IPL 2021 Auction Mumbai Indians Players List: ಮುಂಬೈ ಇಂಡಿಯನ್ಸ್ ತಂಡ ತನ್ನಲ್ಲೇ ಉಳಿಸಿಕೊಂಡ, ಕೈಬಿಟ್ಟ ಆಟಗಾರರ ವರದಿ ಇಲ್ಲಿದೆ
IPL 2021 Auction Mumbai Indians Players List: ಐಪಿಎಲ್ 2020 ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಈ ಬಾರಿಯು ಮುಂಬೈ ಇಂಡಿಯನ್ಸ್ ತಂಡದ ಮೇಲೆ ಭಾರಿ ನಿರೀಕ್ಷೆಗಳಿವೆ.
ದುಬೈ: ಐಪಿಎಲ್ 2020 ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ಗಳಿಂದ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಹೀಗಾಗಿ ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಭಾರಿ ನಿರೀಕ್ಷೆಗಳಿವೆ. ಅಲ್ಲದೆ ಪ್ರೇಕ್ಷಕರ ನಿರೀಕ್ಷೆಯಂತೆ ಮುಂಬೈ ತಂಡ ಕೂಡ ತಮಗೆ ಅವಶ್ಯಕವಾಗಿರುವ ಆಟಗಾರರನ್ನು ಉಳಿಸಿಕೊಂಡು, ಇತರರನ್ನು ತಂಡದಿಂದ ಕೈಬಿಟ್ಟಿದೆ.
ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದ ವರ್ಷಗಳು ಹೀಗಿವೆ.. – ಇಂಡಿಯನ್ಸ್ ಮೊದಲ ಬಾರಿಗೆ 2013ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. – 2015ರಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. – 2017ರಲ್ಲಿ ಮತ್ತೆ ಚಾಂಪಿಯನ್ ಆದ ಮುಂಬೈ. – 2019ರಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ ಆದ ಮುಂಬೈ. 2020 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐದನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಮುಂಬೈ ಭಾಜನವಾಗಿದೆ.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ, ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕುಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರಿತ್ ಬುಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹಾರ್, ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಮೊಹ್ಸಿನ್ ಖಾನ್
ತಂಡದಿಂದ ಕೈಬಿಟ್ಟ ಆಟಗಾರರು: ಪ್ರಿನ್ಸ್ ಬಲ್ವಂತ್ ರೈ, ದಿಗ್ವಿಜಯ್ ದೇಶ್ಮುಖ್, ಲಸಿತ್ ಮಾಲಿಂಗ, ನಾಥನ್ ಕೌಲ್ಟರ್-ನೈಲ್, ಜೇಮ್ಸ್ ಪ್ಯಾಟಿನ್ಸನ್, ಶೆರ್ಫೇನ್ ರುದರ್ಫೋರ್ಡ್, ಮಿಚೆಲ್ ಮೆಕ್ಲೆನೆಗನ್
Published On - 6:01 pm, Wed, 17 February 21