IPL 2021: ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಸಿಎಸ್‌ಕೆ ತಂಡ, ಮೈದಾನದಲ್ಲಿ ಬೆವರಿಳಿಸಿದ ಕೂಲ್​ ಕ್ಯಾಪ್ಟನ್ ಧೋನಿ​

|

Updated on: Mar 10, 2021 | 4:07 PM

IPL 2021: ಈ ಆವೃತ್ತಿಯಲ್ಲಿ ಚೆನ್ನೈ ತನ್ನ ತರಬೇತಿ ಶಿಬಿರವನ್ನು ಇತರ ತಂಡಗಳಿಗಿಂತ ಬೇಗ ಪ್ರಾರಂಭಿಸಿದೆ. ನಾಯಕ ಧೋನಿ ಸೇರಿದಂತೆ ತಂಡದ ಹಲವಾರು ಆಟಗಾರರು ಕಳೆದ ವಾರ ಚೆನ್ನೈಗೆ ಆಗಮಿಸಿದ್ದರು.

IPL 2021: ಕ್ವಾರಂಟೈನ್ ಮುಗಿಸಿ ಅಭ್ಯಾಸ ಆರಂಭಿಸಿದ ಸಿಎಸ್‌ಕೆ ತಂಡ, ಮೈದಾನದಲ್ಲಿ ಬೆವರಿಳಿಸಿದ ಕೂಲ್​ ಕ್ಯಾಪ್ಟನ್ ಧೋನಿ​
ಮಹೇಂದ್ರ ಸಿಂಗ್ ಧೋನಿ
Follow us on

ಚೆನ್ನೈ: ಐಪಿಎಲ್ 2021 ಕ್ಕಾಗಿ ಈಗಾಗಲೇ ಪಂದ್ಯಾವಳಿಗಳ ದಿನಾಂಕಗಳನ್ನು ಘೋಷಿಸಲಾಗಿದೆ. ಎಲ್ಲಾ ತಂಡಗಳು ಸಹ ತಮ್ಮ ಪಂದ್ಯಗಳು ನಡೆಯುವ ಸ್ಥಳಗಳ ಬಗ್ಗೆ ತಿಳಿದುಕೊಂಡಿವೆ.ಅಲ್ಲದೆ ಈಗ ಲೀಗ್‌ನ ಎಲ್ಲಾ 8 ಫ್ರಾಂಚೈಸಿಗಳು ನಿಧಾನವಾಗಿ ತರಬೇತಿಯನ್ನು ಪ್ರಾರಂಭಿಸುತ್ತಿವೆ. ಆದರೂ, ಐಪಿಎಲ್​ನಲ್ಲಿ ಆಡುವ ಬಹುತೇಕ ಭಾರತೀಯ ಆಟಗಾರರು ಪ್ರಸ್ತುತ ಟೀಂ ಇಂಡಿಯಾದಲ್ಲಿದ್ದು, ಮಾರ್ಚ್ 12 ರಿಂದ ಇಂಗ್ಲೆಂಡ್ ವಿರುದ್ಧ ಟಿ 20 ಸರಣಿ ಮತ್ತು ನಂತರ ಏಕದಿನ ಸರಣಿಯನ್ನು ಆಡಬೇಕಾಗಿದೆ. ಹೀಗಾಗಿ ಆ ಪಂದ್ಯಾವಳಿಗಳು ಮುಗಿದ ಬಳಿಕ ಟೀಂ ಇಂಡಿಯಾದ ಆಟಗಾರರು ಪ್ರಾಂಚೈಸಿಗಳನ್ನು ಸೇರಿಕೊಳ್ಳಲ್ಲಿದ್ದಾರೆ. ಹಾಗಾಗಿ ಪ್ರಾಂಚೈಸಿಗಳು ಉಳಿದ ಆಟಗಾರರೊಂದಿಗೆ ತಮ್ಮ ಅಭ್ಯಾಸ ಪ್ರಾರಂಭಿಸಿವೆ. ಪರಿಣಾಮವಾಗಿ, ಮಾರ್ಚ್ 9ರ ಮಂಗಳವಾರದಿಂದ ಐಪಿಎಲ್​ನ ಅತ್ಯಂತ ಯಶಸ್ವಿ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಸಹ ತಮ್ಮ ತರಬೇತಿ ಶಿಬಿರವನ್ನು ಪ್ರಾರಂಭಿಸಿದೆ. ಪರಿಣಾಮವಾಗಿ ತಂಡದ ನಾಯಕ ಎಂ.ಎಸ್.ಧೋನಿ ಕೂಡ ತರಬೇತಿಯನ್ನ ಆರಂಭಿಸಿದ್ದಾರೆ.

