IPL 2021: ಆರ್​ಸಿಬಿಗೆ ವಿಲನ್ ಆದ ಹರ್ಷಲ್ ಪಟೇಲ್! ಕಡೆಯ ಓವರ್​ನಲ್ಲಿ ಕೊಟ್ಟಿದ್ದು ಬರೋಬ್ಬರಿ 37 ರನ್

IPL 2021: 19ನೇ ಓವರ್​ ಮುಕ್ತಾಯಕ್ಕೆ ಚೆನ್ನೈ 154 ರನ್​ಗಳಿಸಿತ್ತು. ಇಲ್ಲಿಯವರೆಗೂ ಪಂದ್ಯ ಆರ್ಸಿಬಿ ಹಿಡಿತದಲ್ಲೇ ಇತ್ತು. ಆದರೆ ಕಡೆಯ ಓವರ್ ಎಸೆಯಲು ಬಂದ ಹರ್ಷಲ್ ಜಡೇಜಾ ಅವರಿಗೆ ಸುಲಭ ತುತ್ತಾದರು.

IPL 2021: ಆರ್​ಸಿಬಿಗೆ ವಿಲನ್ ಆದ ಹರ್ಷಲ್ ಪಟೇಲ್! ಕಡೆಯ ಓವರ್​ನಲ್ಲಿ ಕೊಟ್ಟಿದ್ದು ಬರೋಬ್ಬರಿ 37 ರನ್
ರವೀಂದ್ರ ಜಡೇಜಾ 2008 ರಿಂದ ಐಪಿಎಲ್ ಆಡುತ್ತಿದ್ದಾರೆ ಆದರೆ ಅವರ ಆಟವು ಕಳೆದ ಋತುವಿನಿಂದ ಅದ್ಭುತವಾದ ಜಿಗಿತವನ್ನು ತೋರಿಸಿದೆ. ಬೌಲಿಂಗ್ ಜೊತೆಗೆ, ಅವರು ಈಗ ಬ್ಯಾಟಿಂಗ್‌ನಲ್ಲಿ ಚತುರತೆಯನ್ನು ಹೊಂದಿದ್ದಾರೆ ಮತ್ತು ಅಂಕಿಅಂಶಗಳು ಕೂಡ ಇದಕ್ಕೆ ಸಾಕ್ಷಿಯಾಗಿದೆ. ಕಳೆದ ಋತುವಿನಲ್ಲಿ ಅವರು ಚೆನ್ನೈ ಪರ 14 ಪಂದ್ಯಗಳಲ್ಲಿ 232 ರನ್ ಗಳಿಸಿದ್ದರು. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 171.85 ಮತ್ತು ಸರಾಸರಿ ರನ್-ಸ್ಕೋರಿಂಗ್ ಸರಾಸರಿ 46.40 ಆಗಿತ್ತು. ಐಪಿಎಲ್ 2021 ರಲ್ಲಿ, ಜಡೇಜಾ ಇದುವರೆಗೆ 10 ಪಂದ್ಯಗಳಲ್ಲಿ 59.66 ರ ಸರಾಸರಿಯಲ್ಲಿ 149.72 ಸ್ಟ್ರೈಕ್ ರೇಟ್ ನಲ್ಲಿ 179 ರನ್ ಗಳಿಸಿದ್ದಾರೆ.
Follow us
ಪೃಥ್ವಿಶಂಕರ
|

Updated on: Apr 25, 2021 | 5:57 PM

ಇಂದು ನಡೆಯುತ್ತಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಡು ಪ್ಲೆಸಿಸ್ ಹಾಗೂ ಜಡೇಜಾ ಅವರ ಅಬ್ಬರದ ಬ್ಯಾಟಿಂಗ್​ನಿಂದಾಗಿ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 191 ರನ್​ಗಳಿಸಿದೆ. ಆರ್ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್​ ಪಡೆದರೆ, ಚಹಲ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

19ನೇ ಓವರ್ವರೆಗೂ ಆರ್ಸಿಬಿ ಪರವಿದ್ದ ಪಂದ್ಯಕ್ಕೆ ವಿಲನ್ ಆಗಿದ್ದು ರವೀಂದ್ರ ಜಡೇಜಾ. ಕೊನೆಯ ಓವರ್ ಎಸೆಯಲು ಬಂದ ಹರ್ಷಲ್ ಪಟೇಲ್ ಎಸೆತಗಳನ್ನು ಸಿಕ್ಸರ್​ಗೆ ಅಟ್ಟಲು ಶುರು ಮಾಡಿದ್ದರು. ಇದರ ಫಲವಾಗಿ ಚೆನ್ನೈ ಕೊನೆಯ ಓವರ್​ ಸಹಾಯದಿಂದ 191 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿತು. ತಾನು ಎಸೆದ 3 ಓವರ್​ಗಳಲ್ಲಿ ಉತ್ತಮ ಸ್ಪೆಲ್ ಮಾಡಿದ್ದ ಹರ್ಷಲ್ ಕೊನೆಯ ಓವರ್​ನಲ್ಲಿ ಎಡವಿದರು. ಸಾಲದೆಂಬಂತೆ ಕೊನೆಯ ಓವರ್​ನಲ್ಲಿ ಒಂದು ನೋಬಾಲ್ ಸಹ ಎಸೆದರು.

