IPL 2021: ಗೋ ಕೊರೊನಾ ಕಪ್ ತರೋಣ ಎಂದು ಸೆಂಚುರಿ ಬಾರಿಸಿದ ಪಡಿಕ್ಕಲ್! ಕನ್ನಡಿಗನ ಅಬ್ಬರಕ್ಕೆ ತತ್ತರಿಸಿದ ರಾಜಸ್ಥಾನ್ ಬೌಲರ್ಸ್​

IPL 2021 Devdutt Padikkal: ಮುಂಬೈನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಮೊದಲ ಶತಕವನ್ನು ಗಳಿಸಿ ಮಿಂಚಿದರು.

IPL 2021: ಗೋ ಕೊರೊನಾ ಕಪ್ ತರೋಣ ಎಂದು ಸೆಂಚುರಿ ಬಾರಿಸಿದ ಪಡಿಕ್ಕಲ್! ಕನ್ನಡಿಗನ ಅಬ್ಬರಕ್ಕೆ ತತ್ತರಿಸಿದ ರಾಜಸ್ಥಾನ್ ಬೌಲರ್ಸ್​
ಶತಕದ ಸಿಡಿಸಿದ ಪಡಿಕ್ಕಲ್
Updated By: Skanda

Updated on: Apr 23, 2021 | 7:09 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಓಪನರ್ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಅದ್ಭುತ ದೇಶೀಯ ಫಾರ್ಮ್ ಅನ್ನು ಐಪಿಎಲ್​ನಲ್ಲಿ ಮುಂದುವರೆಸಿದ್ದಾರೆ. ಮುಂಬೈನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಶತಕವನ್ನು ಗಳಿಸಿ ಮಿಂಚಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದ ಪಡಿಕಲ್ ಆರಂಭದ ಪಂದ್ಯವನ್ನು ಆಡಲಾಗಲಿಲ್ಲ. ನಂತರದ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಡಿಕಲ್​ ಹೇಳಿಕ್ಕೊಳ್ಳುವಂತಹ ಇನ್ನಿಂಗ್ಸ್ ಆಡಿರಲಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಪಡಿಕಲ್ ಅಬ್ಬರಿಸಲೇಬೇಕಾದ ಅವಶ್ಯಕತೆ ಇತ್ತು.

ಆರಂಭದಿಂದಲೂ ರಾಜಸ್ಥಾನ್ ಬೌಲರ್‌ಗಳ ಮೇಲೆ ದಾಳಿ
ಪಡಿಕ್ಕಲ್ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭದಿಂದಲೂ ರಾಜಸ್ಥಾನ್ ಬೌಲರ್‌ಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಶ್ರೇಯಾಸ್ ಗೋಪಾಲ್ ವಿರುದ್ಧ ಬ್ಯಾಕ್​ ಟು ಬ್ಯಾಕ್​ ಬೌಂಡರಿಗಳನ್ನು ಬಾರಿಸುವ ಮೂಲಕ ಅಪಾಯಕಾರಿಯಾಗುವ ಸೂಚನೆ ನೀಡಿದರು. ಪಾಡಿಕ್ಕಲ್ 17 ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ಇನ್ನಿಂಗ್ಸ್‌ನ 51 ನೇ ಎಸೆತದಲ್ಲಿ ಶತಕ ಗಳಿಸಿದರು. ಅವರ ಇನ್ನಿಂಗ್ಸ್​ನಲ್ಲಿ 9 ಬೌಂಡರಿಗಳು ಮತ್ತು 6 ಸಿಕ್ಸರ್​ಗಳು ಸೇರಿಕೊಂಡು ಶತಕದ ದಾರಿಗೆ ನೆರವಾದವು.

2 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ ಪಡಿಕ್ಕಲ್ ಕೈ ಬಿಡಲಿಲ್ಲ ಕೊಹ್ಲಿ!
ಹೈದರಾಬಾದ್ ಮತ್ತು ಕೊಲ್ಕತ್ತಾ ವಿರುದ್ಧ ದೇವದತ್ ಪಡಿಕ್ಕಲ್, ನಾಯಕ ಕೊಹ್ಲಿ ಜತೆ ಉತ್ತಮ ಆರಂಭ ಒದಗಿಸಿರಲಿಲ್ಲ. ಹಾಗಂತ ವಿರಾಟ್ ಪಡಿಕ್ಕಲ್ ಮೇಲಿನ ನಂಬಿಕೆ ಕಳೆದುಕೊಂಡಿರಲಿಲ್ಲ. ಈ ಹುಡುಗ ಆರ್​ಸಿಬಿ ಆಸ್ತಿ ಅನ್ನೋದನ್ನು ತಿಳಿದಿದ್ದ ವಿರಾಟ್, ರಾಜಸ್ಥಾನ್ ವಿರುದ್ಧವೂ ಪಡಿಕ್ಕಲ್ ಜೊತೆಯಲ್ಲೇ ಇನಿಂಗ್ಸ್ ಆರಂಭಿಸಿದ್ರು. ಪಂದ್ಯಕ್ಕೂ ಮುನ್ನ ಪಡಿಕ್ಕಲ್ ತಾವಾಡಿದ ಮಾತಿನಂತೆ, ಕೊಹ್ಲಿ ಜೊತೆಗೆ ಅಜೇಯನಾಗುಳಿದು ದಾಖಲೆ ಬರೆದಿದ್ದಾರೆ.