ಕಳೆದ ಆವೃತ್ತಿಯಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ, ಐಪಿಎಲ್​ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಪ್ರದರ್ಶನ ನೀಡಿತು. ಸಿಎಸ್‌ಕೆ ಸತತ ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಜೊತೆಗೆ ತಂಡವು ಮೊದಲ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿಲ್ಲ. ಲೀಗ್ ಹಂತ ಮುಗಿದ ನಂತರ ಸಿಎಸ್‌ಕೆ ತಂಡ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಧೋನಿ ಸೇರಿದಂತೆ ಇತರ ಆಟಗಾರರ ತರಬೇತಿ ಪ್ರಾರಂಭ
ಪ್ರತಿ ಆವೃತ್ತಿಯಂತೆ, ಈ ಆವೃತ್ತಿಯಲ್ಲಿ ಚೆನ್ನೈ ತನ್ನ ತರಬೇತಿ ಶಿಬಿರವನ್ನು ಇತರ ತಂಡಗಳಿಗಿಂತ ಬೇಗ ಪ್ರಾರಂಭಿಸಿದೆ. ನಾಯಕ ಧೋನಿ ಸೇರಿದಂತೆ ತಂಡದ ಹಲವಾರು ಆಟಗಾರರು ಕಳೆದ ವಾರ ಚೆನ್ನೈಗೆ ಆಗಮಿಸಿದ್ದರು. ಕ್ವಾರಂಟೈನ್​ ನಿಯಮಗಳನ್ನು ಮುಗಿಸಿ, ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದ ನಂತರ ಈಗ ತಮ್ಮ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ.

ಈ ತಂಡದ ಅಭ್ಯಾಸದಲ್ಲಿ ಧೋನಿ ಹೊರತುಪಡಿಸಿ, ಹಿರಿಯ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು, ಯುವ ಬ್ಯಾಟ್ಸ್‌ಮನ್ ರಿತುರಾಜ್ ಗಾಯಕವಾಡ್ ಮತ್ತು ಇತರ ಕೆಲವು ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಇವರಲ್ಲದೆ, ಎನ್ ಜಗದಿಶನ್, ಆರ್ ಸಾಯಿ ಕಿಶೋರ್ ಮತ್ತು ಸಿ ಹರಿ ನಿಶಾಂತ್ ಅವರು ಸಹ ಧೋನಿ ಮತ್ತು ರಾಯುಡು ಅವರೊಂದಿಗೆ ಅಭ್ಯಾಸ ಮಾಡಿದರು. ಇವರೊಂದಿಗೆ ತಂಡದ ಹೊಸ ಬೌಲರ್ ಹರಿಶಂಕರ್ ರೆಡ್ಡಿ ಕೂಡ ತಂಡ ಸೇರಿಕೊಂಡಿದ್ದಾರೆ.

ಸಿಎಸ್‌ಕೆ ತರಬೇತಿ ಶಿಬಿರದ ಬಗ್ಗೆ ಮಾಹಿತಿ ನೀಡಿದ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥ್, ಶೀಘ್ರದಲ್ಲೇ ಇತರ ಆಟಗಾರರು ಸಹ ತಂಡವನ್ನು ಸೇರಲಿದ್ದಾರೆ. ಸಿಎಸ್ಕೆ ಆಟಗಾರರು ತಮ್ಮ ಕ್ವಾರಂಟೈನ್ ಅವಧಿಯನ್ನು ಮುಗಿಸಿದ ನಂತರ ಇಂದಿನಿಂದ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಕ್ರಮೇಣ ಇತರ ಕೆಲವು ಆಟಗಾರರು ಸಹ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ತಂಡವನ್ನು ಸೇರುತ್ತಾರೆ ಎಂದರು.

ಚೆಪಾಕ್‌ನಲ್ಲಿ ಆಡುವುದಿಲ್ಲ ಸಿಎಸ್‌ಕೆ
ಏಪ್ರಿಲ್ 9 ರಂದು ಚೆನ್ನೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪಂದ್ಯದೊಂದಿಗೆ ಐಪಿಎಲ್​2021 ಪ್ರಾರಂಭವಾಗಲಿದೆ. ಚೆನ್ನೈ ತಂಡ ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಲಿದೆ. ಆದರೆ, ಈ ವರ್ಷದ ಐಪಿಎಲ್‌ನಲ್ಲಿ ಯಾವುದೇ ತಂಡವು ಸಹ ತಮ್ಮ ತವರು ಮೈದಾನದಲ್ಲಿ ಪಂದ್ಯಗಳನ್ನು ಆಡಲು ಸಾಧ್ಯವಾಗುವುದಿಲ್ಲ. ಲೀಗ್ ಹಂತದ ಎಲ್ಲಾ ಪಂದ್ಯಗಳು ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ: IPL 2021: ಆರ್​ಸಿಬಿಗೆ ಮೊದಲ ಎದುರಾಳಿ ಮುಂಬೈ.. ಹೀಗಿದೆ ನೋಡಿ ನಮ್ಮ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ..!