ಅಂತಿಮ ಓವರ್​ನಲ್ಲಿ ಚೆನ್ನೈ 37 ರನ್ 19ನೇ ಓವರ್​ ಮುಕ್ತಾಯಕ್ಕೆ ಚೆನ್ನೈ 154 ರನ್​ಗಳಿಸಿತ್ತು. ಇಲ್ಲಿಯವರೆಗೂ ಪಂದ್ಯ ಆರ್ಸಿಬಿ ಹಿಡಿತದಲ್ಲೇ ಇತ್ತು. ಆದರೆ ಕಡೆಯ ಓವರ್ ಎಸೆಯಲು ಬಂದ ಹರ್ಷಲ್ ಜಡೇಜಾ ಅವರಿಗೆ ಸುಲಭ ತುತ್ತಾದರು. ಎಸೆತ ಮೊದಲ ಬಾಲ್​ನಿಂದ 3ನೇ ಎಸೆತಗಳವರೆಗೂ ಜಡೇಜಾ ಅಷ್ಟು ಎಸೆತಗಳನ್ನು ಸಿಕ್ಸರ್​ಗೆ ಅಟ್ಟಿದರು. ಇದು ಸಾಲದೆಂಬಂತೆ ಹರ್ಷಲ್ 3ನೇ ಎಸೆತವನ್ನು ನೋಬಾಲ್ ಎಸೆದರು. ಜಡೇಜಾ ಈ ಎಸೆತಕ್ಕೆ ಸಿಕ್ಸರ್​ ಬಾರಿಸಿದರು. ಫ್ರೀ ಹಿಟ್​ ಆಗಿದ್ದ ನಂತರದ ಎಸೆತವನ್ನು ಜಡೇಜಾ ಸೀದಾ ಸಿಕ್ಸರ್​ ಬಾರಿಸಿದರು. 5ನೇ ಎಸೆತವನ್ನು ಡಬಲ್ ಓಡಿದ ಧೋನಿ, ಜಡೇಜಾ, ಅಂತಿಮ ಎಸೆತವನ್ನು ಸಹ ಬೌಂಡರಿ ಬಾರಿಸಿದರು. ಇದರ ಮೂಲಕ ಅಂತಿಮ ಓವರ್​ನಲ್ಲಿ ಚೆನ್ನೈ 37 ರನ್​ ಗಳಿಸಿತು.​

ಆರಂಬದಲ್ಲೇ ಜಡೇಜಾ ಔಟಾಗಬೇಕಿತ್ತು.. ಡು ಪ್ಲೆಸಿಸ್ ವಿಕೆಟ್ ಬಳಿಕ ಮೈದಾನಕ್ಕೆ ಬಂದ ಜಡೇಜಾ ಕೇವಲ 5 ರನ್ ಇದ್ದಾಗಲೇ ಸುಂದರ್ ಬೌಲಿಂಗ್​ನಲ್ಲಿ ಸುಲಭವಾದ ಕ್ಯಾಚ್​ ನೀಡಿದ್ದರು. ಆದರೆ ಸುಲಭವಾದ ಕ್ಯಾಚನ್ನು ಡ್ಯಾನಿಯಲ್ ಕ್ರಿಶ್ಚಿಯನ್ ಹಿಡಿಯುವಲ್ಲಿ ವಿಫಲರಾದರು. ಇದರಿಂದ ತಂಡ ಸರಿಯಾದ ಬೆಲೆಯನ್ನೇ ಕಟ್ಟಬೇಕಾಯ್ತು. ಜೀವದಾನ ಪಡೆದ ಜಡೇಜಾ ಅರ್ಧ ಶತಕವನ್ನು ಬಾರಿಸಿದರು. ಅಂತಿಮವಾಗಿ ಜಡೇಜಾ ಔಟಾಗದೆ ಕೇವಲ 28 ಎಸೆತಗಳಲ್ಲಿ 62 ರನ್​ಗಳಿಸಿ ಆರ್ಸಿಬಿ ಪಾಲಿಗೆ ವಿಲನ್ ಆದರು. ಜೊತೆಗೆ ತಂಡದಲ್ಲಿದ್ದುಕೊಂಡೆ ಹರ್ಷಲ್ ಪಟೇಲ್ ಆರ್ಸಿಬಿಯ ಸುಲಭ ಗೆಲುವಿಗೆ ತೊಡಕಾಗಿದ್ದಾರೆ.

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