ಐಪಿಎಲ್​ನಲ್ಲಿ ಶತಕ ಸಿಡಿಸಿದ ಅನ್​ಕ್ಯಾಪಡ್ ಪ್ಲೇಯರ್ ಪಡಿಕ್ಕಲ್!
ಇನ್ನು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡೋದಕ್ಕಿಂತ ಮುಂಚೆಯೇ ಐಪಿಎಲ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಸಾದನೆ ಮಾಡಿದ ಭಾರತದ ಮೂರನೇ ಯುವ ಆಟಗಾರ ಅನ್ನೋ ಹಿರಿಮೆಯನ್ನ ತನ್ನದಾಗಿಸಿಕೊಂಡಿದ್ದಾನೆ. ಇದಕ್ಕೂ ಮುನ್ನ 2011ರಲ್ಲಿ ಪಂಜಾಬ್ ತಂಡದ ಪೌಲ್ ವೆಲ್ತಾಟಿ ಮತ್ತು 2009ರಲ್ಲಿ ಆರ್​ಸಿಬಿ ತಂಡದಲ್ಲಿದ್ದ ಮನಿಷ್ ಪಾಂಡೆ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಕಡೆಗೂ ಕನ್ನಡಿಗ ದೇವದತ್ ಪಡಿಕ್ಕಲ್, ಚೊಚ್ಚಲ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಆಟಗಾರ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಪಡಿಕ್ಕಲ್ ಐಪಿಎಲ್ 2020 ರಲ್ಲಿ ಆರ್‌ಸಿಬಿಯ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದು, 15 ಪಂದ್ಯಗಳಿಂದ 473 ರನ್ ಗಳಿಸಿದ್ದಾರೆ. ಅದರಲ್ಲಿ ಐದು ಅರ್ಧಶತಕಗಳು ಒಳಗೊಂಡಿವೆ. ಯುವ ಓಪನರ್ ಕೊನೆಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆರು ಪಂದ್ಯಗಳಲ್ಲಿ ಸರಾಸರಿ 43.60 ರನ್ ಗಳಿಸಿ 218 ರನ್, ಮತ್ತು ವಿಜಯ್ ಹಜಾರೆ ಟ್ರೋಫಿಯ ಏಳು ಪಂದ್ಯಗಳಲ್ಲಿ 737 ರನ್ ಗಳಿಸಿದ್ದರು.

15 ಪಂದ್ಯಗಳಲ್ಲಿ 473 ರನ್
20 ರ ಹರೆಯದ ಈ ಆಟಗಾರ ಕಳೆದ ಋತುವಿನಲ್ಲಿ ಆರ್‌ಸಿಬಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗಿದ್ದು, 15 ಪಂದ್ಯಗಳಲ್ಲಿ 473 ರನ್ ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಏಳು ಇನ್ನಿಂಗ್ಸ್‌ಗಳಲ್ಲಿ 747 ರನ್ ಗಳಿಸುವ ಮೂಲಕ ದೇಶೀಯ ಕ್ರಿಕೆಟ್​ನಲ್ಲಿ ಮಿಂಚಿದ್ದರು. ಜೊತೆಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ್ದರು.

ನಾನು 100 ಪ್ರತಿಶತ ಸಿದ್ಧನಾಗುತ್ತೇನೆ
ಪಡಿಕ್ಕಲ್ ಅವರು 2019 ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಭಾಗವಾಗಿದ್ದರು, ಆದರೆ ಅವರು ಒಂದೇ ಒಂದು ಆಟವನ್ನು ಆಡಲಿಲ್ಲ. ಆದಾಗ್ಯೂ, ಅದು ಅವರ ಚೈತನ್ಯವನ್ನು ತಡೆಯಲಿಲ್ಲ. ಕಳೆದ ಋತುವಿನಲ್ಲಿ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ ಪಡಿಕ್ಕಲ್ ಈ ಹಿಂದೆ ಹೇಳಿದ್ದು ಹೀಗೆ. ನನಗೆ (ಆರ್​ಸಿಬಿಗೆ) ಆಡಲು ಅವಕಾಶ ಸಿಕ್ಕಾಗಲೆಲ್ಲಾ ನಾನು 100 ಪ್ರತಿಶತ ಸಿದ್ಧನಾಗುತ್ತೇನೆ ಎಂದು ನನಗೆ ತಿಳಿದಿತ್ತು. ನನಗೆ ಅವಕಾಶ ಸಿಕ್ಕ ಕೂಡಲೇ ಪರಿಣಾಮಕಾರಿಯಾಗಿ ಆಡಲು ಸಾಧ್ಯವಾಯಿತು ಎಂದು ಹೇಳಿದ್ದರು.

ವಿರಾಟ್ ಕೊಹ್ಲಿ ಮತ್ತು ಎ.ಬಿ. ಡಿವಿಲಿಯರ್ಸ್ ಅವರೊಂದಿಗಿನ ಬ್ಯಾಟಿಂಗ್, ಕ್ರಿಕೆಟಿಗನಾಗಿ ಬೆಳೆಯಲು ಸಹಾಯ ಮಾಡಿದೆ ಎಂದು ಪಡಿಕ್ಕಲ್ ಹೇಳಿದ್ದರು. ಅವರಿಗೆ ತುಂಬಾ ಅನುಭವವಿದೆ, ಅವರು ತಮ್ಮ ಬ್ಯಾಟಿಂಗ್ ಮೂಲಕ ನಮಗೆ ಸಹಾಯ ಮಾಡುತ್ತಾರೆ, ಮತ್ತು ಇದು ನಮ್ಮ ಕೆಲಸವನ್ನು ಹೆಚ್ಚು ಸುಲಭಗೊಳಿಸುತ್ತದೆ ಎಂದಿದ್ದರು.

Published On - 7:05 am, Fri, 23 April 21