ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ 14 ನೇ ಆವೃತ್ತಿಯ ಆಟಗಾರರ ಹರಾಜು ನಾಳೆ (ಫೆಬ್ರವರಿ 18, ಗುರುವಾರ ) ಚೆನ್ನೈನಲ್ಲಿ ನಡೆಯಲಿದೆ. ಇದು ಮಿನಿ ಹರಾಜಾಗಿರುವುದರಿಂದ, ಇದು ಒಂದು ದಿನದ ಕಾರ್ಯಕ್ರಮವಾಗಿದೆ. ಹಾಗಾದರೆ, ಐಪಿಎಲ್ ಹರಾಜು ಯಾವಾಗ ನಡೆಯುತ್ತದೆ? ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ? ಎಷ್ಟು ಆಟಗಾರರು ಹರಾಜು ಆಗಲಿದ್ದಾರೆ ಮತ್ತು ಎಲ್ಲಾ ಎಂಟು ಫ್ರಾಂಚೈಸಿಗಳ ಬಳಿ ಇರುವ ಹಣವೆಷ್ಟು? ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.
ದಿನಾಂಕ, ಸಮಯ ಮತ್ತು ಸ್ಥಳ
ಐಪಿಎಲ್ 2021 ಹರಾಜು ಫೆಬ್ರವರಿ 18, ಗುರುವಾರ ನಡೆಯಲಿದೆ. ಈ ಕಾರ್ಯಕ್ರಮವು ಚೆನ್ನೈನಲ್ಲಿ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಾರಂಭವಾಗಲಿದೆ. ಬಿಸಿಸಿಐ ನಿಯಮಗಳ ಪ್ರಕಾರ, ಫ್ರ್ಯಾಂಚೈಸ್ ಮಾಲೀಕರು ಹರಾಜಿನ ಭಾಗವಾಗಿರಲು ಆರ್ಟಿ-ಪಿಸಿಆರ್ ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕಾಗುತ್ತದೆ.
ನೇರ ಪ್ರಸಾರ ವೀಕ್ಷಣೆ
ಐಪಿಎಲ್ 2021 ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕಾರ್ಯಕ್ರಮದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೋಡಬಹುದು.
ಎಷ್ಟು ಆಟಗಾರರು ಹರಾಜಿನಲ್ಲಿದ್ದಾರೆ?
ಹರಾಜಿನಲ್ಲಿ ನೋಂದಾಯಿಸಿದ್ದ 1,114 ಪೈಕಿ ಒಟ್ಟು 292 ಆಟಗಾರರು ಹರಾಜಿನಲ್ಲಿರಲ್ಲಿದ್ದಾರೆ.
ಹರಾಜು ಪ್ರಕ್ರಿಯೆ ಹೇಗೆ?
ಪಟ್ಟಿಯಲ್ಲಿರುವ ಎಲ್ಲಾ 292 ಆಟಗಾರರನ್ನು ಹರಾಜು ಮಾಡಲಾಗುತ್ತದೆ. ಒಟ್ಟು 62 ಸ್ಲಾಟ್‌ಗಳನ್ನು ಭರ್ತಿ ಮಾಡಬೇಕಾಗಿದೆ. ಹೀಗಾಗಿ ತಂಡದಲ್ಲಿರುವ ಹಣವನ್ನು ಬಳಸಿಕೊಂಡು ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ.
ಪ್ರತಿಯೊಬ್ಬ ಆಟಗಾರನು ನಿರ್ದಿಷ್ಟ ಮೂಲ ಬೆಲೆಯನ್ನು ಹೊಂದಿದ್ದು, ಆ ಮೊತ್ತ ಅವರು ಪಡೆಯಬಹುದಾದ ಕನಿಷ್ಠ ಮೊತ್ತವಾಗಿದೆ. ಸಾಗರೋತ್ತರ ಆಟಗಾರರು ತಮ್ಮದೇ ಆದ ಮೂಲ ಬೆಲೆಯನ್ನು ನಿಗದಿಪಡಿಸಿದರೆ, ಭಾರತೀಯ ಆಟಗಾರರ ಮೂಲ ಬೆಲೆಯನ್ನು ಬಿಸಿಸಿಐ ಜೊತೆ ಚರ್ಚೆ ನಡೆಸಿ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ಐಪಿಎಲ್ ಫ್ರಾಂಚೈಸಿಗಳ ಬಳಿಯಿರುವ ಹಣವೆಷ್ಟು?
ಎಲ್ಲಾ ಎಂಟು ಫ್ರಾಂಚೈಸಿಗಳು ಹೊಂದಿರುವ ಹಣದ ಸಂಪೂರ್ಣ ಪಟ್ಟಿ ಇಲ್ಲಿದೆ.
Franchise | Remaining Purse | Available Slot | Overseas Slot |
ಚೆನ್ನೈ ಸೂಪರ್ ಕಿಂಗ್ಸ್ | ರೂ 19.90 ಕೋಟಿ | 6 | 1 |
ಡೆಲ್ಲಿ ಕ್ಯಾಪಿಟಲ್ಸ್ | ರೂ 13.40 ಕೋಟಿ | 8 | 3 |
ಪಂಜಾಬ್ ಕಿಂಗ್ಸ್ | ರೂ 53.20 ಕೋಟಿ | 9 | 5 |
ಕೋಲ್ಕತಾ ನೈಟ್ ರೈಡರ್ಸ್ | ರೂ 10.75 ಕೋಟಿ | 8 | 2 |
ಮುಂಬೈ ಇಂಡಿಯನ್ಸ್ | ರೂ 15.35 ಕೋಟಿ | 7 | 4 |
ರಾಜಸ್ಥಾನ್ ರಾಯಲ್ಸ್ | ರೂ 37.85 ಕೋಟಿ | 9 | 3 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | ರೂ 35.40 ಕೋಟಿ | 14 | 3 |
ಸನ್‌ರೈಸರ್ಸ್ ಹೈದರಾಬಾದ್ | ರೂ 10.75 ಕೋಟಿ | 3 | 1 |
Published On - 5:06 pm, Wed, 17 February 21