AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಸಿರಾಜ್​ ಬೆಂಬಲಕ್ಕೆ ನಿಂತ ಕ್ಯಾಪ್ಟನ್​​ ಕೊಹ್ಲಿಯಿಂದ ಬೆನ್ ಸ್ಟೋಕ್ಸ್​ಗೆ ಮೈದಾನದಲ್ಲೇ ಅವಾಜ್

India vs England: ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೈದಾನದಲ್ಲೇ ಪರಸ್ಪರ ಜಗಳಕ್ಕಿಳಿದಿದ್ದಾರೆ. ಆದರೆ ಈ ಇಡೀ ಘಟನೆ ಮೊಹಮ್ಮದ್ ಸಿರಾಜ್ ಅವರ ಬೌನ್ಸರ್​ನೊಂದಿಗೆ ಪ್ರಾರಂಭವಾಯಿತು.

India vs England: ಸಿರಾಜ್​ ಬೆಂಬಲಕ್ಕೆ ನಿಂತ ಕ್ಯಾಪ್ಟನ್​​ ಕೊಹ್ಲಿಯಿಂದ ಬೆನ್ ಸ್ಟೋಕ್ಸ್​ಗೆ ಮೈದಾನದಲ್ಲೇ ಅವಾಜ್
ವಾಗ್ವಾದದಲ್ಲಿ ತೋಡಗಿರುವ ಕೊಹ್ಲಿ, ಬೆನ್ ಸ್ಟೋಕ್ಸ್​
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on: Mar 04, 2021 | 3:05 PM

Share

ಅಹಮದಾಬಾದ್: ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಯಾವುದಾದರು ಒಂದು ವಿಷಯಕ್ಕೆ ತಮ್ಮ ತಾಳ್ಮೆಯನ್ನು ಕಳೆದುಕೊಂಡು ಜಗಳಕ್ಕಿಳಿಯುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಇಂದೂ ಸಹ ಅಂತಹುದೇ ಒಂದು ಘಟನೆ ಭಾರತ ಮತ್ತು ಇಂಗ್ಲೆಂಡ್‌ ಆಟಗಾರರ ನಡುವೆ ನಡೆಯಿತು. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಪ್ರಸ್ತುತ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಈ ಘಟನೆ ನಡೆಯಿತು. ಈ ಬಾರಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಮೈದಾನದಲ್ಲೇ ಪರಸ್ಪರ ಜಗಳಕ್ಕಿಳಿದಿದ್ದಾರೆ. ಈ ಘಟನೆ ಮೊಹಮ್ಮದ್ ಸಿರಾಜ್ ಅವರ ಬೌನ್ಸರ್​ನೊಂದಿಗೆ ಪ್ರಾರಂಭವಾಯಿತು. ನಂತರ ವಿರಾಟ್ ಕೊಹ್ಲಿ ಹಾಗೂ ಇಂಗ್ಲೆಂಡ್ ಆಲ್​ರೌಂಡರ್​ ಕಡೆ ವಾಲಿತು. ಈ ಇಬ್ಬರ ಜಗಳ ಕಂಡ ಅಂಪೈರ್​ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮೊದಲೇ ಇಂಗ್ಲೆಂಡ್ ತಂಡ ಮೂರು ವಿಕೆಟ್​​ಗಳನ್ನು ಕಳೆದುಕೊಂಡು ತತ್ತರಿಸಿತ್ತು. ಆ ಸಿಟ್ಟು ಈ ಅನುಚಿತ ಪ್ರಸಂಗಕ್ಕೆ ಹೇತುವಾಯಿತು.

ಮೊಹಮ್ಮದ್ ಸಿರಾಜ್ ಎಸೆದ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ಈ ಕಿತ್ತಾಟ ಪ್ರಾರಂಭವಾಯಿತು. ಓವರ್‌ನ ಕೊನೆಯ ಎಸೆತವನ್ನು ಸಿರಾಜ್ ಬೌನ್ಸರ್ ಎಸೆದರು. ಈ ವೇಳೆ ಬ್ಯಾಟಿಂಗ್​ ಮಾಡುತ್ತಿದ್ದ ಸ್ಟೋಕ್ಸ್‌, ಸಿರಾಜ್ ಬೌನ್ಸರ್ ಬಗ್ಗೆ ಕಾಮೆಂಟ್​  ಮಾಡಿದರು. ಕೂಡಲೇ ವಿರಾಟ್ ಕೊಹ್ಲಿ ಬೆನ್ ಸ್ಟೋಕ್ಸ್ ಬಳಿ ಹೋಗಿ ಕಮೆಂಟ್​ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಾರಂಭಿಸಿದರು. ಈ ಇಬ್ಬರ ನಡುವಿನ ಕದನ ಹದಗೆಡಲು ಪ್ರಾರಂಭಿಸಿತು. ಇಬ್ಬರ ವಾಗ್ವಾದ ನೋಡಿದರೆ, ವೇಗದ ಬೌಲರ್ ಸಿರಾಜ್ ಮೇಲೆ ಸ್ಟೋಕ್ಸ್‌ ಕಾಮೆಂಟ್ ಮಾಡಿದ್ದರ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ತೋರಿತು.

ಕೊಹ್ಲಿಯೊಂದಿಗೆ ಮೊಹಾಲಿಯಲ್ಲೇ ಜಗಳಕ್ಕಿಳಿದಿದ್ದ ಸ್ಟೋಕ್ಸ್‌.. ಇದರ ನಂತರವೂ, ಸ್ಟೋಕ್ಸ್‌ ಸುಮ್ಮನಾಗಲಿಲ್ಲ. 14 ನೇ ಓವರ್ ಎಸೆಯಲು ಬಂದ ಮೊಹಮ್ಮದ್ ಸಿರಾಜ್ ಬಗ್ಗೆ ಸ್ಟೋಕ್ಸ್‌ ಪ್ರತಿಕ್ರಿಯಿಸುತ್ತಲೇ ಇದ್ದರು. ಈ ಓವರ್‌ನಲ್ಲಿ ಸ್ಟೋಕ್ಸ್‌ ಸಿರಾಜ್‌ ಎಸೆತದಲ್ಲಿ ಮೂರು ಬೌಂಡರಿ ಬಾರಿಸಿ ಆಕ್ರೋಶ ಹೊರ ಹಾಕಿದರು. ಆದರೆ, ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ ಮೈದಾನದಲ್ಲಿ ಪರಸ್ಪರ ಮಾತಿಗಿಳಿದಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ, ಈ ಇಬ್ಬರೂ ಆಟಗಾರರು ಮೊಹಾಲಿ ಟೆಸ್ಟ್​ನಲ್ಲಿ ಇಂತಹ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ರವೀಂದ್ರ ಜಡೇಜಾ ಎಸೆತದಲ್ಲಿ ಬೆನ್ ಸ್ಟೋಕ್ಸ್ ಔಟಾದ ಬಳಿಕ ವಿರಾಟ್ ಮತ್ತು ಸ್ಟೋಕ್ಸ್‌ ನಡುವೆ ವಾಗ್ವಾದ ನಡೆದಿತ್ತು.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