IPL 2021 Venues List: 6 ನಗರಗಳಲ್ಲಿ ಈ ಬಾರಿ ಐಪಿಎಲ್; ಪ್ರೇಕ್ಷಕರಿಗೆ ಬೇವು-ಬೆಲ್ಲದ ಉಡುಗೊರೆ!
IPL 2021 Venues: ಮುಂಬೈನಲ್ಲಿ ಪಂದ್ಯಾವಳಿಗಳನ್ನು ಇತರ 5 ನಗರಗಳಿಗಿಂತ ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗುವುದು. ಮುಂಬೈನಲ್ಲಿ ಇತರ ನಗರಗಳಂತೆ, ಕ್ರೀಡಾಂಗಣದಳೊಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ.
ಮುಂಬೈ: ಈ ಬಾರಿಯ ಐಪಿಎಲ್ 2021, 5 ಅಲ್ಲ 6 ನಗರಗಳಲ್ಲಿ ನಡೆಯಲಿದೆ. ಈ ಸುದ್ದಿ ಖಚಿತವಾಗಿದ್ದು, ಐಪಿಎಲ್ 2021 ರ ಆತಿಥ್ಯ ವಹಿಸುವ ಬಗ್ಗೆ ಮುಂಬೈ ತನ್ನ ನಿರ್ಧಾರವನ್ನು ಬಹಿರಂಗಪಡಿಸಿರಲಿಲ್ಲ. ಹಾಗಾಗಿ ಈ ಹಿಂದೆ ಕೇವಲ 5 ನಗರಗಳನ್ನು ಮಾತ್ರ ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಆದರೆ ಈಗ ಅಲ್ಲಿನ ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರ, ಮುಂಬೈನಲ್ಲೂ ಸಹ ಐಪಿಎಲ್ 2021 ಪಂದ್ಯಾವಳಿಗಳು ನಡೆಯುವುದು ಖಚಿತವಾಗಿದೆ. ದೆಹಲಿ, ಅಹಮದಾಬಾದ್, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾದ ಜೊತೆಗೆ ಮುಂಬಯಿಯಲ್ಲೂ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.
ಆದರೆ, ಮುಂಬೈನಲ್ಲಿ ಪಂದ್ಯಾವಳಿಗಳನ್ನು ಇತರ 5 ನಗರಗಳಿಗಿಂತ ವಿಭಿನ್ನ ರೀತಿಯಲ್ಲಿ ಆಯೋಜಿಸಲಾಗುವುದು. ಮುಂಬೈನಲ್ಲಿ ಇತರ ನಗರಗಳಂತೆ, ಕ್ರೀಡಾಂಗಣದಳೊಗೆ ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿಯು ಪುಣೆಯ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿರುವಂತೆ ಇಲ್ಲಿಯೂ ಸಹ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಮುಂಬೈ ಹೊರತುಪಡಿಸಿ, ಇತರ ನಗರಗಳಲ್ಲಿಯೂ ಸಹ, ಕ್ರೀಡಾಂಗಣ ಸಾಮರ್ಥ್ಯದ ಅರ್ಧದಷ್ಟ ಅಂದರೆ ಶೇ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶವಿರಲಿದೆ.
ಐಪಿಎಲ್ 2021 ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ ಐಪಿಎಲ್ 2021 ರ ಪ್ರಾರಂಭದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ ಈ ಪಂದ್ಯಾವಳಿ ಏಪ್ರಿಲ್ 11 ರಿಂದ ಜೂನ್ 6 ರವರೆಗೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಇದನ್ನು ತೀರ್ಮಾನಿಸಲಾಗುವುದು ಎಂಬ ನಿರೀಕ್ಷೆಗಳಿವೆ. ಮೂಲಗಳ ಪ್ರಕಾರ, ಮಾರ್ಚ್ ಮೊದಲ ವಾರ ಪ್ರಸಾರಕರು ತಮ್ಮ ಸಿದ್ಧತೆಗಳನ್ನು ಮಾಡಿಕೊಳ್ಳುವ ಸಲುವಾಗಿ ಒಂದು ತಿಂಗಳ ಮುಂಚಿತವಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಅಹಮದಾಬಾದ್‌ನಲ್ಲಿ ಫೈನಲ್ ಐಪಿಎಲ್ 2021 ಆವೃತ್ತಿಯ ಈವೆಂಟ್ ಸ್ವರೂಪದಲ್ಲಿ ಯಾವುದೇ ಬದಲಾಣೆ ಇರುವುದಿಲ್ಲ. ತಂಡಗಳು ತವರು ನೆಲದಲ್ಲಿ 7 ಪಂದ್ಯಗಳನ್ನು ಮತ್ತು ಇನ್ನುಳಿದ 7 ಪಂದ್ಯಗಳನ್ನು ಬೇರೆ ರಾಜ್ಯಗಳಲ್ಲಿ ಆಡಲಿವೆ. ಪಂದ್ಯಾವಳಿಯಲ್ಲಿ, ತಂಡದ ಆಟಗಾರರುಕೋವಿಡ್ ನಿಯಮಗಳನ್ನು ಪಾಲಿಸಲು ಯಾವ ರೀತಿಯ ಮಾನದಂಡ ವಿಧಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಐಪಿಎಲ್ 2021 ಆವೃತ್ತಿಯ ಶಾರ್ಟ್‌ಲಿಸ್ಟ್ ಮಾಡಿದ ನಂತರ, ಪ್ಲೇಆಫ್ ಪಂದ್ಯವನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬುದರ ಬಗ್ಗೆ ಚರ್ಚಿಸಲಾಗುತ್ತದೆ. ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಅಹಮದಾಬಾದ್‌ನಲ್ಲಿ ನಡೆಸುವ ಸಾಧ್ಯತೆಗಳಿವೆ.
ಇದನ್ನೂ ಓದಿ: IPL 2021 Auction | ಹರಾಜಿನಲ್ಲಿ ಮಾರಾಟವಾಗದ ನೋವಿನಲ್ಲಿ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಆಸಿಸ್ ನಾಯಕ ಫಿಂಚ್
Published On - 4:04 pm, Sun, 28 February 21