೊಹ್ಲಿ ತಿರುಗೇಟು
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
VIDEO: ನಾನೇನು ಮಾಡ್ದೆ... ಕೆಎಲ್ ರಾಹುಲ್ ಜೊತೆ ವಿರಾಟ್ ಕೊಹ್ಲಿ ಕಿರಿಕ್
Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?
Daily Devotional: ರಾತ್ರಿ ವೇಳೆ ನಾಯಿಗಳು ಊಳಿಡೋದರ ಅರ್ಥವೇನು?