ಆರ್ಸಿಬಿ ತಂಡದಿಂದ ಕೊರೊನಾ ಜಾಗೃತಿ ವಿಡಿಯೋ; ಇಂತಹ ಮೌಲ್ಯಗಳಿಂದಲೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿರುವುದು
IPL 2021: ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಆಚೆ ಹೋಗಿ, ಮರೆಯದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಆರ್ಸಿಬಿ.. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯ ಬಡಿತವಾಗಿರುವ ಈ ತಂಡ ತನ್ನ ಆಟದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಪ್ರತಿ ವರ್ಷವೂ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾವು ಆಡುವ ಒಂದು ಪಂದ್ಯದಲ್ಲಿ ಹಸಿರು ಜರ್ಸಿಯನ್ನು ತೊಟ್ಟು ಮೈದಾನಕ್ಕಿಳಿಯುತ್ತದೆ. ಈ ಮೂಲಕ ಸಾರ್ವಜನಿಕರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದೇ ಆರ್ಸಿಬಿಯ ಪರಮ ಗುರಿಯಾಗಿದೆ. ಪ್ರತಿ ವರ್ಷವೂ ಈ ಪದ್ದತಿಯನ್ನು ಆಚರಿಸುತ್ತಾ ಬಂದಿರುವ ಕೊಹ್ಲಿ ಬಳಗ, ಈ ವರ್ಷ ದೇಶದಲ್ಲಿ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡಿರುವ ಕೊರೊನಾದ ಬಗ್ಗೆ ಅರಿವನ್ನು ಮೂಡಿಸುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ.
ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮನವಿ ಆರ್ಸಿಬಿ ಬಿಡುಗಡೆಗೊಳಿಸಿರುವ ಈ ವಿಡಿಯೋದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ, ಆರ್ಸಿಬಿ ಆಪತ್ಭಾಂದವ ಎಬಿ ಡಿವಿಲಿಯರ್ಸ್, ಗ್ಲೇನ್ ಮ್ಯಾಕ್ಸ್‌ವೆಲ್, ತಂಡದ ಕೋಚ್, ಕನ್ನಡಿಗ ದೇವದತ್ತ್ ಪಡಿಕಲ್, ಯುಜ್ವೇಂದ್ರ ಚಹಲ್, ಕೊರೊನಾ ಸಾಂಕ್ರಮಿಕ ರೋಗದ ಬಗೆಗೆ ಅರಿವು ಮೂಡಿಸುವ ಮಾತುಗಳನ್ನು ಆಡಿದ್ದಾರೆ. ವಿಡಿಯೋ ಆರಂಭದಲ್ಲಿ ಮಾತಾನಾಡಿರುವ ಕೊಹ್ಲಿ, ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಆಚೆ ಹೋಗಿ, ಮರೆಯದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನೀವು ಸಹ ವದಂತಿಗಳನ್ನು ಹರಡಬೇಡಿ ಕೊಹ್ಲಿ ನಂತರ ಬರುವ ಉಳಿದ ಆಟಗಾರರೂ ಕೂಡ ಇದೇ ಮಾದರಿಯನ್ನು ಅನುಸರಿಸಿದ್ದಾರೆ. ನಂತರ ವಿಡಿಯೋ ಕೊನೆಗೆ ಮತ್ತೊಮ್ಮೆ ಮನವಿ ಮಾಡಿರುವ ಕೊಹ್ಲಿ, ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿಕೊಡಬೇಡಿ, ಜೊತೆಗೆ ನೀವು ಸಹ ವದಂತಿಗಳನ್ನು ಹರಡಬೇಡಿ ಎಂದಿದ್ದಾರೆ. ನಾವೆಲ್ಲರೂ ಸೇರಿ ಕೊರೊನಾದ ವಿರುದ್ಧ ಹೋರಾಡುವ ಎಂದಿದ್ದಾರೆ.
Stay Home. Stay Safe.
The only way to beat the Coronavirus pandemic is by working as a team. Each one of us is a superhero and all we need to do is follow the basics and help each other. Here’s Virat Kohli and Co. with a public service announcement.#PlayBold #StayHomeStaySafe pic.twitter.com/jQT9q15N5j
— Royal Challengers Bangalore (@RCBTweets) April 25, 2021
ಸತತ ನಾಲ್ಕು ಪಂದ್ಯಗಳಲ್ಲೂ ಕೊಹ್ಲಿ ಪಡೆ ಗೆಲುವಿನ ಕೇಕೆ ಈ ಐಪಿಎಲ್ ಸೀಸನ್ನಲ್ಲಿ ಆರ್ಸಿಬಿ ಗೆಲುವಿನ ಓಟ ಭರ್ಜರಿಯಾಗಿ ಮುಂದುವರಿದಿದೆ. ಸತತ ನಾಲ್ಕು ಪಂದ್ಯಗಳಲ್ಲೂ ಕೊಹ್ಲಿ ಪಡೆ ಗೆಲುವಿನ ಕೇಕೆ ಹಾಕಿದೆ. ಐಪಿಎಲ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ, ಸೋಲಿಲ್ಲದ ಸರದಾರರಂತೆ ಮುನ್ನುಗ್ಗುತ್ತಿರುವ ಕೊಹ್ಲಿ ಹುಡುಗ್ರು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮೊದಲ ಪಂದ್ಯದಲ್ಲೇ ಬಲಿಷ್ಟ ಮುಂಬೈ ಮಣಿಸಿದ ಆರ್ಸಿಬಿ, ನಂತರ ಹೈದರಾಬಾದ್, ಕೊಲ್ಕತ್ತಾ ಮತ್ತು ರಾಜಸ್ಥಾನ್ವನ್ನ ಮಣಿಸಿದೆ. ಇಂದು ವಾಂಖೆಡೆ ಮೈದಾನದಲ್ಲಿ ರಾಯಲ್ ಆಟಗಾರರು, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮುಖಾಮುಖಿಯಾಗ್ತಿದ್ದಾರೆ.
ಉಭಯ ತಂಡಗಳ ಪ್ಲೆಯಿಂಗ್ 11 ಸಿಎಸ್‌ಕೆ: ರಿತುರಾಜ್ ಗೈಕ್ವಾಡ್, ಫಾಫ್ ಡು ಪ್ಲೆಸಿ, ಡ್ವೇನ್ ಬ್ರಾವೋ, ಸುರೇಶ್ ರೈನಾ, ಅಂಬಾಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ, ಸ್ಯಾಮ್ ಕರಣ್, ಇಮ್ರಾನ್ ತಾಹಿರ್, ಶಾರ್ದುಲ್ ಠಾಕೂರ್, ದೀಪಕ್ ಚಹರ್
ಆರ್‌ಸಿಬಿ: ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ನವದೀಪ್ ಸೈನಿ, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡಾನ್ ಕ್ರಿಶ್ಚಿಯನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ಕೈಲ್ ಜಾಮಿಸನ್, ಹರ್ಷಲ್ ಪಟೇಲ್.