IPL 2021: ಯುದ್ಧ ಘೋಷಣೆಗೂ ಮುನ್ನವೇ ಶಸ್ತ್ರಾಭ್ಯಾಸಕ್ಕಿಳಿದ ಸಿಎಸ್​ಕೆ ತಂಡ.. ಕಪ್​ ಗೆಲ್ಲುವ ಆಸೆಯೊಂದಿಗೆ ಚೆನ್ನೈಗೆ ಬಂದಿಳಿದ ಧೋನಿ

| Updated By: ಸಾಧು ಶ್ರೀನಾಥ್​

Updated on: Mar 04, 2021 | 5:28 PM

IPL 2021: ಟೀಂ ಇಂಡಿಯಾದ ಮಾಜಿ ನಾಯಕ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿಯ ಐಪಿಎಲ್​ 2021 ಗಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುವ ಸಲುವಾಗಿ ಮಾರ್ಚ್​ 3 ರಂದು ಚೆನ್ನೈಗೆ ಬಂದಿಳಿದಿದ್ದಾರೆ.

IPL 2021: ಯುದ್ಧ ಘೋಷಣೆಗೂ ಮುನ್ನವೇ ಶಸ್ತ್ರಾಭ್ಯಾಸಕ್ಕಿಳಿದ ಸಿಎಸ್​ಕೆ ತಂಡ.. ಕಪ್​ ಗೆಲ್ಲುವ ಆಸೆಯೊಂದಿಗೆ ಚೆನ್ನೈಗೆ ಬಂದಿಳಿದ ಧೋನಿ
ಎಂ.ಎಸ್.ಧೋನಿ
Follow us on

ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಕೂಲ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿಯ ಐಪಿಎಲ್​ 2021 ಗಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುವ ಸಲುವಾಗಿ ಮಾರ್ಚ್​ 3 ರಂದು ಚೆನ್ನೈಗೆ ಬಂದಿಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಧೋನಿ ನಾಯಕತ್ವ ವಹಿಸಿದ್ದ ಸಿಎಸ್‌ಕೆ ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿತ್ತು. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ತೋರಿದ ಕೆಟ್ಟ ಪ್ರದರ್ಶನ ಇದಾಗಿತ್ತು. ಒಂದು ಸಮಯದಲ್ಲಿ ತಂಡವು ಪಾಯಿಂಟ್​ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಆದರೆ ಕೊನೆಯ ಮೂರು ಪಂದ್ಯಗಳಲ್ಲಿ ತಂಡವು ಸತತ 3 ಪಂದ್ಯಗಳನ್ನು ಗೆದ್ದು ಕಳೆದ ಆವೃತ್ತಿಯನ್ನು ಆರನೇ ಸ್ಥಾನದೊಂದಿಗೆ ಮುಗಿಸಿತು.

ತರಬೇತಿ ಶಿಬಿರಕ್ಕೆ ಆಗಮಿಸಿದ ಧೋನಿ
ಕಳೆದ ಆವೃತ್ತಿಯ ಕೊನೆಯ ಪಂದ್ಯದಲ್ಲಿ, ಸಿಎಸ್ಕೆ ನಾಯಕ ಧೋನಿ ಖಂಡಿತವಾಗಿಯೂ ಮುಂದಿನ ಆವೃತ್ತಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈಗ, ಆ ಭರವಸೆಯನ್ನು ಉಳಿಸಿಕೊಳ್ಳುವ ಸಲುವಾಗಿ ಧೋನಿ ತಮ್ಮ ಪುನರಾಗಮನದತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ಬುಧವಾರ ರಾತ್ರಿ ತಮ್ಮ ಎರಡನೇ ಮನೆಯಾಗಿರುವ ಚೆನ್ನೈಯನ್ನು ತಲುಪಿದ್ದಾರೆ.

ಧೋನಿ ಆಗಮನವನ್ನು ಫ್ರ್ಯಾಂಚೈಸ್‌ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಘೋಷಿಸಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ಧೋನಿ ಹೊರಬರುತ್ತಿರುವ ಚಿತ್ರವನ್ನು ಆಡಳಿತ ಮಂಡಳಿ ಪೋಸ್ಟ್ ಮಾಡಿದೆ. ಆದರೆ ಧೋನಿಗಿಂತ ಮೊದಲು ತಂಡದ ಪ್ರಮುಖ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಕೂಡ ಚೆನ್ನೈ ತಲುಪಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ಮಿಂಚುತ್ತಿದ್ದಾರೆ ಚೆನ್ನೈ ಆಟಗಾರರು
ಐಪಿಎಲ್‌ನ ಹೊಸ ಆವೃತ್ತಿಯ ಆರಂಭಿಕ ದಿನಾಂಕ ಮತ್ತು ಸ್ಥಳವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ವರದಿಗಳ ಪ್ರಕಾರ, ಸಿಎಸ್‌ಕೆ ತನ್ನ ತರಬೇತಿಯನ್ನು ಮಾರ್ಚ್ 11 ರಿಂದ ಪ್ರಾರಂಭಿಸಲಿದೆ. ಎಲ್ಲಾ ಆಟಗಾರರು ಬಯೋ ಬಬಲ್​ನ ಭಾಗವಾಗಲಿದ್ದಾರೆ. ಈಗಾಗಲೇ ತಂಡದ ಕೆಲವು ಆಟಗಾರರು ದೇಶಿ ಪಂದ್ಯಾವಳಿಯಲ್ಲಿ ಗಾಯಗೊಂಡು ವಿಶ್ರಾಂತಿಯಲ್ಲಿದ್ದರೆ, ಅನೇಕ ಆಟಗಾರರು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ.

ಚೆನ್ನೈಗೆ ಇನ್ನೊಂದು ಖುಷಿಯ ವಿಚಾರವೆಂದರೆ, ಈವರೆಗೂ ರಾಜಸ್ಥಾನ್ ರಾಯಲ್ಸ್‌ಗೆ ಆಡುತ್ತಿದ್ದ ಮತ್ತು ಈ ಆವೃತ್ತಿಯಿಂದ ಚೆನ್ನೈ ಪರ ಆಡಲಿರುವ ರಾಬಿನ್ ಉತ್ತಪ್ಪ ಅವರು ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಲ್ಲದೆ, ಯುವ ಆಟಗಾರ ಜಗದೀಷನ್ ಮತ್ತು ಋತುರಾಜ್ ಗೈಕ್ವಾಡ್ ಅವರಂತಹ ಯುವ ಬ್ಯಾಟ್ಸ್‌ಮನ್‌ಗಳೂ ಸಹ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ. ಇವರಲ್ಲದೆ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಫಿಟ್‌ನೆಸ್ ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆ. ಸುರೇಶ್ ರೈನಾ ಕೂಡ ಈ ಆವೃತ್ತಿಯಲ್ಲಿ ತಂಡಕ್ಕೆ ಮರಳುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ತಂಡದಿಂದ ಉತ್ತಮ ಆಟವನ್ನು ಕಾಣಬಹುದಾಗಿದೆ.

ಇದನ್ನೂ ಓದಿ: IPL 2021 Venues List: 6 ನಗರಗಳಲ್ಲಿ ಈ ಬಾರಿ ಐಪಿಎಲ್; ಪ್ರೇಕ್ಷಕರಿಗೆ ಬೇವು-ಬೆಲ್ಲದ ಉಡುಗೊರೆ!